Site icon Vistara News

Gruhajyothi Scheme: 1 ಕೋಟಿ ತಲುಪಿದ ಗೃಹಜ್ಯೋತಿ ಯೋಜನೆ ನೋಂದಣಿ

Gruhajyothi

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ (Congress Guarantee), ಪ್ರತಿ ಮನೆಗೆ ಗರಿಷ್ಠ 200 ಯುನಿಟ್‌ ಉಚಿತ ವಿದ್ಯುತ್‌ (Free Electricity) ನೀಡುವ ಗೃಹಜ್ಯೋತಿ ಸ್ಕೀಂನ (Gruhajyothi scheme) ನೋಂದಣಿ ರಾಜ್ಯಾದ್ಯಂತ ಭರದಿಂದ ಸಾಗಿದ್ದು, ಜುಲೈ 5ರಂದು 1 ಕೋಟಿ ಗ್ರಾಹಕರ ನೋಂದಣಿ ದಾಟಿದೆ.

ಜೂನ್‌ 18ರಿಂದ ಆರಂಭಗೊಂಡಿರುವ ನೋಂದಣಿ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಸ್ವಲ್ಪ ನಿಧಾನಗತಿ ಇದ್ದರೂ ಈಗ ಸರಾಗವಾಗಿ ಸಾಗುತ್ತಿದೆ. ಜೂನ್‌ 27ರಂದು ಒಂದೇ ದಿನ 8,18,741 ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ದಿನಕ್ಕೆ ಸರಾಸರಿ 8 ಲಕ್ಷ ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 2.40 ಕೋಟಿ ವಿದ್ಯುತ್‌ ಬಳಕೆದಾರರಿದ್ದಾರೆ ಎಂಬ ಲೆಕ್ಕಾಚಾರವಿದೆ.

ನೋಂದಣಿ ಕಡ್ಡಾಯ

ಕುಟುಂಬವೊಂದಕ್ಕೆ ಗರಿಷ್ಠ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವಿನ್ನೂ ನೋಂದಣಿ ಮಾಡಿಕೊಂಡಿಲ್ಲ ಎಂದಾದರೆ ಈ ಅಂಶಗಳನ್ನು ಗಮನಿಸಿ

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್‌ ಕಚೇರಿ, ನಾಡಕಚೇರಿ, ಕಂಪ್ಯೂಟರ್‌, ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ https://sevasindugs.karnataka.gov.in ನಲ್ಲಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್‌’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.

ಇದನ್ನೂ ಓದಿ: Gruhajyothi scheme : ಉಚಿತ ವಿದ್ಯುತ್‌ಗೆ ಭರ್ಜರಿ ರೆಸ್ಪಾನ್ಸ್;‌ 17 ದಿನದಲ್ಲಿ 1 ಕೋಟಿ ಗ್ರಾಹಕರ ನೋಂದಣಿ

Exit mobile version