Site icon Vistara News

Halal Dangal : ಮತ್ತೆ ಶುರುವಾಯಿತು ಹಲಾಲ್‌ ಕಟ್‌ ವಿರೋಧಿ ಆಂದೋಲನ, ಹಲಾಲ್‌ ಮುಕ್ತ ಯುಗಾದಿಗೆ ಕರೆ

Hindu organizations halal cut

#image_title

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹಲಾಲ್‌ ದಂಗಲ್‌ (Halal Dangal) ಶುರುವಾಗುವ ಲಕ್ಷಣ ಕಾಣಿಸಿದೆ. ಈ ಬಾರಿಯ ಯುಗಾದಿಯನ್ನು ಹಲಾಲ್‌ ಮುಕ್ತವಾಗಿ ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಕರೆ ನೀಡಿವೆ.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಹಿಂದೂ ಜನಜನಾಗೃತಿಯ ವಕ್ತಾರ ಮೋಹನ್ ಗೌಡ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಮಾತನಾಡಿ, ಯುಗಾದಿಗೆ ಹಲಾಲ್‌ ಮಾಡಿದ ಮಾಂಸವನ್ನು ಬಳಸದಂತೆ ಮನವಿ ಮಾಡಲಾಗುವುದು ಎಂದರು.

ಹಲಾಲ್ ಮುಕ್ತ ಯುಗಾದಿಗಾಗಿ ರಾಜ್ಯವ್ಯಾಪಿ ಅಭಿಯಾನ ನಡೆಸಲಾಗುವುದು. ಸಾರ್ವಜನಿಕರು ಹಲಾಲ್ ಮಾಂಸವನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಲಾಗುವುದು ಎಂದು ಮೋಹನ್‌ ಗೌಡ ಹೇಳಿದರು.

ಹಲಾಲ್‌ ಮಾಂಸ ಎಂದರೆ ಅದು ಅಲ್ಲಾಹನಿಗೆ ಅರ್ಪಣೆ ಮಾಡಿರುವಂಥದ್ದು. ಪ್ರಾಣಿಗಳನ್ನು ಮೆಕ್ಕಾ ಕಡೆಗೆ ಮುಖ ಮಾಡಿ ನಿಲ್ಲಿಸಿ ಅವುಗಳ ರಕ್ತನಾಳಗಳನ್ನು ಕತ್ತರಿಸಿ ರಕ್ತ ಬಸಿದು ಹೋಗುವ ಹೊತ್ತಿಗೆ ಅವುಗಳು ನರಳಿ ನರಳಿ ಸಾಯುವಂತೆ ಮಾಡುವ ಕ್ರೌರ್ಯದ ಪದ್ಧತಿ ಇದು. ಆದರೆ, ಇದನ್ನೇ ಅತ್ಯಂತ ವೈಜ್ಞಾನಿಕ ಪದ್ಧತಿ ಎಂಬಂತೆ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ಈ ನಡುವೆ, ಈ ಮಾಂಸ ವ್ಯಾಪಾರ ಮಾಡುವವರೆಲ್ಲರೂ ಒಂದೇ ಕೋಮಿಗೆ ಸೇರಿದವರು. ನಮ್ಮೆಲ್ಲ ಹಬ್ಬಗಳ ಲಾಭವನ್ನು ಅವರೇ ಪಡೆದುಕೊಳ್ಳುತ್ತಾರೆ. ಹೀಗಾಗಿ ನಮ್ಮ ಹಬ್ಬಕ್ಕೆ ಹಲಾಲ್‌ ಮಾಂಸ ಬಳಸಬಾರದು, ಯುಗಾದಿ ಮರುದಿನ ಆಚರಿಸುವ ತೊಡಕು ಹಬ್ಬಕ್ಕೆ ದೊಡ್ಡ ಮಟ್ಟದಲ್ಲಿ ಮಾಂಸ ಖರೀದಿಯಾಗುತ್ತಿದ್ದು, ಈ ಬಾರಿ ಹಲಾಲ್‌ ಕಟ್‌ ಮಾಡಿದ ಮಾಂಸವನ್ನು ಖರೀದಿ ಮಾಡಬಾರದು ಎಂದು ಮನವಿ ಮಾಡಿದರು.

ಹಲಾಲ್ ಕಟ್ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ‌ ಎಂದು ಹೇಳಿದ ಪ್ರತಿನಿಧಿಗಳು, ಸರ್ಕಾರಿ ಆಹಾರಗಳಲ್ಲಿ ಈಗಾಗಲೇ ಟೆಂಡರ್ ಗಳನ್ನು ನೀಡುವಾಗ ಹಲಾಲ್ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಕಳೆದ ದೀಪಾವಳಿ ಸಂದರ್ಭದಲ್ಲೂ ಇದೇ ರೀತಿ ಹಲಾಲ್‌ ಮುಕ್ತ ಅಭಿಯಾನ ನಡೆದಿತ್ತು. ಮಾಂಸ ವ್ಯಾಪಾರ ಮಾಡುವ ಅಂಗಡಿಗಳು ಮಾತ್ರವಲ್ಲ, ಹಲವು ದೊಡ್ಡ ಮಳಿಗೆಗಳಿಗೆ ಹೋಗಿ ಹಲಾಲ್‌ ಮಾಂಸ ಖರೀದಿಸದಂತೆ ಮತ್ತು ಮಾರದಂತೆ ಮನವಿ ಮಾಡಲಾಗಿತ್ತು.

ಇದನ್ನೂ ಓದಿ : Halal Certification | ಹಲಾಲ್‌ ಪ್ರಮಾಣೀಕೃತ ಮಾಂಸದ ಉತ್ಪನ್ನ ರಫ್ತಿಗೆ ಅನುಮತಿ, ಕೇಂದ್ರದ ಕರಡು ಅಧಿಸೂಚನೆಯಲ್ಲೇನಿದೆ?

Exit mobile version