ಧಾರವಾಡ: ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ಕೆಡವಿ ಮಸೀದಿಯನ್ನು ಕಟ್ಟಿದ್ದರು. ಅದು ಈಗಿರುವ ಮುಸ್ಲಿಮರ ತಪ್ಪಲ್ಲ, ಆಗ ಬಾಬರ್ ಎನ್ನುವವನು ಮಾಡಿದ್ದು. 500 ವರ್ಷದ ತಾಳ್ಮೆಯ ನಂತರ ಇವತ್ತು ಭವ್ಯ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ನಿಮ್ಮ ಮನೆಯಂಗಳದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ ನಿಮ್ಮ ಮನೆ ದೀಪ ಹಚ್ಚುವ ಮೂಲಕ ಭಕ್ತಿ ಮೆರೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದ್ದಾರೆ.
ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ಎಸ್‌ಡಿಎಂ ಸಂಸ್ಥೆ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಮೂಲಕ ರಾಮ ರಾಜ್ಯದ ಕಡೆ ಹೋಗುವ ಸಂಕಲ್ಪವನ್ನು ಮೋದಿ ಮಾಡಿದ್ದಾರೆ. ಉದ್ಘಾಟನೆ ಹಾಗೆಯೇ ಮಾಡುತ್ತಿಲ್ಲ, ಕೇವಲ ಒಂದು ಎಳನೀರು ಕುಡಿದು ವ್ರತ ಮಾಡುತಿದ್ದಾರೆ. ರಾಮ, ಸೀತೆ ಸುತ್ತಿರುವ ಕಡೆ ಮೋದಿ ಅವರು ಹೋಗಿದ್ದಾರೆ. ಇದು ಅಭಿಮಾನ ಮತ್ತು ಸ್ವಾಭಿಮಾನದ ಸಂಗತಿ, ನಿವೆಲ್ಲರೂ ಸಂಭ್ರಮದಲ್ಲಿ ಪಾಲ್ಗೊಳ್ಳಿ ಎಂದ ತಿಳಿಸಿದರು.
ರಾಮನ ಪ್ರತಿಷ್ಠಾಪನೆ ದಿನ ರಜೆ ಕೊಡಬೇಕು
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಯಾವತ್ತೂ ದ್ವಂದ್ವದಲ್ಲಿದೆ. ರಾಮ ಮಂದಿರ ಹೋರಾಟ ಆರಂಭವಾದಾಗಿನಿಂದ ಕಾಂಗ್ರೆಸ್ ಈ ವಿಷಯದಲ್ಲಿ ದ್ವಂದ್ವ ಮತ್ತು ಗೊಂದಲದಲ್ಲಿ ಇದೆ. ಅವರ ಸ್ಥಿತಿ ಯಾಕೆ ಹೀಗೆ ಅಂದರೆ, ಅವರಿಗೆ ಸ್ಪಷ್ಟತೆ ಇಲ್ಲ. ದೇಶದ ಸಮಾಜಕ್ಕಿಂತ ಹೆಚ್ಚು ವೋಟ್ ಬ್ಯಾಂಕ್ ಬಗ್ಗೆ ಅವರು ಯೋಚಿಸುತ್ತಾರೆ. ಅದರ ಪರಿಣಾಮವಾಗಿ ಅಲ್ಲಿ ಹೋದರೆ ಹಂಗೆ, ಇಲ್ಲಿ ಹೋದರೆ ಹಂಗೆ ಎಂಬಂತಾಗಿದೆ ಎಂದ ಅವರು, ನಾಳೆ ರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಜೆ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Ram Mandir: ಅಯೋಧ್ಯೆ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ರಜೆ ಇಲ್ಲ ಎಂದರೇ ಡಿಕೆಶಿ; ಡಿಸಿಎಂ ಹೇಳಿದ್ದೇನು?
ಅವರದು ಕನ್ಫ್ಯೂಸ್ ಪಾರ್ಟಿ ಮತ್ತು ಕನ್ಫ್ಯೂಸ್ ಲೀಡರ್‌ಗಳ ಪಕ್ಷ. ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರನ್ನು ಕೇಳಿ, ರಾಮನ ಪ್ರತಿಷ್ಠಾಪನೆ ನಂತರ ನಿರ್ಣಯ ತೆಗೆದುಕೊಳ್ಳುತ್ತಾರೆ. ಈ ಸ್ಥಿತಿಗೆ ಅವರು ಬಂದಿದ್ದಾರೆ. ದೇಶದಲ್ಲಿ ಅವರ ಮೂರು ಸರ್ಕಾರ ಇವೆ, ಅವು ಕೂಡ ಬರುವ ದಿನದಲ್ಲಿ ಇರಲ್ಲ, ರಾಮನ ಶಾಪ ಅವರಿಗೆ ತಟ್ಟಲಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಗೆ ರಾಮ ಕನಸಲ್ಲಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಅವರಿಗೆ ರಾಮ ಕನಸಲ್ಲಿ ಬಂದಿದ್ದ ಎನ್ನುವುದೇ ಅದ್ಭುತ ಸಂಗತಿ. ರಾಮ ಬಂದು ಸದ್ಬುದ್ಧಿ ಬರಲಿ ಎಂದು ಹೇಳಿರಬೇಕು. ಇಡೀ ಜಗತ್ತಿನಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದಾರೆ, ನೀವ್ಯಾಕೆ ಹುಚ್ಚರಂತೆ ಮಾಡುತ್ತೀರಿ ಎಂದು ಕೇಳಿರಬೇಕು. ಅದನ್ನು ಅವರು ಹೇಗೆ ಹೇಳ್ತಾರೆ ರಾಮನಿಗೂ ಮೋಸ ಮಾಡಿದವರು ಇವರು, ಅವರಿಗೆ ರಾಮನೇ ಸದ್ಬುದ್ಧಿ ಕೊಡಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಕುಮಾರಸ್ವಾಮಿ ಜತೆ ಯಡಿಯೂರಪ್ಪ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಯಡಿಯೂರಪ್ಪನವರು ಕರೆ ಮಾಡಿದ್ದರು, ನಮ್ಮ ರಾಜ್ಯ ಅಧ್ಯಕ್ಷರು ಇದ್ದಾರೆ. ವಿಧಾನ ಪರಿಷತ್ ಚುನಾವಣೆ ಕುರಿತು ಚರ್ಚೆ ಆಗುತ್ತಿದೆ. 6 ಎಂಎಲ್ಸಿ ಸೀಟ್ ಇದ್ದು, ಅದರ ಬಗ್ಗೆ ಸಭೆ ಇದೆ ಎಂದರು.
ಮಂಡ್ಯ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ಅಲ್ಲಿ ಕೂಡ ಚರ್ಚೆ ಇಲ್ಲಾ, ನಾನು ಇಲ್ಲಿ ಹೇಗೆ ಹೇಳಲಿ. ನಮ್ಮ ರಾಷ್ಟ್ರೀಯ ನಾಯಕರ ಜೊತೆ ಸಭೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ | Ram Mandir : ಅಯೋಧ್ಯೆ ರಾಮನಿಗೆ ಬೆಂಗಳೂರಿನಿಂದ ತುಳಸಿ ಹಾರ ರವಾನೆ
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್‌ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಜನವರಿ 31ರವರೆಗೆ ಎಲ್ಲೂ ಗುರುತಿಸಿಕೊಳ್ಳಲ್ಲ ಎಂದಿದ್ದಾರೆ. 31 ಆಗಲಿ ನೋಡೊಣ. ನನ್ನನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲೇ ಉಳಿಯುವ ಮಾತನ್ನು ಅವರು ಹೇಳಿದ್ದಾರೆ. ಈ ರೀತಿಯಾಗಲು ಏನು ಕಾರಣ ಅನ್ನೊದು ಮುನೇನಕೊಪ್ಪಗೆ ಕೇಳಬೇಕು. ನನಗೆ ಪಕ್ಷದಿಂದ ಎಲ್ಲ ಕಡೆ ಕರೆಯುತ್ತಿದ್ದಾರೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಆದರೆ ಅವರು ನನ್ನ ಭೇಟಿ ಮಾಡುತ್ತೇನೆ ಅಂತ ಹೇಳಿದ್ದಾರೆ ಎಂಬುವುದಾಗಿ ಹೇಳಿದ್ದರು.