ಬೆಂಗಳೂರು: ಜಯನಗರ ಮಂಥನ (Jayanagar Manthana) ವತಿಯಿಂದ ಭಾನುವಾರ (ಏ. 2) ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ಉಪನ್ಯಾಸ ನೀಡಲಿದ್ದಾರೆ.
ಭಾನುವಾರ ಸಂಜೆ 5.30ಕ್ಕೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಹುತ್ವ ಮತ್ತು ಹಿಂದುತ್ವ ವಿಷಯ ಕುರಿತು ಉಪನ್ಯಾಸ ನೀಡಲಿರುವ ಹರಿಪ್ರಕಾಶ್ ಕೋಣೆಮನೆ ಅವರು, ಬಳಿಕ ಸಂವಾದ ನಡೆಸಲಿದ್ದಾರೆ. ಈ ವೇಳೆ ಬಹುತ್ವ ಮತ್ತು ಹಿಂದುತ್ವದ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.
ಇದನ್ನೂ ಓದಿ: Sapthak Bengaluru: ಏ.9ರಂದು ಮಲ್ಲೇಶ್ವರದಲ್ಲಿ ಸ್ವರ ಶೃಂಗಾರ್ ಸಂಗೀತ ಕಛೇರಿ
ಜಯನಗರ 4ನೇ ಬ್ಲಾಕ್ನಲ್ಲಿರುವ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಂಥನವು ವಿವಿಧ ಸಾಮಾಜಿಕ ವಿಚಾರಗಳ ಕುರಿತು ಚರ್ಚಾ ವೇದಿಕೆಯನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನಾಗರಿಕರಿಗೆ ಹಲವು ವಿಷಯಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ.