Site icon Vistara News

ಜೂನ್‌ 13ಕ್ಕೆ ಶಿಕ್ಷಕರು, ಪದವೀಧರ ಕ್ಷೇತ್ರದ ಚುನಾವಣೆ: ಅರ್ಹ ಮತದಾರರಿಗೆ ಗುಡ್‌ ನ್ಯೂಸ್‌

election

ಬೆಂಗಳೂರು :  ಜೂನ್‌ 13, ಸೋಮವಾರದಂದು ಕರ್ನಾಟಕ ವಿಧಾನ ಪರಿಷತ್ತಿನ ಒಟ್ಟು 4 ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈ ಹಿನ್ನಲೆ ಅಂದು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನಿತ ರಹಿತ ವಿದ್ಯಾ ಸಂಸ್ಥೆಗಳು ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ರಜೆ ಘೋಷಿಸಲಾಗಿದೆ. ಅದರಂತೆ ಮತ ಚಲಾಯಿಸಲಿರುವರಿಗೆ ಸೋಮವಾರ ಅಂದರೆ ದಿನಾಂಕ 13,06,2022 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನು ಓದಿ|ರಾಜ್ಯಸಭೆ ಚುನಾವಣೆ | ಬಿಜೆಪಿ ಅಭ್ಯರ್ಥಿ ಗೆದ್ದಾಯಿತು ಎಂದು HDK ಘೋಷಣೆ ಮಾಡಿದ್ದು ಏಕೆ?

ಎಲ್ಲೆಲ್ಲಿ ಚುನಾವಣೆ?

ಕರ್ನಾಟಕ ವಾಯವ್ಯ ಪದವೀಧರರು, ಶಿಕ್ಷಕರ ಕ್ಷೇತ್ರವಾದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು, ದಕ್ಷಿಣ ಪದವೀಧರರು, ಶಿಕ್ಷಕರ ಕ್ಷೇತ್ರವಾದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ವ್ಯಾಪ್ತಿಗೆ ಒಳಪಟ್ಟ ಅರ್ಹ ಮತದಾರರು ರಜೆ ಪಡೆದುಕೊಳ್ಳಬಹುದಾಗಿದೆ.

Exit mobile version