ತುಮಕೂರು: ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸಿವೆ. ಈ ನಡುವೆ ಮತದಾರರಿಗೆ ಹಂಚಲು ಕುಕ್ಕರ್‌ಗಳನ್ನು ತುಂಬಿದ್ದ ವಾಹನದ ಮೇಲೆ ಜಿಎಸ್‌ಟಿ ಅಧಿಕಾರಿಗಳು (GST Raid) ನಡೆಸಿ, ವಶಕ್ಕೆ ಪಡೆದಿದ್ದಾರೆ. ಕುಕ್ಕರ್ ಬಾಕ್ಸ್‌ಗಳ ಮೇಲೆ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರ ಭಾವಚಿತ್ರಗಳು ಇರುವುದು ಕಂಡುಬಂದಿದೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ ಕುಕ್ಕರ್‌ಗಳನ್ನು ತುಂಬಿದ್ದ ಲಾರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶಿಲಿಸಿದ್ದಾರೆ. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ಕುಕ್ಕರ್‌ಗಳನ್ನು ತರಲಾಗಿತ್ತು ಎನ್ನಲಾಗಿದ್ದು, ಬಾಕ್ಸ್‌ಗಳ ಮೇಲೆ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರ ಭಾವಚಿತ್ರವಿರುವುದು ಕಂಡುಬಂದಿದೆ. ಹೀಗಾಗಿ ವಾಹನ ಸಮೇತ ಕುಕ್ಕರ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ | Theft at birthday | ಶಾಸಕರ ಜನ್ಮ ದಿನದ ಪಾರ್ಟಿಯಲ್ಲಿ ಕಳ್ಳರ ಕರಾಮತ್ತು: ಆಪ್ತ ಸಹಾಯಕನ ಜೇಬಿನಿಂದ 1 ಲಕ್ಷ ರೂ. ಕಳವು