Site icon Vistara News

Hadapada Reservation: ಹಡಪದ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಮನವಿ

Hadapada Reservation

#image_title

ವಿಜಯಪುರ: ಒಬಿಸಿ 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಹೋರಾಟ ಮಾಡುತ್ತಿರುವ ಬೆನ್ನಲ್ಲೇ ಎಸ್‌ಸಿ ಮೀಸಲಾತಿ ನೀಡುವಂತೆ ಲಿಂಗಾಯತ ಸಮಾಜದ ಮತ್ತೊಂದು ಉಪ ಪಂಗಡದಿಂದ ಕೂಗು ಕೇಳಿಬಂದಿದೆ. ಒಬಿಸಿ
2ಎ ಕೆಟಗರಿಯಲ್ಲಿರುವ ಹಡಪದ ಸಮುದಾಯಕ್ಕೆ ಎಸ್‌ಸಿ ಮೀಸಲಾತಿ ನೀಡಬೇಕು ಎಂದು ಹಡಪದ ಅಪ್ಪಣ್ಣ ಪೀಠದ ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಆಯೋಜಿಸಿದ್ದ ಹಡಪದ ಸಮಾಜದ ರಾಜ್ಯಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಶ್ರೀಗಳು ಬೇಡಿಕೆ ಇಟ್ಟಿದ್ದಾರೆ. ಹಡಪದ ಸಮುದಾಯ ಲಿಂಗಾಯತ ಸಮಾಜದಲ್ಲಿದ್ದರೂ ನಮ್ಮನ್ನು ಕೀಳಾಗಿ ಕಾಣಲಾಗುತ್ತಿದೆ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ ಎಸ್‌ಸಿ ಮೀಸಲಾತಿ ನೀಡಬೇಕು ಎಂದು ಹಡಪದ ಪೀಠದ ಸ್ವಾಮೀಜಿ ಕೋರಿದ್ದಾರೆ.

ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಮಗೆ ಒಳ್ಳೆಯ‌ ದಿನಗಳು ಬರಲಿವೆ. ವೃತ್ತಿ ಆಧಾರಿತ ಕುಲ ಕಸುಬುಗಳನ್ನು ನಿಗಮದ ಮೂಲಕ ಸೇರಿಸಲು ಪ್ರಯತ್ನಿಸಲಾಗುತ್ತಿದೆ. ನಿಮ್ಮ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ | Budget 2023 : ಸರ್ವ ವ್ಯಾಪಿ- ಸರ್ವ ಸ್ಪರ್ಶಿ ಬಜೆಟ್: ಎನ್‌. ರವಿಕುಮಾರ್‌ ಪ್ರಶಂಸೆ

ಕ್ಷೇತ್ರದ ಅಭಿವೃದ್ಧಿಗಾಗಿ ಬಿ.ಎಸ್. ಯಡಿಯೂರಪ್ಪ ಅವರು ಒಂದು ಕೋಟಿ ರೂಪಾಯಿ ಕೊಟ್ಟಿದ್ದರು. ನಾನು ಬಂದ ಮೇಲೆ ಮೂರು ಕೋಟಿ ರೂಪಾಯಿ ಕೊಟ್ಟಿದ್ದೇನೆ. ಈಗ ಕೊಟ್ಟಿರುವ ಹಣ ಸಮುದಾಯ ಭವನ ಕಟ್ಟಡಕ್ಕೆ ಬಳಸಿಕೊಳ್ಳಿ, ಮುಂದೆ ಹೆಚ್ಚುವರಿ ನೆರವು ಕೊಡುತ್ತೇನೆ. ಬಡಿಗ, ಕುಂಬಾರ ವೃತ್ತ್ತಿ ಮಾಡುವವರಿಗೆ ಅನುದಾನ ನೀಡಲಾಗುವುದು. ಕಾಯಕ ಆಧಾರಿತ ಕರಕುಶಲ ಯೋಜನೆ ಪ್ರಥಮವಾಗಿ ಮಾಡಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

ಪ್ರಥಮ ಬಾರಿ ಈ ಊರಿಗೆ ಬಂದಿದ್ದೇನೆ. ವಿಜಯನಗರ ಕಾಲದ ರಕ್ಕಸಗಿ-ತಂಗಡಗಿ ಯುದ್ಧದ ಬಗ್ಗೆ ಕೇಳಿದ್ದೇನೆ. ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದಾಗಲೂ ಈ ವಿಚಾರ ಚರ್ಚೆ ಆಗಿತ್ತು. ಈ ಭಾಗದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

Exit mobile version