ಬೆಂಗಳೂರು: ರಾಜ್ಯದ ಮೀಸಲು ನೀತಿಯನ್ನು (Reservation) ಪರಿಷ್ಕರಿಸಿ ಹೊಸ ಸಂಚಲನ ಸೃಷ್ಟಿಸಿರುವ ಸರ್ಕಾರ ಇದರ ನಡುವೆಯೇ ಇನ್ನೊಂದು ಮಾಸ್ಟರ್ ಸ್ಟ್ರೋಕ್ ನೀಡಿದೆ. ಕುರುಬ ಸಮುದಾಯದ ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಲಾಗಿದ್ದು, ಅದನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕುರುಬರ ಹಿತಕಾಯಲು ಮತ್ತು ಓಲೈಸಲು ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ರಾಜ್ಯದಲ್ಲಿನ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಕುರುಬ ಸಮುದಾಯದ ಸಂಘಗಳು ಅರ್ಜಿ ಸಲ್ಲಿಸಿದ್ದವು. ಇದರ ಜತೆಗೆ ಸಮುದಾಯ ಬುಡಕಟ್ಟು ಲಕ್ಷಣಗಳನ್ನು ಹೊಂದಿದ ಹಿನ್ನೆಲೆಯಲ್ಲಿ ಮಹತ್ವದ ಅಧ್ಯಯನದ ಬಳಿಕ ಈ ಶಿಫಾರಸು ಮಾಡುತ್ತಿರುವುದಾಗಿ ಅದು ಹೇಳಿದೆ.
ಎಸ್‌ಟಿ ಸ್ಥಾನಮಾನಕ್ಕೆ ಐದು ಮಾನದಂಡಗಳು
ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಅದರ ವರದಿಯನ್ನು ಪರಿಶೀಲಿಸಿದ ನಂತರ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸುತ್ತಿದೆ.
ಭಾರತ ಸರ್ಕಾರದ ಪಂಗಡಗಳ ಕಲ್ಯಾಣ ಇಲಾಖೆಯು ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸಲು ಕೈಗೊಳ್ಳುವ ಮೌಲ್ಯಮಾಪನ ಪುಕ್ರಿಯೆಯಲ್ಲಿ ಲೋಕುರ್ ಸಮಿತಿಯ ಮಾನದಂಡಗಳನ್ನು ಅನುಸರಿಸುತ್ತದೆ.
- ಗುಣಲಕ್ಷಣ
2. ವಿಶಿಷ್ಟ ಸಂಸ್ಕೃತಿ
3. ಭೌಗೋಳಿಕ ಪ್ರತ್ಯೇಕತೆ
4. ನಾಚಿಕೆ ಮತ್ತು ಅಂಜಿಕೆ ಸ್ವಭಾವ
5. ಹಿಂದುಳಿದಿರುವಿಕೆ
ಎಂಬ ಐದು ಅಂಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಲಾಗಿದೆ. ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ರಾಜ್ಯದ 25 ಜಿಲ್ಲೆಯ 50 ತಾಲ್ಲೂಕುಗಳಲ್ಲಿನ 102 ಹಳ್ಳಿಗಳಲ್ಲಿ ಅಧ್ಯಯನವನ್ನು ನಡೆಸಿ, ಕುರುಬ ಸಮುದಾಯದ ಬಗ್ಗೆ ಲಭ್ಯವಿರುವ ಮತ್ತು ಸಂಗ್ರಹಿಸಿರುವ ದತ್ತಾಂಶಗಳ ಆಧಾರದ ಮೇಲೆ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸಿದ್ಧಪಡಿಸಿ ಮಾರ್ಚ್ 23ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದರಲ್ಲಿ ರಾಜ್ಯದ ಐದು ಜಿಲ್ಲೆಗಳನ್ನು ಅಧ್ಯಯನಕ್ಕೆ ಒಳಪಡಿಸಿಲ್ಲ. ಏಕೆಂದರೆ, ಕೇಂದ್ರ ಸರ್ಕಾರಕ್ಕೆ ಈಗಾಗಲೇ ಎರಡು ವರದಿಗಳನ್ನು ಸಲ್ಲಿಸಲಾಗಿರುತ್ತದೆ. ಒಂದು ಕೊಡಗು ಜಿಲ್ಲೆಯ ಕಾಡು-ಕುರುಬರು ಮತ್ತು ಇನ್ನೊಂದು ಬೀದರ್, ಕಲಬುರಗಿ, ಯಾದಗಿರಿಯ ಗೊಂಡ-ಕುರುಬರ ಬಗ್ಗೆ ಹಾಗೂ ಕಾಸ್ರೋಪಾಲಿಟನ್ ಸಂಸ್ಕೃತಿಯ ಬೆಂಗಳೂರು ನಗರ ಜಿಲ್ಲೆಯನ್ನೂ ಅಧ್ಯಯನಕ್ಕೆ ಒಳಪಡಿಸಿಲ್ಲ.
ಕುಲಶಾಸ್ತ್ರೀಯ ಅಧ್ಯಯನ ವರದಿಯು ಐದು ಅಧ್ಯಾಯಗಳನ್ನು ಹೊಂದಿರುತ್ತದೆ. ಇದು ಕುರುಬ ಸಮುದಾಯದ ಹುಟ್ಟು, ನಂಬಿಕೆ, ಆಚರಣೆ, ಕಲೆ, ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳು ಇತ್ಯಾದಿ ಬಗ್ಗೆ ಹೇಳುತ್ತದೆ. ಕರ್ನಾಟಕದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಲು ಕುರುಬ ಸಮುದಾಯ ಅರ್ಹತೆಯನ್ನು ಹೊಂದಿದೆ ಎಂದು ವರದಿ ತೀರ್ಮಾನಿಸಿರುತ್ತದೆ. ಸದರಿ ವರದಿಯು ಪ್ರಾಥಮಿಕ ದೃಷ್ಟಿಯಲ್ಲಿ ಲೋಕುರ ಸಮಿತಿಯು ತಿಳಿಸಿದ ಮೊದಲ ನಾಲ್ಕು ಸಚಿವ ಸಂಪುಟದ ಈ ಹಿನ್ನೆಲೆಯಲ್ಲಿ ಮಾನದಂಡಗಳನ್ನು ದೃಢವಾಗಿ ಸ್ಥಾಪಿಸಿರುವುದಿಲ್ಲ. ನಿರ್ದೇಶನವನ್ನು ಕೋರಿ ಸದರಿ ವರದಿಯನ್ನು ಸಲ್ಲಿಸಿದೆ. ಆದರೆ, ಐದನೆ ಮಾನದಂಡವಾದ ಬಗ್ಗೆ ವರದಿಯಲ್ಲಿ ಹಿಂದುಳಿದಿರುವಿಕೆ ಉಳಿದ ಇತರೆ ಮಾನದಂಡಗಳ ಮನವರಿಕೆಯಾಗುವಂತೆ ತಿಳಿಸಿರುವುದಿಲ್ಲ. ಆದ ಕಾರಣ, ಸದರಿ ವರದಿಯ ಮೇಲೆ ವಿವರವಾದ ಪರಿಶೀಲನೆ ಮತ್ತ ಅಧ್ಯಯನದ ಅವಶ್ಯಕತೆ ಹಾಗೂ ಈ ಕ್ಷೇತ್ರದಲ್ಲಿನ ಪರಿಣಿತರ ಸಮಾಲೋಚನೆ ಅಗತ್ಯವಿರುತ್ತದೆ. ಹೊರತುಪಡಿಸಿ ಆದ್ದರಿಂದ, ಸದರಿ ವರದಿಯ ಆಳವಾದ ಅಧ್ಯಯನ ಮತ್ತು ಸಂಬಂಧಪಟ್ಟ ಇತರೆ ಸಂಸ್ಥೆಗಳೊಂದಿಗೆ ಸಮಾಲೋಚನೆಯ ನಂತರ ಮೂಲ ವರದಿಯನ್ನು ಅಥವಾ ಮಾರ್ಪಡಿಸಿದ ರೂಪದಲ್ಲಿ ಭಾರತ ಸರ್ಕಾರಕ್ಕೆ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಮಾಡಲು ಕಳುಹಿಸುವ ಬಗ್ಗೆ ಸಚಿವ ಸಂಪುಟದ ನಿರ್ದೇಶನವನ್ನು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Reservation : ಎಸ್ಸಿ ಒಳಮೀಸಲಾತಿಗೆ ಸಂಪುಟ ಅಸ್ತು, ಅಲ್ಪಸಂಖ್ಯಾತರಿಗೆ ಇನ್ನು EWSನಲ್ಲಿ ಮಾತ್ರ ಅವಕಾಶ