ಬೆಂಗಳೂರು: ಪಟ್ಟಣಗೆರೆ ಶೆಡ್ ನಂತರ ಮತ್ತೊಂದು ಶೆಡ್‌ನಲ್ಲಿ ಗಲಾಟೆ (Group Clash) ನಡೆದಿರುವುದು ಕಂಡುಬಂದಿದೆ. ಬೊಮ್ಮನಹಳ್ಳಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕಾಗಿ ಗಲಾಟೆ ನಡೆದಿದ್ದು, ಒಂದೇ ಬಣದ ಎರಡು ಗುಂಪುಗಳು ಕೈ ಕೈ ಮಿಲಾಯಿಸಿಕೊಂಡಿವೆ.
ಬೊಮ್ಮನಹಳ್ಳಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬೊಮ್ಮನಹಳ್ಳಿಯ ಮಿಥುನ್ ಮತ್ತು ಮಂಜಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಕೆಪಿಸಿಸಿ ಮಾಜಿ ಸದಸ್ಯ ಶ್ರೀನಿವಾಸ್ ಮೂರ್ತಿ ಹಾಗೂ ಮತ್ತೊಬ್ಬ ಪ್ರಭಾವಿ ನಾಯಕನ ನಡುವೆ ಜಿದ್ದಾಜಿದ್ದಿ ನಡೆದಿದೆ. ಹುಳಿಮಾವು ಮಂಜಪ್ಪ ಪರ ಶ್ರೀನಿವಾಸ್ ಮೂರ್ತಿ ಆ್ಯಂಡ್ ಸನ್ಸ್ ಬ್ಯಾಟಿಂಗ್ ಮಾಡಿದ್ದಾರೆ.
ಯುವ ನಾಯಕ ಮಿಥುನ್ ಪರ ಬಿಜೆಪಿಯ ನಿಖಿಲ್, ಮಧು, ಅಂಬರೀಷ್ ಅಖಾಡಕ್ಕೆ ಇಳಿದು, ಪ್ರಚಾರ ಮಾಡಲು ಶೆಡ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಅಂಬರೀಶ್ ಬರ್ತಡೇ ನೆಪದಲ್ಲಿ ಮಿಥುನ್ ಪರ ವೋಟ್ ಮಾಡುವಂತೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಶ್ರೀನಿವಾಸ್ ಮೂರ್ತಿ ಮಗ ದರ್ಶನ್, ನಿಖಿಲ್ ನಡುವೆ ಗಲಾಟೆ ನಡೆದಿದೆ. ಮಂಜಪ್ಪ ಪರವಾಗಿ ಪ್ರಚಾರ ಮಾಡಬೇಕೆಂದು ದರ್ಶನ್ ಆವಾಜ್ ಹಾಕಿದ್ದಾನೆ. ನಂತರ ಶೆಡ್‌ನಿಂದ ದರ್ಶನ್ ಗ್ಯಾಂಗ್ ಮನೆಗೆ ಹೊರಟಿದೆ. ಇದಾದ ಬಳಿಕ ಮನೆ ಬಳಿ ಕೇಳಲು ಹೋದ ನಿಖಿಲ್, ಮಿಥುನ್, ಅಂಬರೀಶ್ ಮೇಲೆ ಮಾರಕಾಸ್ತ್ರಗಳನ್ನು ಹಿಡಿದು ದರ್ಶನ್ ಗ್ಯಾಂಗ್ ಹಲ್ಲೆಗೆ ಯತ್ನಿಸಿದೆ. ಈ ವೇಳೆ ಎರಡು ಬಣಗಳ ಯುವಕರ ನಡುವೆ ಗಲಾಟೆ ನಡೆದಿದೆ.
ಬಳಿಕ ಸ್ಥಳಕ್ಕೆ ಬಂದ ಪೋಲಿಸರು, ಅಂಬರೀಶ್‌ನನ್ನು ಮಾತ್ರ ವಶಕ್ಕೆ ಪಡೆದಿದ್ದಾರೆ. ಅಂಬರೀಶ್ ಹುಳಿಮಾವು ಠಾಣೆಯ ರೌಡಿಶೀಟರ್ ಎನ್ನಲಾಗಿದೆ. ಅಂಬರೀಶ್‌ನ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ. ಆದರೆ ದರ್ಶನ್ ಗ್ಯಾಂಗ್‌ಗೆ ಪೋಲಿಸರು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Fraud Case: ಅಸಲಿ ಮದುವೆ, ನಕಲಿ ಹೆಣ್ಣು! 3 ವರ್ಷದಲ್ಲಿ 5 ಮದುವೆಯಾಗಿ ವಂಚನೆ; ಮದುಮಗಳು ಮತ್ತು ಗ್ಯಾಂಗ್ ಆರೆಸ್ಟ್
ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳಿಸಿದ ಪ್ರಭಾರಿ ಪ್ರಾಚಾರ್ಯನಿಗೆ ಧರ್ಮದೇಟು
ರಾಯಚೂರು: ರಾಯಚೂರು ನಗರ (Raichur news) ಸಮೀಪದ ಯರಮರಸ್ ಬಳಿಯ ಆದರ್ಶ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯನೊಬ್ಬ (Principal in charge) ತರಬೇತಿಗೆ ಬಂದಿದ್ದ ಶಿಕ್ಷಕಿ ಜತೆ ಅನುಚಿತವಾಗಿ (Misbehave) ವರ್ತಿಸಿದ್ದರಿಂದ ಥಳಿತಕ್ಕೊಳಗಾದ (Beaten) ಘಟನೆ ಸೋಮವಾರ ನಡೆದಿದೆ.
ಮೆಹಬೂಬ್ ಅಲಿ ಎಂಬಾತನೇ ಏಟು ತಿಂದ ಪ್ರಭಾರಿ ಪ್ರಾಚಾರ್ಯ. ಈತ ಶಿಕ್ಷಕಿಯ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದನಲ್ಲದೆ, ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ. ಇದರಿಂದ ನೊಂದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಬಂಧುಗಳು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಚೆನ್ನಾಗಿ ಥಳಿಸಿ ಬುದ್ಧಿ ಕಲಿಸಿದ್ದಾರೆ.
ಇದನ್ನೂ ಓದಿ: Murder Case : ಶೆಡ್ಡಿಗೆ ಬಾರೋ ಎಂದ ಸ್ನೇಹಿತ; ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ
ಪ್ರಭಾರಿ ಪ್ರಾಚಾರ್ಯ ಮೆಹಬೂಬ್ ಅಲಿ, ತಾನು ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆ ಅಥವಾ ಮಹಿಳಾ ಠಾಣೆಯಲ್ಲಾಗಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.