Site icon Vistara News

Gruhajyoti scheme: ಹೆಚ್ಚುವರಿ 10 ಯೂನಿಟ್‌ ಫ್ರೀ; ಷರತ್ತುಗಳು ಅನ್ವಯ!

In Karnataka Gruhajyoti scheme additional 10 units free and conditions apply

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ ಗೃಹ ಜ್ಯೋತಿ (Gruhajyoti scheme) ಉಚಿತ ವಿದ್ಯುತ್‌ ಯೋಜನೆಯ (Free Eelectricity Scheme) ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆಯನ್ನು (Gruhajyoti Rules Change) ಮಾಡಲಾಗಿದೆ. ಈಗಿನ ನಿಯಮದಂತೆ ಯೋಜನೆ ಆರಂಭವಾದ ಸಂದರ್ಭದಲ್ಲಿ ಬಳಸುತ್ತಿದ್ದ ಸರಾಸರಿ ವಿದ್ಯುತ್‌ಗೆ ಹೆಚ್ಚುವರಿ 10% ಯೂನಿಟ್‌ಗಳನ್ನು ಸೇರಿಸಿ ಉಚಿತ ವಿದ್ಯುತ್‌ ನೀಡಲಾಗುತ್ತಿತ್ತು. ಇನ್ನು ಮುಂದೆ ಬಳಸುತ್ತಿದ್ದ ಯೂನಿಟ್‌ಗಳಿಗೆ ಹೆಚ್ಚುವರಿ 10 ಯೂನಿಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಈ ಆದೇಶ ಇರುವುದು ಅತ್ಯಲ್ಪ ಬಳಕೆದಾರರಿಗೆ ಮಾತ್ರ. ಅಂದರೆ, ಮಾಸಿಕವಾಗಿ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಅನ್ನು ಬಳಕೆ ಮಾಡುವವರಿಗೆ ಈ ಆದೇಶವನ್ನು ಹೊರಡಿಸಲಾಗಿದೆ.

ಶೇಕಡಾವಾರು 10ರಷ್ಟು ಬದಲು 10 ಯುನಿಟ್‌ ಫ್ರೀ ವಿದ್ಯುತ್ ನೀಡಲು ಈಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಅದರಂತೆ ಈಗ ಆದೇಶವೂ ಹೊರಬಿದ್ದಿದೆ.

ಈ ಮೊದಲು ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಸರಾಸರಿ ಯುನಿಟ್​ಗಿಂತ ಶೇ. 10ರಷ್ಟು ಹೆಚ್ಚುವರಿ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈಗ ಶೇಕಡಾವಾರು ಬದಲಾಗಿ ಸರಾಸರಿಗಿಂತ 10 ಯುನಿಟ್ ಅನ್ನು ಹೆಚ್ಚುವರಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಹೆಚ್ಚುವರಿ 398 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಸಬ್ಸಿಡಿ ಮೊತ್ತವು 3578 ಕೋಟಿ ರೂಪಾಯಿ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಆದೇಶ

ಗೃಹ ಜ್ಯೋತಿಗೆ ಸಂಬಂಧಪಟ್ಟಂತೆ ಈಗ ತೆಗೆದುಕೊಳ್ಳಲಾದ ನಿರ್ಧಾರವು ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ಬರುವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಇದರಿಂದ ಮಾಸಿಕವಾಗಿ 48 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಅನುಕೂಲವಾಗಲಿದ್ದು, ಅವರಿಗೆ ಇನ್ನು ಮಾಸಿಕವಾಗಿ 58 ಯೂನಿಟ್‌ವರೆಗೆ ಬಳಕೆ ಮಾಡಲು ಅವಕಾಶ ಸಿಕ್ಕಂತೆ ಆಗುತ್ತದೆ.

4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ

ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಈಗಾಗಲೇ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆಯಿದೆ. ಶ್ಯೂರಿಟಿ ನೀಡಬೇಕೆಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ ಇದೀಗ 4450 ಕೋಟಿ ರೂ. ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ.

ಇದನ್ನೂ ಓದಿ: HSRP Number Plate: ನೀವೇ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬುಕ್‌ ಮಾಡಿ; ಇಲ್ಲಿದೆ ಸರಳ ಟಿಪ್ಸ್!

ವಿದ್ಯುತ್ ಸರಬರಾಜು ಕಂಪನಿಗಳು ಯಪಿಸಿಎಲ್‌ನವರಿಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆಯಾಗಿದೆ. ಹಾಗೇ ಸೆಂಟ್ರಲ್ ಇಆರ್.ಸಿಯವರ ಆದೇಶದ ಕುರಿತು ಚರ್ಚೆಯಾಗಿದ್ದು, ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ + 419 ಕೋಟಿ ರೂ. ನೀಡಬೇಕಾಗಿದೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Exit mobile version