Site icon Vistara News

Har Ghar Tiranga | ಮನೆಯಲ್ಲಿ ಧ್ವಜ ಹಾರಿಸಿ ಸಂಭ್ರಮಿಸಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ

Har Ghar Tiranga

ಬೆಂಗಳೂರು: ದೇಶಾದ್ಯಂತ ʻಹರ್‌ ಘರ್‌ ತಿರಂಗಾʼ (Har Ghar Tiranga) ಅಭಿಯಾನ ಪ್ರಾರಂಭಗೊಂಡಿದೆ. ರಾಜ್ಯದಲ್ಲೂ ಪ್ರಮುಖ ರಾಜಕೀಯ ನೇತಾರರು ತಮ್ಮ ಮನೆಯಲ್ಲೇ ಧ್ವಜ ಹಾರಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಆರ್.ಟಿ ನಗರ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು. ಕುಟುಂಬ ಸಮೇತ ಬಂದು ಧ್ವಜಾರೋಹಣ ಮಾಡಿದ್ದು, ಈ ಸಮಯದಲ್ಲಿ ಸಚಿವ ಸುಧಾಕರ್ ಉಪಸ್ಥಿತಿ ಇದ್ದರು.

ಈ ವೇಳೆ ಮಾತನಾಡಿದ ಸಿಎಂ ʻಇಂದಿನಿಂದ ದೇಶದೆಲ್ಲೆಡೆ ಹರ್ ಘರ್ ತಿರಂಗಾ ನಡೆಯುತ್ತಿದೆ. ರಾಜ್ಯದಲ್ಲಿ ಇದನ್ನು ಯಶಸ್ವಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಧ್ವಜ‌ ವಿತರಣೆ ಮಾಡಲಾಗಿದೆ. ಈಗಾಗಲೇ 1 ಕೋಟಿ 8 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕಡೆ ತಿರಂಗಾ ಹಾರಿಸಲಾಗುತ್ತದೆʼ ಎಂದು ಹೇಳಿದರು.

ಇದನ್ನೂ ಓದಿ | Har Ghar Tiranga | ಪ್ರಧಾನಿ ಮೋದಿ ಕರೆಕೊಟ್ಟ ಹರ್​ ಘರ್​ ತಿರಂಗಾಕ್ಕೆ ಭರ್ಜರಿ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​

ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ʻಹರ ಘರ್‌ ತಿರಂಗಾʼ

ʻಹರ್‌ ಘರ್‌ ತಿರಂಗಾʼ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ತಮ್ಮ ಕಾವೇರಿ ನಿವಾಸದ ಮೇಲೆ ಅಭಿಯಾನಕ್ಕೆ ಚಾಲನೆ ನೀಡಿ, ತ್ರಿವರ್ಣ ಧ್ವಜ ಹಾರಿಸಿದರು. ʻ75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಈ ವರ್ಷ ಸಂಭ್ರಮದಿಂದ ಆಚರಿಸೋಣ. ಹಾಗೂ ಆಗಸ್ಟ್ 15ರ ವರೆಗೆ ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸೋಣʼ ಎಂದರು.

ಇದನ್ನೂ ಓದಿ | Har Ghar Tiranga | ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾ ಮೇಲೆ ತ್ರಿವರ್ಣ ಧ್ವಜಾರೋಹಣ

Exit mobile version