Site icon Vistara News

Hagaribommanahalli Election Results : ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್​ನ ನೇಮಿರಾಜ ನಾಯ್ಕ್​​ ಜಯಭೇರಿ

Hagaribommanahalli Election Results Nemiraja Naik Winner

#image_title

ಹಗರಿಬೊಮ್ಮನಹಳ್ಳಿ: ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ (Hagaribommanahalli Election Results) ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ .ನೇಮಿರಾಜ್ ನಾಯ್ಕ್ (84,023) ಅವರು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ ಭೀಮಾನಾಯ್ಕ್​ (72,679)ವಿರುದ್ಧ .11344 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಹೊಸಮುಖವಾದ ಬಿ. ರಾಮಣ್ಣ ಸ್ಪರ್ಧಿಸಿದ್ದರು. ನೇಮಿರಾಜ್ ನಾಯ್ಕ್ ಬದಲಾಗಿ ಈ ಬಾರಿ ಬಿ. ರಾಮಣ್ಣ ಅವರು ಮಣೆ ಹಾಕಲಾಗಿತ್ತು. ಬಲ್ಲಾಹುಣ್ಸಿ ರಾಮಣ್ಣ ಅವರು ಜಿಲ್ಲಾ ದಿಶಾ ಸಮಿತಿ ಸದಸ್ಯರೂ ಹೌದು.

ಇದನ್ನೂ ಓದಿ: Electricity Price Hike: ಎಲೆಕ್ಷನ್‌ ರಿಸಲ್ಟ್‌ ಮೊದಲೇ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್‌! ಹೆಚ್ಚಳ ಎಷ್ಟು?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭೀಮಾನಾಯ್ಕ ಅವರು 77,564 ಮತ ಪಡೆದು ಬಿಜೆಪಿಯ ಕೆ.ನೇಮರಾಜ ನಾಯ್ಕ (71,105-ಪಡೆದ ಮತ) ವಿರುದ್ಧ 7,232 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಒಟ್ಟು 2,29, 987 ಮತದಾರರಿದ್ದು, ಇವರಲ್ಲಿ ಪುರುಷರ ಸಂಖ್ಯೆ 1,14,630 ಹಾಗೂ ಮಹಿಳೆಯರ ಸಂಖ್ಯೆ 1,15, 335 ಇದೆ.

Exit mobile version