Site icon Vistara News

Grama vastavya | ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಸಚಿವ ಅಶೋಕ್;‌ ಮಕ್ಕಳೊಂದಿಗೆ ಗಿಡ ನೆಟ್ಟರು, ಗ್ರಾಮ ಸಭೆ ನಡೆಸಿದರು

R ashok grama vastavya

ಹಾವೇರಿ: ಮುಖ್ಯಮಂತ್ರಿ ತವರು ಜಿಲ್ಲೆಯ ತವರು ಕ್ಷೇತ್ರ ಶಿಗ್ಗಾಂವಿಗೆ ಸೇರಿದ, ಶ್ರೇಷ್ಠ ಸಂತ ಕನಕದಾಸ ಜನ್ಮ ಸ್ಥಳವಾದ ಬಾಡದಲ್ಲಿ ಕಂದಾಯ ಸಚಿವ ಆರ್.‌ ಅಶೋಕ್‌ ಅವರು ಶನಿವಾರ (ಡಿ.೧೭) ೧೩ನೇ ಗ್ರಾಮ ವಾಸ್ತವ್ಯ (Grama vastavya) ಮಾಡಿದ್ದು, ಭಾನುವಾರ (ಡಿ.೧೮) ಬೆಳಗ್ಗೆ ದಲಿತರೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿದ್ದಾರೆ.

ಫಕ್ಕಿರಪ್ಪ ಹರಿಜನ ಎಂಬುವವರ ಮನೆಯಲ್ಲಿ ಸಚಿವ ಆರ್‌. ಅಶೋಕ್‌ ಉಪಾಹಾರ ಸೇವಿಸಿದ್ದಾರೆ. ಬಿಸಿ ರೊಟ್ಟಿ, ಹೆಸರುಕಾಳು ಪಲ್ಯ, ಕೆಂಪು ಚಟ್ನಿ, ಅಗಸಿ ಹಿಂಡಿ, ಶೇಂಗಾ ಚಟ್ನಿ, ಮೂಲಂಗಿ ಪಚಡಿ, ಗುರಳ್ಳಿ ಚಟ್ನಿ, ಗಜರಿ ಸೌತೆಕಾಯಿ ಪಚಡಿ, ಉಪ್ಪಿಟ್ಟು, ಮಂಡಕ್ಕಿ , ಟೀಯನ್ನು ಸೇವಿಸಿದ್ದಾರೆ.

ಕಂದಾಯ ಸಚಿವ ಆರ್‌. ಅಶೋಕ್‌ ಅವರು ತಮ್ಮ ಮನೆಗೆ ಆಗಮಿಸಿದ್ದ ಸಂಭ್ರಮದಲ್ಲಿ ಫಕ್ಕಿರಪ್ಪ ಮತ್ತವರ ಕುಟುಂಬದವರು ಸಚಿವರ ಕೈಗೆ ಕಂಕಣ ಕಟ್ಟಿ, ತಿಲಕವಿಟ್ಟು, ಆರತಿ ಬೆಳಗಿದ್ದಾರೆ. ಈ ವೇಳೆ ಸಚಿವರು ಆರತಿ ತಟ್ಟೆಗೆ ಎರಡು ಸಾವಿರ ರೂಪಾಯಿ ಹಾಕಿದರು.

ಇದನ್ನೂ ಓದಿ | Border Dispute | ಎಂಇಎಸ್‌ ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ: ಸಿಎಂ ಬೊಮ್ಮಾಯಿ

ದಲಿತ ಕುಟುಂಬದವರೊಂದಿಗೆ ಕುಳಿತು ಉಪಾಹಾರ ಸೇವನೆ ಮಾಡಿದ ಸಚಿವ ಅಶೋಕ್‌, ರೊಟ್ಟಿ, ಪಲ್ಯಗಳು ಸೇರಿದಂತೆ ಅಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲ ಸಮಯ ಕುಟುಂಬದವರೊಂದಿಗೆ ಚರ್ಚೆ ನಡೆಸಿದರು. ಸರ್ಕಾರದ ಬಗ್ಗೆ, ತಮ್ಮ ಕಾರ್ಯಕ್ರಮಗಳ ಬಗ್ಗೆ ಕೇಳಿ ತಿಳಿದುಕೊಂಡರು.

ವಸತಿ ಶಾಲೆಯಲ್ಲಿ ವಾಸ್ತವ್ಯ
ಕಂದಾಯ ಸಚಿವ ಅಶೋಕ್‌ ಅವರು ಶನಿವಾರ ರಾತ್ರಿ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಮುಂಜಾನೆ ಎದ್ದ ಬಳಿಕ ಶಾಲಾ ಆವರಣದಲ್ಲಿ ಕುಳಿತುಕೊಂಡು ಚಹಾ ಸೇವಿಸಿ, ಪತ್ರಿಕೆಗಳನ್ನು ಓದಿದರು. ಬಳಿಕ ಶಾಲಾ ಆವರಣದಲ್ಲಿ ವಾಕಿಂಗ್ ಮಾಡಿದರು.

ಮಕ್ಕಳೊಂದಿಗೆ ಬೆರೆತ ಸಚಿವ
ವಸತಿ ಶಾಲೆ ಆವರಣದಲ್ಲಿ ಗಿಡ ನೆಟ್ಟ ಸಚಿವ ಆರ್. ಅಶೋಕ್‌, ಮಕ್ಕಳ ಜತೆಗೆ ಶಾಲಾ ಆವರಣದಲ್ಲಿ ಗಿಡ ನೆಟ್ಟು ನಿರೇರೆದರು. ಬಳಿಕ ವಸತಿ ಶಾಲೆ ಮಕ್ಕಳ ಕರಾಟೆ ತರಬೇತಿಯನ್ನು ವೀಕ್ಷಣೆ ಮಾಡಿದರು.

ಗ್ರಾಮ ಸಭೆಯಲ್ಲಿ ಭಾಗಿ
ದಲಿತರ ಮನೆಯಲ್ಲಿ ಉಪಾಹಾರ ಸೇವನೆ ಬಳಿಕ ಬಾಡ ಗ್ರಾಮದ ಹಳ್ಳಿಕಟ್ಟೆಗೆ ಬಂದ ಸಚಿವ ಆರ್.‌ ಅಶೋಕ್‌, ಹಳ್ಳಿಕಟ್ಟೆಯಲ್ಲಿ ಕುಳಿತು ಗ್ರಾಮ ಸಭೆ ನಡೆಸಿದರು. ಊರಿನ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾದರು.

ಇದನ್ನೂ ಓದಿ | PSI Suspend | ಯುವಕನಿಗೆ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದ ಸಿರಿವಾರ ಪಿಎಸ್‌ಐ ಗೀತಾಂಜಲಿ ಅಮಾನತು

Exit mobile version