ವಿಜಯನಗರ: ಮಲ್ಲಿಗೆ ಹೂವಿನ ನಾಡು ಎಂದೇ ಖ್ಯಾತಿ ಪಡೆದಿರುವ ಹಡಗಲಿ ಕ್ಷೇತ್ರದಿಂದ ಬಿಜೆಪಿಯ ಕೃಷ್ಣನಾಯಕ್ಗೆ (73,200) ಜಯ ಜಯಗಳಿಸಿದ್ದಾರೆ. ಅವರು ತಮ್ಮ ಸಮೀಪದ ಸ್ಪರ್ಧಿ ಪಿ.ಟಿ ಪರಮೇಶ್ವರ್ ನಾಯಕ್ (71,756) ವಿರುದ್ಧ 1444 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಿ.ಟಿ ಪರಮೇಶ್ವರ್ ನಾಯ್ಕ್ ಗೆಲುವು ಸಾಧಿಸಿದ ಶಾಸಕರಾಗಿದ್ದರು.
1957ರಿಂದ ಹೂವಿನ ಹಡಗಲಿ ಸಾಮಾನ್ಯ ಕ್ಷೇತ್ರವಾಗಿದ್ದು, ಕ್ಷೇತ್ರ ಮರುವಿಂಗಡಣೆಯಾದ ಬಳಿಕ 2008ರಲ್ಲಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿ ಹೊರಹೊಮ್ಮಿದೆ. ಬಳ್ಳಾರಿ ಮೀಸಲು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳು ಒಂದು ರೀತಿಯದ್ದಾದರೆ, ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ಮಾತ್ರ ಸ್ವಲ್ವ ವಿಭಿನ್ನ.
ಹೂವಿನ ಹಡಗಲಿ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್, ಇವರ ತಂದೆ ಮ.ಮ. ಪಾಟೀಲ, ಸಚಿವರಾದ ಎನ್.ಎಂ.ಕೆ. ಸೋಗಿ, ಇ ಟಿ ಶಂಭುನಾಥ, ನಂದಿಹಳ್ಳಿ ಹಾಲಪ್ಪ, ಅಂಗಡಿ ಚನ್ನಬಸಪ್ಪ ಸೇರಿದಂತೆ ಘಟಾನುಘಟಿಗಳನ್ನು ಆಯ್ಕೆ ಮಾಡಿದ ಹೆಗ್ಗಳಿಕೆಯಿದೆ. ಎಂ ಪಿ ಪ್ರಕಾಶರು ಏಳು ಬಾರಿ ಸ್ಪರ್ಧಿಸಿದ್ದು, 4 ಬಾರಿ ಜಯಗಳಿಸಿದ್ದರು.
ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಕುರುಬ, ಮುಸ್ಲಿಂ, ವಾಲ್ಮೀಕಿ ಮತಗಳು ಪ್ರಮುಖವಾಗಿವೆ. ಪುರುಷ ಮತದಾರರು 94,323, ಮಹಿಳೆಯರು 92,125, ತೃತೀಯ ಲಿಂಗಿಗಳು 13 ಮಂದಿ ಸೇರಿದಂತೆ ಒಟ್ಟರೆಯಾಗಿ 1,86,461 ಮಂದಿ ಮತದಾರರಿದ್ದಾರೆ.