Site icon Vistara News

Swadesh Darshan | ಕೇಂದ್ರದ ಸ್ವದೇಶ ದರ್ಶನ ಯೋಜನೆಗೆ ಮೈಸೂರು, ಹಂಪಿ ಆಯ್ಕೆ, ಹೆಮ್ಮೆಯ ಕ್ಷಣ ಎಂದ ಬೊಮ್ಮಾಯಿ

Mysore Hampi Swadesh Darshan

ಬೆಂಗಳೂರು/ನವದೆಹಲಿ: ಕೇಂದ್ರ ಸರ್ಕಾರದ ಸ್ವದೇಶ ದರ್ಶನ (Swadesh Darshan Scheme) ಯೋಜನೆಗೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ವಾಸ್ತುಶಿಲ್ಪದ ನೆಲೆವೀಡು ಹಂಪಿ ಆಯ್ಕೆಯಾಗಿವೆ. ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ 2015ರಲ್ಲಿ ಯೋಜನೆ ಜಾರಿಗೆ ತಂದಿದ್ದು, ಈಗ ಕರ್ನಾಟಕದ ಎರಡು ಪ್ರವಾಸಿ ತಾಣಗಳು ಆಯ್ಕೆಯಾಗಿವೆ. ಇದರಿಂದ ಎರಡೂ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಮೈಸೂರು ಹಾಗೂ ಹಂಪಿ ಆಯ್ಕೆಯಾಗಿರುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಯೋಜನೆಯ ಪಟ್ಟಿಗೆ ಕರ್ನಾಟಕದ ಮೈಸೂರು ಹಾಗೂ ಹಂಪಿ ಆಯ್ಕೆಯಾಗಿರುವುದು ರಾಜ್ಯದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ. ಇದರಿಂದ ಎರಡೂ ತಾಣಗಳ ಅಭಿವೃದ್ಧಿಯಾಗಲಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಏನಿದು ಸ್ವದೇಶ ದರ್ಶನ ಯೋಜನೆ?
ದೇಶದ ಪ್ರವಾಸಿ ತಾಣಗಳು, ಕಲೆ, ವಾಸ್ತುಶಿಲ್ಪ ಸೇರಿ ದೇಶದ ಸಂಸ್ಕೃತಿಯನ್ನು ಸಾರುವ ನಗರಗಳು ಅಥವಾ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು 2015ರಲ್ಲಿ ಸ್ವದೇಶ ದರ್ಶನ ಯೋಜನೆ ಜಾರಿಗೆ ತಂದಿದೆ. ಯೋಜನೆಗೆ ಆಯ್ಕೆಯಾಗುವ ತಾಣಗಳನ್ನು ಕೇಂದ್ರ ಸರ್ಕಾರವೇ ಅಭಿವೃದ್ಧಿ, ಪುನರುಜ್ಜೀವನ, ಸಂರಕ್ಷಣೆ ಮಾಡಲಿದೆ. ಇದರಿಂದಾಗಿ ಹಂಪಿ ಹಾಗೂ ಮೈಸೂರಿಗೆ ಮತ್ತಷ್ಟು ಕಳೆ ಬರಲಿದೆ. ಈಗಾಗಲೇ ಹಂಪಿಯು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ.

ಇದನ್ನೂ ಓದಿ | Basavaraj Bommai | ಬೆಂಗಳೂರಿನ ಫೆರಿಫೆರಲ್ ರಸ್ತೆ, ಕೆರೆಗಳ ಅಭಿವೃದ್ಧಿಗೆ ಕ್ರಮ: ಸಿಎಂ ಬೊಮ್ಮಾಯಿ

Exit mobile version