ಹಾಸನ/ಬೆಂಗಳೂರು: ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಮೃತಪಟ್ಟಿದ್ದ (H3N2 Death In Karnataka) ವೃದ್ಧರಲ್ಲಿ ಎಚ್3ಎನ್2 (H3N2) ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆಲೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಆಲೂರು ಮೂಲದ 87 ವರ್ಷದ ವೃದ್ಧರೊಬ್ಬರು ಮಾರ್ಚ್ 1ರಂದು ಮೃತಪಟ್ಟಿದ್ದರು. ಇವರಿಗೆ H3N2 ಪಾಸಿಟಿವ್ ಇದ್ದುದು ದೃಢವಾಗಿದೆ. ಜ್ವರ, ಗಂಟಲುನೋವು, ಕೆಮ್ಮಿನಿಂದ ವೃದ್ಧ ಬಳಲುತ್ತಿದ್ದರು. ಮೃತರಿಗೆ H3N2 ಇದ್ದುದನ್ನು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಈ ಸೋಂಕಿನ ಬಗ್ಗೆ ಇನ್ನಷ್ಟು ಆತಂಕ ಮೂಡಿಸಿದೆ. ಹೀಗಾಗಿ ಅನಾರೋಗ್ಯ ಪೀಡಿತರನ್ನು ಹಾಗು 60 ವರ್ಷ ಮೇಲ್ಪಟ್ಟವರನ್ನು ವೈದ್ಯರು ತಪಾಸಣೆ ನಡೆಸಿದ್ದು, ಎಲ್ಲರ ಗಂಟಲು ದ್ರವವನ್ನು ಪಡೆದು ಲ್ಯಾಬ್‌ಗೆ ಕಳಿಸಲಾಗಿದೆ ಎಂದು ಡಿಎಚ್‌ಓ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ಎಚ್1ಎನ್1 ಜತೆಗೆ ಎಚ್3ಎನ್2 ಭೀತಿ
ಜನವರಿಯಿಂದ ಮಾರ್ಚ್‌ವರೆಗೆ ಎಚ್1ಎನ್1 ನ 10 ಪ್ರಕರಣಗಳು ಪತ್ತೆಯಾಗಿದ್ದರೆ, ಎಚ್3ಎನ್2 ನ 16 ಪ್ರಕರಣ ಪತ್ತೆಯಾಗಿದೆ. ಇನ್‌ಫ್ಲುಯೆಂಜ 26 ಪ್ರಕರಣ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.
ಹಾಸನದಲ್ಲಿ H3N2 ಫ್ಲೋಗೆ ವೃದ್ಧರೊಬ್ಬರು ಮೃತಪಟ್ಟಿರುವ ಸಂಬಂಧ ಪ್ರತಿಕ್ರಿಯಿಸಿರುವ ರಂದೀಪ್, 87 ವರ್ಷದ ವೃದ್ಧರೊಬ್ಬರು ಫೆಬ್ರವರಿ 24ಕ್ಕೆ ಹಿಮ್ಸ್‌ಗೆ ದಾಖಲಾಗಿದ್ದರು. ದಾಖಲಾಗುವ ಮೊದಲೆ 5 ದಿನಗಳಿಂದ ಕೆಮ್ಮು ಹಾಗು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರು. ವಯೋಸಹಜ ಕಾರಣದಿಂದ ಹೈಪರ್ ಟೆನ್ಷನ್ ಹಾಗು ಕಿಡ್ನಿ ಸಮಸ್ಯೆ ಮಾತ್ರವಲ್ಲದೆ ಮೊದಲಿನಿಂದಲೂ ಅಸ್ತಮಾ ರೋಗಿಯಾಗಿದರು. ಮಾರ್ಚ್ 1ರಂದು ವ್ಯಕ್ತಿ ಮೃತರಾಗಿದ್ದು, 3ರಂದು ಅವರ ಸ್ಯಾಂಪಲ್ ಪರಿಶೀಲನೆ ಮುಕ್ತಾಯಗೊಂಡಿತ್ತು. ಇನ್‌ಫ್ಲುಯೆನ್ಜಾ ಟೆಸ್ಟ್ ಕಿಟ್‌ನಲ್ಲಿ H3N2 ವೈರಸ್ ಇರುವುದು ಪತ್ತೆಯಾಗಿದೆ. IHIP ಪೋರ್ಟಲ್‌ನಲ್ಲಿ ಈ ವಿವರ ದಾಖಲಾಗಿದ್ದು, ಮಾರ್ಚ್ 4ರಂದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಹಿತಮಿತ ಆಹಾರ ಆರೋಗ್ಯಕ್ಕೆ ಉತ್ತಮ- ಡಾ ಕೆ.ಸಿ.ಬಳ್ಳಾಳ್
ಸಾಂಕ್ರಾಮಿಕ ರೋಗಗಳ ಭಾದೆ ಒಂದು ಕಡೆಯಾದರೆ ಮತ್ತೊಂದು ಕಡೆ ಬೇಸಿಗೆ ಕಾಲ ಶುರುವಾಗಿದ್ದು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹೀಗಾಗಿ ಬೇಸಿಗೆಯ ಆರೈಕೆ ಬಗ್ಗೆ ಡಾ.ಕೆ.ಸಿ.ಬಳ್ಳಾಲ್ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಹಿತ-ಮಿತ ಆಹಾರ ಆರೋಗ್ಯಕ್ಕೆ ಒಳ್ಳೆಯದು ಜತೆಗೆ ನೀರಿನ ಅಂಶ ಹೆಚ್ಚಿರುವ ಹಣ್ಣುಗಳ ಸೇವನೆ ಉತ್ತಮ. ಯಾಕೆಂದರೆ ದೇಹಕ್ಕೆ ಹೆಚ್ಚಿನ ನೀರು, ಗುಣಮಟ್ಟದ ಆಹಾರ ನೀಡಬೇಕು.
ಇದನ್ನೂ ಓದಿ: H3N2 Virus: ಎಚ್3ಎನ್2ಗೆ ಮೊದಲ ಬಲಿ ರಾಜ್ಯದಲ್ಲಿ; ಕೋವಿಡ್ ಮೊದಲ ಸಾವು ನೆನಪಿಸಿದ ವೈರಸ್
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಬೇಕಾದರೆ ಆಹಾರ ಕ್ರಮದಲ್ಲೂ ಎಚ್ಚರಿಕೆವಹಿಸಿಬೇಕೆಂದು ಸಲಹೆ ನೀಡಿದ್ದಾರೆ. ಸದ್ಯ H3N2 ರೂಪಾಂತರಿ ಆತಂಕ ಸೃಷ್ಟಿಸಿದೆ. ಆದರೆ ವೈರಸ್ ಕುರಿತು ಆತಂಕಪಡಬೇಕಿಲ್ಲ ಬದಲಿಗೆ ಎಚ್ಚರವಿರಬೇಕೆಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ