Site icon Vistara News

Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ; ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ

H D Deve Gowda invited for pran pratishta of Ram Mandir

ಬೆಂಗಳೂರು: ಅಯೋಧ್ಯೆಯಲ್ಲಿ (Ayodhya Ram Mandir) ನಿರ್ಮಾಣ ಮಾಡಲಾಗುತ್ತಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ (Pran Pratishte) ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಅತಿ ಗಣ್ಯರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗುತ್ತಿದೆ. ಅದರಂತೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕ ಎಚ್ ಡಿ ದೇವೇಗೌಡ(Former PM H D Deve Gowda) ಅವರಿಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Sri Ram Janmabhoomi Tirath Kshetra Trust) ಆಮಂತ್ರಣ ನೀಡಿದೆ. ಈ ವಿಷಯವನ್ನು ಸ್ವತಃ ದೇವೇಗೌಡ ಅವರು ಎಕ್ಸ್‌ ವೇದಿಕೆಯಲ್ಲಿ ಮಾಹಿತಿಯನ್ನು ಷೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ಬಂದಿರುವುದು ನನಗೆ ಖುಷಿ ತಂದಿದೆ. ರಾಮಮಂದಿರ ಸಂಕೀರ್ಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಹಿರಿಯ ಆರೆಸ್ಸೆಸ್ ನಾಯಕ ರಾಮ್ ಲಾಲ್ ಮತ್ತು ಹಿರಿಯ ವಿಎಚ್‌ಪಿ ನಾಯಕ ಅಲೋಕ್ ಕುಮಾರ್ ಅವರು ನನ್ನನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ, ಆಹ್ವಾನ ನೀಡಿದರು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

ಮನಮೋಹಕ ರಾಮ ಮಂದಿರ ಗರ್ಭ ಗುಡಿ!

ಮುಂದಿನ ತಿಂಗಳು ಲೋಕಾರ್ಪಣೆಯಾಗಲಿರುವ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆಗೆ ಸಿದ್ದತೆ; ಅಮೆರಿಕದಲ್ಲೂ ಸಂಭ್ರಮಾಚರಣೆ

Exit mobile version