ತುಮಕೂರು: ಕೆಲವೊಮ್ಮೆ ಎಷ್ಟು ಯೋಚನೆ ಮಾಡಿ ನಡೆದುಕೊಂಡರೂ ಸಾಕಾಗುವುದಿಲ್ಲ. ಏನಾದರು ಎಡವಟ್ಟುಗಳು ಆಗೇ ಆಗುತ್ತದೆ. ಬಹುಶಃ ಶುಕ್ರವಾರ ತುಮಕೂರಿನಲ್ಲಿ ನಡೆದ ಕೇಂದ್ರ ಸಚಿವ ಪಿಯುಷ್ ಗೋಯೆಲ್ (Piyush goel) ಅವರು ಭಾಗವಹಿಸಿದ ಕಾರ್ಯಕ್ರಮದಲ್ಲೂ ಅಂತಹುದೇ ಘಟನೆ ನಡೆದಂತಿದೆ.
ತುಮಕೂರು ನಗರದ ಸ್ನೇಹ ಸಂಗಮ ಹಾಲ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗುವಾಗ ಈ ಅಚಾತುರ್ಯ ಸಂಭವಿಸಿದೆ. ಅತಿಥಿಗಳು ದೀಪ ಬೆಳಗಲು ಹೋಗುವಾಗ ಚಪ್ಪಲಿ ಮತ್ತು ಶೂಗಳನ್ನು ಭಾರತ ಮಾತೆಯ ಭಾವಚಿತ್ರದ ಮುಂದೆ ಬಿಟ್ಟು ಹೋಗಿದ್ದರು. ಈ ದೃಶ್ಯಾವಳಿಗಳು ವೈರಲ್ ಆಗಿದ್ದು, ಇದು ಭಾರತ ಮಾತೆಗೆ ಮಾಡಿದ ಅಪಮಾನ ಎಂಬೆಲ್ಲ ವ್ಯಾಖ್ಯಾನಗಳು ನಡೆದಿವೆ.
ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಭಾಗವಹಿಸಿದ ಕಾರ್ಯಕ್ರಮವಿದು. ತುಮಕೂರಿನ ಉದ್ಯಮಿಗಳೊಂದಿಗೆ ಸಂವಾದ ಆರಂಭಿಸುವುದಕ್ಕೆ ಮುನ್ನ ದೀಪ ಹಚ್ಚುವಾಗ ವೇದಿಕೆಯ ಒಂದು ಭಾಗದ ಗಣ್ಯರು ಭಾರತ ಮಾತೆಯ ಭಾವಚಿತ್ರದ ಎದುರು ಶೂ ಬಿಚ್ಚಿಟ್ಟಿದ್ದರು. ಅವಸರದಲ್ಲಿ ಭಾರತ ಮಾತೆ ಪೋಟೋಗೆ ಪುಷ್ಪ ನಮನ ಮಾಡುವುದನ್ನೂ ಮರೆತರು ಎನ್ನಲಾಗಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ: ರಾಷ್ಟ್ರವೇ ಮೊದಲು ಎನ್ನುತ್ತಾ ಉಗ್ರರ ಜೊತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23!