ಶಿವಮೊಗ್ಗ: 75ನೇ ಸ್ವಾತಂತ್ರ್ಯ ಸುವರ್ಣ ಸಂಭ್ರಮ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಮನೆ ಮನೆಗೂ ತ್ರಿವರ್ಣ ಧ್ವಜ ಅಭಿಯಾನದಲ್ಲಿ ಕರುವೊಂದು ಭಾಗವಹಿಸಿ ಗಮನ ಸೆಳೆಯಿತು.
ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ ಗ್ರಾಮದಲ್ಲಿ ಈಸೂರು ಗ್ರಾಮ ಪಂಚಾಯಿತಿ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿಮನೆ ಮನೆಗೆ ಧ್ವಜ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಪ್ರಭಾಕರ್ ಎಂಬುವವರ ಮನೆಗೆ ಮೆರವಣಿಗೆ ಬಂದಾಗ ಅವರ ಮನೆಯ ಕರುವೊಂದು ಮೆರವಣಿಗೆಗೆ ಸ್ವಯಂಪ್ರೇರಿತವಾಗಿ ಸಾಥ್ ನೀಡಿತು. ಮೆರವಣಿಗೆಯುದ್ದಕ್ಕೂ ಪಾಲ್ಗೊಂಡ ಗೋಮಾತೆ ಕೊನೆಯವರೆಗೂ ಇದ್ದದ್ದು ವಿಶೇಷವಾಗಿತ್ತು.
ʻʻಕರು ಮೆರವಣಿಗೆಯಲ್ಲಿ ಬಂದಿದ್ದು ನಮಗೂ ಆಶ್ಚರ್ಯ ಮೂಡಿಸಿತು. ಮೆರವಣಿಗೆ ಮುಗಿಯುವವರೆಗೂ ಮುಂಚೂಣಿಯಲ್ಲಿದ್ದ ಕರು, ಕೊನೆಯಲ್ಲಿ ಗ್ರೂಪ್ ಫೋಟೊಗೂ ಪೋಸ್ ನೀಡಿತು. ಮೆರವಣಿಗೆಯಲ್ಲಿ ಕರು ಇದ್ದುದನ್ನು ಗಮನಿಸಿದ ಗ್ರಾಮಸ್ಥರೂ ಸ್ಫೂರ್ತಿಗೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು ಎನ್ನುತ್ತಾರೆ ಟಿಎಪಿಸಿಎಮ್ಎಸ್ ಸೊಸೈಟಿ ಮಾಜಿ ಅಧ್ಯಕ್ಷ ಚುರ್ಚಿಗುಂಡಿ ಶಶಿಧರ. ಮುರಾರ್ಜಿ ವಸತಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ವಿಧ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ| Har Ghar Tiranga Haveri | ಹರ್ ಘರ್ ತಿರಂಗಾ ಅಭಿಯಾನಕ್ಕೆ ಮೋದಿಗೆ ಪತ್ರ ಬರೆದ 4 ವರ್ಷದ ಪೋರಿ