Site icon Vistara News

Hanuma Jayanti | ಮತಾಂತರದಿಂದ ಹಿಂದು ರಾಷ್ಟ್ರ ಮುಸ್ಲಿಂ ರಾಷ್ಟ್ರವಾದೀತು: ಕಲ್ಲಡ್ಕ ಪ್ರಭಾಕರ ಭಟ್‌ ಎಚ್ಚರಿಕೆ

kalladka prabhakara bhat

ಹಾಸನ: ಮತಾಂತರ ಸಾಮಾನ್ಯ ಸಂಗತಿ ಅಲ್ಲ, ಅದು ಮುಂದೆ ರಾಷ್ಟ್ರಾಂತರಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಂ ಸಂಖ್ಯೆ ಹೆಚ್ಚಾಗುತ್ತದೆ. ಹಿಂದು ರಾಷ್ಟ್ರ ಹೋಗಿ ಮುಸ್ಲಿಂ ರಾಷ್ಟ್ರವಾಗುವ ಅಪಾಯವಿದೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಕೆ ನೀಡಿದರು. ಅವರು ಹಾಸನದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ (Hanuma Jayanti) ಮಾತನಾಡಿದರು. ಹನುಮ ಜಯಂತಿ ಹಿನ್ನೆಲೆಯಲ್ಲಿ ನಡೆದ ಬೃಹತ್ ಶೋಭಾಯಾತ್ರೆ ಬಳಿಕ ಬಹಿರಂಗ ಸಭೆ ನಡೆಯಿತು. ಇದರಲ್ಲಿ ಭಟ್‌ ಅವರು ದಿಕ್ಸೂಚಿ ಭಾಷಣ ಮಾಡಿದರು.

ʻಮುಸ್ಲಿಂ ಹುಡುಗರು ಮಾತ್ರವಲ್ಲ ಮುಸ್ಲಿಂ ಹುಡುಗಿಯರು ಕೂಡಾ ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಲು ಮುಂದಾಗಿದ್ದಾರೆ. ಲವ್ ಜಿಹಾದ್ ಬಗ್ಗೆ ನಾವು ತಲೆ ಕೆಡಿಸಿಕೊಳ್ತಿಲ್ಲ. ನಮ್ಮ‌ ಹೆಣ್ಣು ಮಕ್ಕಳನ್ನು ಪ್ರೀತಿಯ ಹೆಸರಿನಲ್ಲಿ ಮತಾಂತರ ಮಾಡುತ್ತಾರೆ. ನಂತರ ಅವರನ್ನು ಬಿಟ್ಟು ಭಯೋತ್ಪಾದಕರನ್ನಾಗಿ ಮಾಡ್ತಾರೆ. ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಮತಾಂತರ ಸಾಮಾನ್ಯ ಸಂಗತಿ ಅಲ್ಲ, ಅದು ಮುಂದೆ ರಾಷ್ಟ್ರಾಂತರಕ್ಕೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ಹೆಣ್ಣು ಮಕ್ಕಳು ಜಾರಿ ಹೋಗದಂತೆ ಮಾಡಬೇಕು. ನಮ್ಮ ಬೇರು ಗಟ್ಟಿಮಾಡೋ ಪ್ರಯತ್ನ ಮನೆ ಮನೆಗಳಲ್ಲಿ ನಡೆಯಬೇಕುʼʼ ಎಂದರು ಕಲ್ಲಡ್ಕ ಪ್ರಭಾಕರ ಭಟ್‌.

ʻʻನಮ್ಮ ಹಿಂದಿನ ಮುಖ್ಯಮಂತ್ರಿ ನಾನು ಬೇಕಿದ್ದರೆ ರಸ್ತೆಯಲ್ಲಿ ನಿಂತು ಗೋಮಾಂಸ ತಿಂತೇನೆ ಅಂತಾರೆ. ಇದು ನಮ್ಮ ನಡುವೆ ಇರುವ ದುರ್ದೈವ. ಗೋವನ್ನು ತಾಯಿ ಎಂದು ಪೂಜೆ ಮಾಡುವವರು ನಾವು. ಆದರೆ ಕೆಲವರಿಗೆ ಕತ್ತರಿಸೋದೇ ಮುಖ್ಯವಾಗುತ್ತೆ. ಕೆಲವರು ಹುಟ್ಟಿದ ಕೂಡಲೇ ದೇಹದ ಒಂದು ಭಾಗ ಕತ್ತರಿಸುತ್ತಾರೆʼʼ ಎಂದು ಗೇಲಿ ಮಾಡಿದರು.

ʻʻಸಾವರ್ಕರ್ ಹೆಸರೇ ಕೋಟಿ ಕೋಟಿ ಜನರಿಗೆ ಪ್ರೇರಣೆ. ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಎರಡೆರಡು ಬಾರಿ ಜೀವಾವಧಿ ಶಿಕ್ಷೆ ಆಗಿದ್ದರೆ ಅದು ಸಾವರ್ಕರ್‌ಗೆ ಮಾತ್ರʼʼ ಎಂದ ಅವರು, ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ದೇಶ ತುಂಡಾಗುವ ಆತಂಕ ಇದೆ ಎಂದರು. ಹಾಗಾಗಿ ಎಲ್ಲಾ ಹಿಂದೂ ಬಾಂಧವರು ಒಂದಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | Supreme Court | ಏಕರೂಪ ನಾಗರಿಕ ಸಂಹಿತೆ ಸಮಿತಿ ರಚನೆ ವಿರೋಧಿಸಿದ್ದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್

Exit mobile version