Site icon Vistara News

Harapanahalli Election Results : ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ

Harapanahalli Election Results Latha Mallikarjun Winner

#image_title

ವಿಜಯನಗರ: ಹರಪನಹಳ್ಳಿ ವಿಧಾನಾಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ (70,194) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ಕರುಣಾಕರ ರೆಡ್ಡಿ (56,349) ವಿರುದ್ಧ 13,845 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಎಂ ಪಿ ರವೀಂದ್ರ 9,647 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

1967ರಿಂದ 2008ರವರೆಗೆ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದ್ದ ಹರಪನಹಳ್ಳಿ 2008ರಲ್ಲಿ ಪುನರ್‍‌ ವಿಂಗಡಣೆಗೊಂಡು ಸಾಮಾನ್ಯ ಕ್ಷೇತ್ರವಾಯಿತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯರಾದ ಎಂ. ಪಿ. ಪ್ರಕಾಶ್ ಸ್ಪರ್ಧೆ ಮಾಡಿದ ಬಿಜೆಪಿ ಜಿ ಕರುಣಾಕರ ರೆಡ್ಡಿ 25,218 ಮತಗಳ ಭಾರಿ ಅಂತರದಿಂದ ಗೆಲುವು ಕಂಡಿದ್ದರು.

ಇದನ್ನೂ ಓದಿ : Kudligi Election Results : ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಎನ್.ಟಿ ಗೆಲುವು

2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎಂ ಪಿ ಪ್ರಕಾಶ್‌ ಪುತ್ರ ಎಂ.ಪಿ. ರವೀಂದ್ರ ತನ್ನ ತಂದೆಯ ವಿರುದ್ದ ಗೆದ್ದಿದ್ದ ಜಿ ಕರುಣಾಕರರೆಡ್ಡಿಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಎಂ ಪಿ ರವೀಂದ್ರ 56,954 ಮತಗಳನ್ನು ಪಡೆದರೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ ಕರುಣಾಕರರೆಡ್ಡಿ ಒಟ್ಟು 48,548 ಮತಗಳನ್ನು ಪಡೆದು 8,406 ಮತಗಳಿಂದ ಸೋತರು.

ಕ್ಷೇತ್ರದಲ್ಲಿ ಒಟ್ಟು 2,19,828 ಮತದಾರರಿದ್ದಾರೆ. ಇದರಲ್ಲಿ 1,17,528 ಪುರುಷರು, 1,02,290 ಮಹಿಳಾ ಮತದಾರರು ಹಾಗೂ 10 ಇತರೆ ಮತದಾರರು ಇದ್ದಾರೆ. ಲಿಂಗಾಯತ ಸಮುದಾಯದ ಮತಗಳು ಇಲ್ಲಿ ನಿರ್ಣಾಯಕವಾಗಿತ್ತು.

Exit mobile version