ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿರುವ, ಒಂದು ಮನೆಗೆ 200 ಯುನಿಟ್ ಉಚಿತ ವಿದ್ಯುತ್ (Free Electricity) ನೀಡುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ (Gruhajyothi scheme) ಸಂಬಂಧಿಸಿ ನಾನಾ ಗೊಂದಲಗಳು ಗ್ರಾಹಕರ ಮನಸಿನಲ್ಲಿವೆ. ಇದು ನಮಗೆ ಸಿಗುತ್ತದೆಯೇ ಅಥವಾ ಬರೀ ಕನಸಿನ ಗಂಟೇ? ಬಾಡಿಗೆ ಮನೆಯವರು ಈ ಸೌಲಭ್ಯ ಪಡೆಯಲು ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳು ಜನರ ಮನಸ್ಸಿನಲ್ಲಿವೆ. ಈ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ (BESCOM) ಮಾಡಿದೆ. ಅದು ನೀಡಿರುವ ಪ್ರಶ್ನೋತ್ತರ ಮಾದರಿ ಇಲ್ಲಿದೆ.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟೀಕರಣ ಇದು ಎಂದು ಅದು ಹೇಳಿದೆ.
ಪ್ರಶ್ನೆ 1. ಈ ಯೋಜನೆಯು ಬಾಡಿಗೆ ಮನೆಗಳಲ್ಲಿ ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸಿಸುತ್ತಿರುವ ವಿದ್ಯುತ್ ಬಳಕೆದಾರರಿಗೂ ಅನ್ವಯಿಸುವುದೆ…?
- ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ಜೋಡಣೆ ನೊಂದಾಯಿಸುವ ಮಾಡಿ ಸೌಲಭ್ಯವನ್ನು
ಪಡೆಯುವುದು.
ಪ್ರಶ್ನೆ 2. ಗೃಹ ಬಳಕೆದಾರರು/ಫಲಾನುಭವಿಗಳು ಯಾವುದಾದರೂ ತಿಂಗಳಿನಲ್ಲಿ ಮಾತ್ರ 200 ಯೂನಿಟ್ ಮಿತಿ ದಾಟಿದರೂ ಸದರಿ ಯೋಜನೆಯಲ್ಲಿ ಮುಂದುವರಿಯುವವರೆ…?
- 200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಿ, ಯೋಜನೆಯಲ್ಲಿ ಮುಂದುವರಿಯುವುದು
ಪ್ರಶ್ನೆ 3. ಸರ್ಕಾರದ ಆದೇಶದ ನಂತರ ಹೊಸದಾಗಿ ಗೃಹಬಳಕೆಗಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆದಾರರಿಗೆ ಯೋಜನೆಯು ಆನ್ವಯಿಸುತ್ತದೆಯೇ ?
- ಹೊಸ ಸಂಪರ್ಕ ಪಡೆದ ಗಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರ ಸರಾಸರಿ ಈ ಬಳಕೆಯ ಮಾಸಿಕ 53 ಯೂನಿಟ್ಗಳಾಗಿರುವುದರಿಂದ 53 ಯೂನಿಟ್ಗಳನ್ನೇ ನಿರ್ಧರಿಸಿ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು
ಪ್ರಶ್ನೆ 4. 2022-23 ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಬಳಕೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಗೃಹಬಳಕೆದಾರರ ಸರಾಸರಿ ಮನೆಗಳ ಅವಧಿಯ ಸರಾಸರಿ ವಿಧಾನ ಹೇಗೆ..? (Shifted Houses)
- ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯು 53 ಯುನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೇ ನಿರ್ಧರುಸಿ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು
ಪ್ರಶ್ನೆ 5. Multi Stored Apartment ಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೇ..?
- ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ
ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ.
ಇದಿಷ್ಟು ಸಾದಾ ಪ್ರಶ್ನೆಗಳಿಗೆ ಬೆಸ್ಕಾಂ ಉತ್ತರ ನೀಡಿದ್ದು, ಇನ್ನೂ ಹಲವು ಪ್ರಶ್ನೆಗಳಿಗೆ ಮುಂದಿನ ಹಂತಗಳಲ್ಲಿ ಉತ್ತರ ದೊರೆಯುವ ನಿರೀಕ್ಷೆ ಇದೆ.
ಗೃಹ ಜ್ಯೋತಿ ಯೋಜನೆಯ ಕುರಿತು ಗ್ರಾಹಕರಿಗೆ ಉಂಟಾಗಿರಬಹುದಾದ ಗೊಂದಲಗಳಿಗೆ ಸ್ಪಷ್ಟೀಕರಣ.#gruhajyothi #GruhaJyothischeme @EnergyDeptGoK @CMofKarnataka @siddaramaiah @thekjgeorge @MinOfPower @mnreindia @mdbescom @BescomHelpline pic.twitter.com/sM5RCUL9ZC
— Namma BESCOM (ನಮ್ಮ ಬೆಸ್ಕಾಂ) (@NammaBESCOM) June 16, 2023
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15ರಿಂದ ಆರಂಭವಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಅರ್ಜಿ ಸಲ್ಲಿಕೆ ವಿಚಾರದಲ್ಲಿ ತಾಂತ್ರಿಕ ದೋಷಗಳು ಉಂಟಾಗುವುದನ್ನು ತಡೆಯಲು ಅರ್ಜಿ ಸಲ್ಲಿಕೆ ಆರಂಭವನ್ನು ಕೆಲವು ದಿನ ಮುಂದಕ್ಕೆ ಹಾಕಿರುವುದಾಗಿ ಸರ್ಕಾರ ಪ್ರಕಟಿಸಿದೆ.
ಇದನ್ನೂ ಓದಿ: Gruhalakshmi scheme : ಗೃಹಲಕ್ಷ್ಮಿಗೆ ಮತ್ತೆ ವಿಘ್ನ; ಅರ್ಜಿ ಸಲ್ಲಿಕೆ ಜೂನ್ 16ರಿಂದ ಆರಂಭ ಆಗಲ್ಲ!