Site icon Vistara News

Har Ghar Tiranga Dharwad | ಒಂದೇ ಮಾತರಂನೊಂದಿಗೆ ಮುತಾಲಿಕ್‌ ಧ್ವಜಾರೋಹಣ

har gar darwada

ಧಾರವಾಡ: ದೇಶದಲ್ಲಿ 75ರ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಮನೆ ಮನೆಯಲ್ಲಿ ರಾಷ್ಟ್ರ ಧ್ವಜ (Har Ghar Tiranga dharwad) ಅಭಿಯಾನ ನಡೆಸಲಾಗುತ್ತಿದೆ. ಇಲ್ಲಿನ ಸಾಧನಕೇರಿ ಬಡಾವಣೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.

ಮನೆ ಎದುರು ಕಂಬಕ್ಕೆ ಧ್ವಜ ಏರಿಸಿದ ಮುತಾಲಿಕ್ ಹಾಗೂ ಬೆಂಬಲಿಗರು ಇದೇ ವೇಳೆ ಒಂದೇ ಮಾತರಂ ಘೋಷಣೆ ಕೂಗಿದರು. ಬಳಿಕ ಅಲ್ಲಿನ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲಾಯಿತು. ಎಲ್ಲೆಡೆ ದೇಶ ಭಕ್ತಿ ಜೈಘೋಷಗಳು ಮೊಳಗಿದವು. ಈ ವೇಳೆ ಬಾಲಕಿಯೊಬ್ಬಳು ಕೇಸರಿ, ಬಿಳಿ, ಹಸಿರು ಬಣ್ಣವನ್ನೊಳಗೊಂಡ ಉಡುಪನ್ನು ತೊಟ್ಟು ಗಮನ ಸೆಳೆದಳು.

ಇದನ್ನೂ ಓದಿ | Har Ghar Tiranga | ಮನೆ ಮನೆಯಲ್ಲೂ ರಾಷ್ಟ್ರ ಧ್ವಜದ ರಂಗು; ಜೋಶಿ, ಈಶ್ವರಪ್ಪ, ಬಿವೈಆರ್‌ ಧ್ವಜಾರೋಹಣ

Exit mobile version