Site icon Vistara News

Baba Ramdev: ಪಣಜಿಯಲ್ಲಿ ಬಾಬಾ ರಾಮ್ ದೇವ್ ಜತೆ ಹರಿಪ್ರಕಾಶ್ ಕೋಣೆಮನೆ ಮಾತುಕತೆ

Baba Ramdev With HPK

#image_title

ಪಣಜಿ: ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಪತಂಜಲಿ ಸಂಸ್ಥೆಯ ಮುಖ್ಯಸ್ಥರು ಮತ್ತು ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ (Baba Ramdev) ಅವರನ್ನು ಶನಿವಾರ ಪಣಜಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಇಬ್ಬರೂ ಯೋಗ, ಅಧ್ಯಾತ್ಮ, ಆರೋಗ್ಯ, ವಾಣಿಜ್ಯ ವ್ಯವಹಾರ, ಮಾಧ್ಯಮ ಇತ್ಯಾದಿ ಸಂಗತಿಗಳ ಕುರಿತು ವಿಸ್ತೃತವಾಗಿ ಚರ್ಚಿಸಿದರು.

ಪತಂಜಲಿ ಯೋಗ ಸಮಿತಿಯು ಇಲ್ಲಿಯ ಬೀಚ್ ನಲ್ಲಿ ಮೂರು ದಿನಗಳ ಬೃಹತ್ ಯೋಗ ಶಿಬಿರ ಆಯೋಜಿಸಿದೆ. ಈ ಶಿಬಿರದಲ್ಲಿ ಬಾಬಾ ರಾಮ್ ದೇವ್ ಅವರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಹರಿಪ್ರಕಾಶ್ ಕೋಣೆಮನೆ ಅವರು ಬಾಬಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಬಾಬಾ ರಾಮ್ ದೇವ್ ಜತೆಗಿನ ಮಾತುಕತೆ ಖುಷಿ ನೀಡಿತು. ಮುಖ್ಯವಾಗಿ ಅಧ್ಯಾತ್ಮ ಮತ್ತು ಯೋಗದ ಕುರಿತು ಅವರು ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು ಎಂದು ಹರಿಪ್ರಕಾಶ್ ಕೋಣೆಮನೆ ಅವರು ಹೇಳಿದರು.

Exit mobile version