Site icon Vistara News

‌PM Modi Birthday: ಮೋದಿಗೆ ಶುಭಕೋರಿದ ಗೌಡರು, ಕುಮಾರಸ್ವಾಮಿ; ಡೈನಾಮಿಕ್‌ ಲೀಡರ್‌ ಎಂದ ಎಚ್ಡಿಕೆ

Narendra Modi And HD Devegowda

H D Devegowda And H D Kumaraswamy Wish PM Narendra Modi On His Birthday

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ (‌PM Modi Birthday) ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಸಂಸದರು, ಬಿಜೆಪಿ ನಾಯಕರು, ಪ್ರತಿಪಕ್ಷಗಳ ನಾಯಕರು ಸೇರಿ ಎಲ್ಲ ಕ್ಷೇತ್ರಗಳ ಗಣ್ಯರು ಪ್ರಧಾನಿಗೆ ಶುಭಕೋರುತ್ತಿದ್ದಾರೆ. ಹಾಗೆಯೇ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H D Devegowda), ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (H D Kumaraswamy) ಅವರು ಕೂಡ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ಜತೆಗಿರುವ ಫೋಟೊ ಹಂಚಿಕೊಂಡು ಎಚ್.ಡಿ.ದೇವೇಗೌಡರು ಶುಭಾಶಯ ತಿಳಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರಿಗೆ 73ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಇನ್ನಷ್ಟು ಆಯಸ್ಸು ಕೊಡಲಿ. ಆ ಮೂಲಕ ದೇಶಕ್ಕೆ ನೀವು ಇನ್ನಷ್ಟು ಸೇವೆ ಸಲ್ಲಿಸುವಂತಾಗಲಿ” ಎಂದಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೂ ಮೋದಿ ಜತೆಗಿನ ಫೋಟೊ ಹಂಚಿಕೊಂಡು ಶುಭಕೋರಿದ್ದಾರೆ.

ಡೈನಾಮಿಕ್‌ ಲೀಡರ್‌ ಎಂದ ಎಚ್‌ಡಿಕೆ

ಎಚ್‌.ಡಿ. ಕುಮಾರಸ್ವಾಮಿ ಅವರು ಶುಭಾಶಯ ತಿಳಿಸುವ ಜತೆಗೆ ಮೋದಿ ಅವರದ್ದು ಡೈನಾಮಿಕ್‌ ಲೀಡರ್‌ಶಿಪ್‌ ಎಂದು ಬಣ್ಣಿಸಿದ್ದಾರೆ. “ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಕಾಮನೆಗಳು. ದೇವರು ನಿಮಗೆ ಇನ್ನಷ್ಟು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಹಾಗೆಯೇ, ನಿಮ್ಮ ಡೈನಾಮಿಕ್‌ ನಾಯಕತ್ವದಲ್ಲಿ ದೇಶವು ಇನ್ನಷ್ಟು ಏಳಿಗೆ ಹೊಂದಲಿ ಎಂಬುದಾಗಿ ಬಯಸುತ್ತೇನೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಘೋಷಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಎಕ್ಸ್‌ ಪೋಸ್ಟ್‌ ಮೂಲಕ ಮೋದಿ ಅವರಿಗೆ ಶುಭ ಕೋರಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಕಾಮನೆಗಳು. ಉತ್ತಮ ಆರೋಗ್ಯ, ಆಯಸ್ಸು ನಿಮ್ಮದಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, “ಪಿಎಂ ಮೋದಿ ಅವರಿಗೆ ಜನ್ಮದಿನದ ಶುಭಾಶಯ” ಎಂದು ಪೋಸ್ಟ್‌ ಮಾಡಿದ್ದಾರೆ.

ವಿಶ್ ಮಾಡಿದ ಶಾರುಖ್‌ ಖಾನ್

ಇದನ್ನೂ ಓದಿ: Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಭಾಶಯ ತಿಳಿಸುವ ಜತೆಗೆ ಮೋದಿ ಅವರನ್ನು “ಜಗತ್ತಿನ ಜನಪ್ರಿಯ ನಾಯಕ” ಎಂದಿದ್ದಾರೆ. ಹಾಗೆಯೇ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನೀಶ್‌ ಕನೇರಿಯಾ, ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ, ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್ ಸೇರಿ ಎಲ್ಲ ಕ್ಷೇತ್ರಗಳ ಗಣ್ಯರು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

Exit mobile version