ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬೆಂಗಳೂರಿನ ಜಯ ನಗರದಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿ ತ್ರಿವರ್ಣ ಧ್ವಜ ವಿತರಿಸಿದರು. ಶಾಂತಿನಗರದ ಜೋಗು ಪಾಳ್ಯದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡರು.
ಬೈಕ್ ರ್ಯಾಲಿಗೆ ಚಾಲನೆ ನೀಡುವ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 2021ರ ಜನವರಿಯಿಂದಲೇ ಆಜಾದಿ ಕಾ ಅಮೃತ ಮಹೋತ್ಸವ ಪ್ರಾರಂಭಿಸಿದ್ದರು. ಪ್ರತಿ ವಾರ ಈ ದೇಶದ ಸ್ವಾತಂತ್ರ್ಯ ಅಭಿಯಾನದಲ್ಲಿ ಭಾಗಿಯಾಗಬೇಕು. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕು. ಅವರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಬೇಕಿದೆ ಎಂದರು. ʻʻನಾನು ಈ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಿರುವುದು ಹರ್ಷ ತಂದಿದೆʼ ಎಂದರು.
ಜಯನಗರದಲ್ಲಿ ಮನೆ ಮನೆಗೆ ಧ್ವಜ ಹಂಚುವ ವೇಳೆ ಬಿಜೆಪಿ ಮುಖಂಡರಾದ ಎನ್ ಆರ್ ರಮೇಶ್, ಸಿ.ಕೆ ರಾಮಮೂರ್ತಿ ಉಪಸ್ಥಿತರಿದ್ದರು. ಶಾಂತಿ ನಗರದ ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಮಂಡಲ ಅಧ್ಯಕ್ಷ ಶಿವಕುಮಾರ್, ಮಾಜಿ ಮೇಯರ್ ಗೌತಮ್ ಕುಮಾರ್, ಬಿಜೆಪಿ ಮಾದ್ಯಮ ಸಂಯೋಜಕ ಕರುಣಾಕರ್ ಖಾಸಲೆ ಉಪಸ್ಥಿತರಿದ್ದರು.
ಇದನ್ನೂ ಓದಿ| Har Ghar Tiranga | ಮಳೆ ನಡುವೆಯೂ ಮನೆ ಮನೆಯಲ್ಲೂ ರಾರಾಜಿಸಿದ ತ್ರಿವರ್ಣ ಧ್ವಜ