Site icon Vistara News

ಎಸ್‌ಎಸ್‌ಎಲ್‌ಸಿ-ಪಿಯುಗೆ ಇನ್ಮುಂದೆ ಒಂದೇ ಮಂಡಳಿ; ವಿಲೀನ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ

ಅಮಾನತು

| ಸವಿತಾ ರಾಮಚಂದ್ರ, ಬೆಂಗಳೂರು
ಹಲವು ವರ್ಷಗಳಿಂದ ರಾಜ್ಯ ಸರ್ಕಾರದ ಮುಂದಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ವಿಲೀನ ಪ್ರಸ್ತಾವನೆ ಈ ಬಾರಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ. ಈ ಸಂಬಂಧ ಸರ್ಕಾರವು ಮಸೂದೆಯನ್ನು ರೂಪಿಸಿದ್ದು, ಇದೇ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿದೆ.

2017ರಲ್ಲಿ ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಎರಡೂ ಪರೀಕ್ಷೆಗಳಿಗೆ ಒಂದೇ ಮಂಡಳಿಯನ್ನು ಜಾರಿಗೆ ತರುವ ಪ್ರಸ್ತಾಪ ಇಟ್ಟಿದ್ದರು. 2018ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ಮಂಡಳಿ ರಚನೆಗೆ 50 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಈ ಹಿಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಕೂಡ ಎರಡೂ ಮಂಡಳಿಗಳ ವಿಲೀನಕ್ಕೆ ಮುಂದಾಗಿದ್ದರು.

ಇದನ್ನೂ ಓದಿ | Convocation | ಪ್ರಥಮ ರ‍್ಯಾಂಕ್‌ ಪಡೆದ ಅವಳಿ ಮಕ್ಕಳ ತಾಯಿ; ಅಭೂತಪೂರ್ವ ಸಾಧನೆ

ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಕೆಎಸ್‌ಇಇಬಿ) ಮತ್ತು ಪಿಯು ಪರೀಕ್ಷೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ (ಡಿಪಿಯುಇ) ನಡೆಸುತ್ತಿವೆ. ಎರಡೂ ಮಂಡಳಿಗಳು ಹೆಚ್ಚು ಕಡಿಮೆ ಒಂದೇ ಮಾದರಿಯನ್ನು ಪರೀಕ್ಷೆಗೆ ಅನುಸರಿಸುತ್ತಿದ್ದರೂ ಎರಡೂ ಮಂಡಳಿಗಳು ಪ್ರತ್ಯೇಕವಾಗಿ ಒಂದಷ್ಟು ಕೋಟಿಗಳನ್ನು ಖರ್ಚು ಮಾಡುತ್ತಿವೆ. ಆದ್ದರಿಂದ ವೆಚ್ಚ ಕಡಿತ ಭಾಗವಾಗಿ ಕೆಲ ಸರ್ಕಾರಿ ಇಲಾಖೆಗಳನ್ನು ವಿಲೀನ ಮಾಡಿದ ರೀತಿಯಲ್ಲಿ ಎರಡು ಶಿಕ್ಷಣ ಮಂಡಳಿಗಳನ್ನು ಒಂದೇ ಮಂಡಳಿ ಮಾಡಲು ನಿರ್ಧರಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಒಂದೇ ಮಂಡಳಿ ಇದೆ. ಹೀಗಾಗಿ ಹಲವು ಆಯಾಮದಲ್ಲಿ ಯೋಚಿಸಿ ರಾಜ್ಯ ಸರ್ಕಾರ ʼಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿʼ ಎಂಬ ಒಂದೇ ಪರೀಕ್ಷಾ ಮಂಡಳಿ ರಚಿಸಲಾಗುತ್ತದೆ ಎನ್ನಲಾಗಿದ್ದು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಯನ್ನು ವಿಲೀನ ಮಾಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ-1966 ತಿದ್ದುಪಡಿಗೆ ಮಸೂದೆ ಸಿದ್ಧವಾಗಿದ್ದು, ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

ಹೊಸ ಮಂಡಳಿ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಇದನ್ನೂ ಓದಿ | Assault | ಹಾಸ್ಟೆಲ್‌ ಅಡುಗೆ ಸಿಬ್ಬಂದಿಯಿಂದ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ; ದಿನವೂ ದೌರ್ಜನ್ಯ ಆರೋಪ

Exit mobile version