Site icon Vistara News

Elephant Attack | ದುಬಾರೆ ಸಾಕಾನೆ ದಾಳಿಗೆ ಹಾಡಿಯ ಕಾರ್ಮಿಕ ಬಲಿ; ಪ್ರಾಣಾಪಾಯದಿಂದ ಮಾವುತ ಪಾರು

dubare elephant

ಮಡಿಕೇರಿ: ದುಬಾರೆ ಸಾಕಾನೆ ಶಿಬಿರದ ಆನೆಯೊಂದರ ದಾಳಿಗೆ (Elephant Attack) ಸಮೀಪದ ಹಾಡಿ ನಿವಾಸಿಯೊಬ್ಬರು ಬಲಿಯಾಗಿದ್ದಾರೆ. ಮಾವುತನ ಮೇಲೂ ಆನೆ ದಾಳಿ ನಡೆಸಿದ್ದು, ಅವರು ತಪ್ಪಿಸಿಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದರು.

ಕೊಡಗು ಜಿಲ್ಲೆಯ ದುಬಾರೆ ಅರಣ್ಯದಲ್ಲಿ ಪ್ರಕರಣ ನಡೆದಿದೆ. ದುಬಾರೆ ಹಾಡಿ ನಿವಾಸಿ ಬಸಪ್ಪ (28) ಮೃತ ದುರ್ದೈವಿ. ಬಸಪ್ಪ ಎಂದಿನಂತೆ ಮನೆಯಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲೇ ಸುತ್ತಮುತ್ತಲು ಓಡಾಡಿಕೊಂಡಿದ್ದ ಸಾಕಾನೆಯು ಬಸಪ್ಪ ಅವರ ಮೇಲೆ ದಾಳಿ ಮಾಡಿದೆ. ಏಕಾಏಕಿ ದಾಳಿಯಿಂದ ಬಸಪ್ಪ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರಾದರೂ ಪಾರಾಗಲಾಗಲಿಲ್ಲ. ಹೀಗಾಗಿ ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ತಪ್ಪಿಸಲು ಹೋದ ಮಾವುತನ ಮೇಲೂ ಸಾಕಾನೆ ದಾಳಿ ನಡೆಸಲು ಮುಂದಾಗಿದೆ. ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆನೆ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದ ಬಸಪ್ಪ ಅವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳಿದಿದ್ದಾರೆ. ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Elephant Attack | ಬಣ್ಣಾರಿ ಅಮ್ಮನ್‌ ದೇವಾಲಯದಲ್ಲಿ ಆನೆ ದಾಳಿ; ಮಲಗಿದ್ದ ಲಾರಿ ಚಾಲಕ ಸಾವು

Exit mobile version