ಬೆಂಗಳೂರು: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಇನ್ನು ಮುಂದೆ ಖಾಸಗಿ ಪದವಿ ಕಾಲೇಜುಗಳಲ್ಲೂ ಸರ್ಕಾರಿ ಕೋಟಾದಡಿ ಸೀಟು ಹಂಚಿಕೆ (Govt Quota Seats) ಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಬಡ ವಿದ್ಯಾರ್ಥಿಗಳಿಗೆ ಬಿಎ, ಬಿಎಸ್ಸಿ, ಬಿ.ಕಾಂ ಸೇರಿ ಇನ್ನಿತರ ಪದವಿ ಕೋರ್ಸ್ ವ್ಯಾಸಂಗ ಮಾಡಲು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲೂ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ ಶೇ.40 ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್‌ಗಳನ್ನ ಸರ್ಕಾರಕ್ಕೆ ಪಡೆಯಲು ಮುಂದಾದ ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100ಕ್ಕೆ 100 ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟ್ ದಾಖಲಾತಿ ಇತ್ತು. ಖಾಸಗಿ ಕೋಟಾದಡಿಯೇ ಪದವಿ ದಾಖಲಾತಿ ಪಡೆಯುತ್ತಿದ್ದರು. ಹೀಗಾಗಿ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡ್ತಾ ಇದ್ದರು.
ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ ಶೇ.40 ಸರ್ಕಾರಿ ಕೋಟಾದ ಸೀಟ್ ಗಳನ್ನು ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್‌ಗಳನ್ನ ಕೆಇಎ ಅಥವಾ ಕಾಮೆಡ್ ಕೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Anganawadi workers: ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದ ಅಂಗನವಾಡಿ ಶಿಕ್ಷಕಿ, ಸಹಾಯಕಿ ವಜಾ!
NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ
ಬೆಂಗಳೂರು: ಯುಜಿನೀಟ್-2024ಕ್ಕೆ (NEET UG 2024) ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಸೂಚಿಸಿದೆ.
ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅಭ್ಯರ್ಥಿಗಳು ಹಾಗೂ ಒಸಿಐ/ ಪಿಐಒ / ಎನ್ ಆರ್ ಐ / ವಿದೇಶ ಪ್ರಜೆ ಅಭ್ಯರ್ಥಿಗಳು ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ | Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ
ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳ ಬಗ್ಗೆ ತಿಳಿಯಲು ಯುಜಿ ನೀಟ್-2024 ಮಾಹಿತಿ ಪುಸ್ತಕ ನೋಡಬಹುದು ಎಂದು ಹೇಳಲಾಗಿದೆ. ಆ.7ರಿಂದ 9ರವರೆಗೆ ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದಿದ್ದವರು ಕೂಡ ಈ ಮೇಲಿನ ದಿನಗಳಂದು ಭೇಟಿ ಕೊಡಬಹುದು ಎಂದು ತಿಳಿಸಲಾಗಿದೆ.