Site icon Vistara News

Happy Birthday ರಮ್ಯಾ ಬಾರ್ನಾ

ರಮ್ಯಾ ಬಾರ್ನಾ

ಕನ್ನಡತಿ ರಮ್ಯಾ ಬಾರ್ನಾ ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇವರು ಮುಂಬಯಿಯ ವಿಪ್ರೊ BPOನಲ್ಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕರಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು.

2008ರಲ್ಲಿ “ಹನಿ ಹನಿ” ಚಿತ್ರದಲ್ಲಿ 2ನೇ ನಾಯಕಿಯಾಗಿ ಕಾಣಿಸಿಕೊಂಡ ರಮ್ಯಾ ಬಾರ್ನಾ ಅದೇ ವರ್ಷ ಕನ್ನಡದ ʻನೀನ್ಯಾರೆʼ ಮತ್ತು ʻಕ್ಷುದ್ರʼ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ರಮ್ಯಾ ಬಾರ್ನಾ 2009ರಲ್ಲಿ ನನ್ನೆದೆಯ ಹಾಡು, Mathiya Chennai ಚಿತ್ರಗಳಲ್ಲಿ ನಟಿಸಿದ್ದರು.
2010ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿಯಲ್ಲಿ ದಿಗಂತ್‌ ಮತ್ತು ನಿಧಿ ಸುಬ್ಬಯ್ಯ ಜತೆ ನಟಿಸಿದ್ದರು. ಈ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು.
2011ರಲ್ಲಿ ʻಹುಡುಗರುʼ ಮತ್ತು ʻಪರಮಾತ್ಮʼದಲ್ಲಿ ಪುನೀತ್‌ ರಾಜಕುಮಾರ್‌ ಜತೆಯಾಗಿ ನಟಿಸಿದ ರಮ್ಯಾ ಬಾರ್ನಾ; ದಿಗಂತ್‌ ಜತೆ “ಲೈಫು ಇಷ್ಟೇನೆʼ ಮತ್ತು “ಪಂಚಾಮೃತʼದಲ್ಲಿ ಶ್ರಿನಗರ ಕಿಟ್ಟಿ ಜತೆ ನಟಿಸಿದ್ದಾರೆ.
2011ರ ಒರಿಯರ್ದೊರಿ ಅಸಲ್ ಎಂಬ ತುಳು ಚಿತ್ರ 150 ದಿನಗಳ ಪ್ರದರ್ಶನ ಕಂಡು ಬ್ಲಾಕ್‌ಬಸ್ಟರ್‌ ಹಿಟ್ ಆಗಿ ಮೆಚ್ಚುಗೆ ಗಳಿಸಿತ್ತು.
2013ರ ಬುಲ್‌ಬುಲ್‌ ಚಿತ್ರದಲ್ಲಿ ದರ್ಶನ್ ಮತ್ತು ರಚಿತಾ ರಾಮ್ ಜತೆ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
2017ರಲ್ಲಿ Sri Sathyanarayana, Anveshi, Toss, Premaya Namahದಲ್ಲಿ ನಟಿಸಿದ ರಮ್ಯಾ ಬಾರ್ನಾ ನಂತರದ ದಿನಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದಾರೆ.
Exit mobile version