Site icon Vistara News

Harassment case | ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಕಿರುಕುಳ ಆರೋಪ; ವ್ಯಕ್ತಿ ಆತ್ಮಹತ್ಯೆ, ಕೊಲೆಯೆಂದ ಕುಟುಂಬ

doddaballapura suicide case ಬಿಜೆಪಿ ಕಾರ್ಯಕರ್ತ

ದೊಡ್ಡಬಳ್ಳಾಪುರ: ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದ ವ್ಯಕ್ತಿಯೊಬ್ಬರು ತಮಗೆ ಕಾಂಗ್ರೆಸ್‌ ನಾಯಕರಿಂದ ಕಿರುಕುಳವಾಗುತ್ತಿದೆ (Harassment case) ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಡೆತ್‌ನೋಟ್‌ನಲ್ಲಿ ನಗರಸಭೆ ಸದಸ್ಯರೊಬ್ಬರು ಸೇರಿದಂತೆ ನಾಲ್ವರ ಹೆಸರನ್ನು ಬರೆದಿಟ್ಟಿದ್ದಾರೆ.

ವಿನೋದ್

ನಗರದ ಕಛೇರಿಪಾಳ್ಯ ನಿವಾಸಿ ವಿನೋದ್ (30) ಆತ್ಮಹತ್ಯೆ ಮಾಡಿಕೊಂಡವರು. ತಾಲೂಕಿನ ತಳಗವಾರ ಕೆರೆಯಲ್ಲಿ ಇವರ ಶವ ಪತ್ತೆಯಾಗಿತ್ತು. ಕಾಂಗ್ರೆಸ್‌ಗಾಗಿ ಸಾಕಷ್ಟು ದುಡಿದರೂ ಬೆಲೆ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದ. ಆದರೆ, ಇದರಿಂದ ವಿನೋದ್‌ಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಎಂದು ಹೇಳಿರುವ ಕುಟುಂಬಸ್ಥರು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಿದ್ದಾರೆ.

ಪಕ್ಷ ಬಿಟ್ಟು ಹೋಗಿದ್ದಕ್ಕೆ ಕಿರುಕುಳ ಆರೋಪ
ಕಾಂಗ್ರೆಸ್‌ನಲ್ಲಿ ಉತ್ತಮ ಹೆಸರನ್ನು ಇಟ್ಟುಕೊಂಡಿದ್ದ ವಿನೋದ್‌ ಜನರೊಂದಿಗೆ ಸಾಕಷ್ಟು ಬೆರೆಯುತ್ತಿದ್ದರು ಎನ್ನಲಾಗಿದೆ. ಕಳೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಮಂಜುನಾಥ್ ಎಂಬುವವರ ಪತ್ನಿ ಪರ ವಿನೋದ್‌ ಕೆಲಸ ಮಾಡಿದ್ದರು. ಸಾಕಷ್ಟು ಪ್ರಚಾರ ಮಾಡಿದ್ದರು. ಮಂಜುನಾಥ್‌ ಪತ್ನಿ ನಗರಸಭೆಯಲ್ಲಿ ಗೆಲುವು ಸಾಧಿಸಿದ ನಂತರ ವಿನೋದ್‌ ಅವರನ್ನು ಕಡೆಗಣಿಸಲಾಗಿತ್ತು. ಅಲ್ಲದೆ, ಮಾನಸಿಕ ಕಿರುಕುಳವನ್ನೂ ನೀಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ | Cyber Crime | ತನ್ನ ಲವ್‌ಗೆ ಹುಳಿಹಿಂಡಿದವನ ತಂಗಿಯನ್ನೇ ಟಾರ್ಗೆಟ್‌ ಮಾಡಿದಳು; ಇನ್ಸ್ಟಾದಲ್ಲಿ ಫೋಟೊ, ನಂಬರ್‌ ಹಾಕಿದಳು!

ತನ್ನನ್ನು ಪಕ್ಷದಲ್ಲಿ ಕಡೆಗಣಿಸಿರುವುದಕ್ಕೆ ಬೇಸರಗೊಂಡ ವಿನೋದ್‌, ಮೂರು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ತೊರೆದು ತನ್ನ ಅಪಾರ ಪ್ರಮಾಣದ ಬೆಂಬಲಿಗ ಯುವಕರ ಜತೆ ಬಿಜೆಪಿ ಸೆರ್ಪಡೆಯಾಗಿದ್ದರು. ಇದು ನಗರಸಭೆ ಸದಸ್ಯೆಯ ಪತಿ ಮಂಜುನಾಥ್‌ ಸೇರಿ ಮತ್ತೆ ಕೆಲವು ನಾಯಕರಿಗೆ ಸಹಿಸಲು ಆಗಿಲ್ಲ ಎನ್ನಲಾಗಿದೆ.

ಕಿರುಕುಳ ಪ್ರಾರಂಭ
ವಿನೋದ್ ಬಿಜೆಪಿ ಸೇರಿದ ಬಳಿಕ‌ ಕಿರುಕುಳ ನೀಡುವುದು ಹೆಚ್ಚಾಗಿದ್ದು, ಹಲವು ಭಾರಿ ಇಲ್ಲ ಸಲ್ಲದ ದೂರು ನೀಡಿ ಠಾಣೆಗೆ ಕರೆಸಿಕೊಂಡು ಕಿರಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅಲ್ಲದೆ, ಮಂಜುನಾಥ್ ಕಡೆಯವರಿಂದ ಸಾಕಷ್ಟು ತೊಂದರೆಯಾಗುತ್ತಿತ್ತು ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಡೆತ್‌ ನೋಟ್‌ ಬರೆದಿಟ್ಟ ವಿನೋದ್‌ ತಳಗವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ರಾಜಕೀಯ ಜಿದ್ದಿಗೆ ಕೊಲೆ ಆರೋಪ
ವಿನೋದ್‌ ಅವರನ್ನು ಕಳೆದುಕೊಂಡಿರುವ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪ ಮಾಡಿದ್ದಾರೆ. ರಾಜಕೀಯ ಜಿದ್ದಿಗಾಗಿ ನಮ್ಮ ಮಗನನ್ನು ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿನೋದ್‌ರನ್ನು ನೀರಿಗೆ ತಳ್ಳಲಾಗಿದೆ ಎಂದು ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆ ಮುಂದೆ ಕುಟುಂಬಸ್ಥರು ಜಮಾಯಿಸಿದ್ದು, ನ್ಯಾಯ‌ ಸಿಗೂವರೆಗೂ ಠಾಣೆಯಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ | Delhi Crime | ಇನ್ನೂ ಸಿಗದ ಶ್ರದ್ಧಾ ತಲೆ, ಮೊಬೈಲ್;‌ ಹಾಗಿದ್ದರೆ ಪೊಲೀಸರಿಗೆ ಸಿಕ್ಕಿರುವುದೇನು?

Exit mobile version