ಹಾಸನ: ಅರಸೀಕೆರೆಯ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಅವರು ಈಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಾಳಯ ಸೇರಿಕೊಂಡಿದ್ದಾರೆ. ಹೀಗೆ ಸೇರುವ ಮುನ್ನ ಅವರನ್ನು ಮನವೊಲಿಸಲು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಹರಸಾಹಸ ನಡೆಸಿರುವ ಆಡಿಯೊ ಒಂದು ವೈರಲ್ ಆಗಿದೆ. ಚುನಾವಣೆ ಹೊತ್ತಲ್ಲೇ ಬಿಡುಗಡೆಯಾಗಿರುವ ಇದು ಎಚ್.ಡಿ. ರೇವಣ್ಣ ಸಿಡಿಸಿದ ಬಾಂಬ್ ಎಂದು ಹೇಳಲಾಗಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡುವೆ ಮಾತುಕತೆಯ ಈ ಆಡಿಯೊದಲ್ಲಿ ರೇವಣ್ಣ ಅವರು ಬಗೆ ಬಗೆಯಲ್ಲಿ ಪಕ್ಷ ಬಿಡದಂತೆ ಮನವಿ ಮಾಡಿದ್ದಾರೆ. ʻʻನಾನು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಏನೆಲ್ಲ ಪ್ರಯತ್ನ ಮಾಡಿದೆʼʼ ಎಂದು ಜನರ ಮುಂದೆ ಹೇಳುವುದಕ್ಕೆ ಈ ಆಡಿಯೊವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ರೇವಣ್ಣ ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ʻʻಶಿವಲಿಂಗೇಗೌಡ ಏನೇನ್ ಮಾತನಾಡಿದ್ದಾರೆ ಎಂದು ದಾಖಲೆ ಸಮೇತ ಬಿಡುಗಡೆ ಮಾಡ್ತೀನಿʼʼ ಅಂದಿದ್ದರು ರೇವಣ್ಣ.
ಹಾಗಿದ್ದರೆ ಆಡಿಯೋದಲ್ಲಿ ಏನೇನಿದೆ, ನೀವೇ ಓದಿ
ರೇವಣ್ಣ ಮತ್ತು ಶಿವಲಿಂಗೇಗೌಡರ ಮಾತುಕತೆ ಆಡಿಯೋ ಇಲ್ಲಿ ಕೇಳಿ
ನಾನೇನಾದ್ರೂ ನಿಂಗೆ ಕೆಟ್ಟದು ಮಾಡಿದೀನಾ ಶಿವಲಿಂಗಣ್ಣ?
ರೇವಣ್ಣ : ಏನ್ ಶಿವಲಿಂಗಣ್ಣ, ನಾನ್ ಹೇಳೋದು ಅವು, ಇವು ಆಡ್ತವೆ ಅಂತ ನೀನು ಆಡಲು ಹೋಗಬೇಡ. ಯಾವತ್ತಾದರೂ ನಾನು ನಿನಗೆ ಕೆಟ್ಟದು ಮಾಡದ್ದೀನಾ?
ಕೆಎಂಶಿ: ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಾ ಅಣ್ಣಾ?
ರೇವಣ್ಣ: ನಾನೆಲ್ಲಿ ಹಾಗಂತ ಹೇಳಿದ್ದೀನಿ?
ಕೆಎಂಶಿ : ನಾನು ರಾಜಿ ಮಾಡ್ಕತೀನಿ ತಡಿ ಅಂತ ಹೇಳಿದಿನಲ್ಲಣ್ಣ, ಅಷ್ಟರಲ್ಲಿ ನನ್ನ ಕರೆಯದೆ ಸಭೆ ಮಾಡಿದ್ದೀರಾ?
ರೇವಣ್ಣ : ನನಗೆ ಇರೋದು ಇನ್ನಾ 39 ದಿನ, ನಿನ್ನ ಹತ್ರಲೇ ಬರ್ತರೆ ನಿಂದೆ ವೈರ್‌ಲೆಸ್ ಹಾಕ್ತಾರೆ..
ಕೆಎಂಶಿ : ಯಾವುದಾದರೂ ವೈರ್ ಲೆಸ್ ಹಾಕಲಿ ಅವರಂಗೆ ನನಗೆ ಎಡಿಟ್ ಮಾಡಲು ಆಗಲ್ಲ.
ಅವನ್ಯಾವನೋ ಯಡಿಯೂರಪ್ಪನ ಸಿಡಿ ಮಾಡಿ ಬಂದೋನು..
ರೇವಣ್ಣ: ನಾನು ಅವತ್ತಿಂದ ಹೇಳಿಲ್ವಾ ಕುಮಾರಣ್ಣ, ನಾನು ಗೆಲ್ಲಿಸಿಕೊಂಡು ಬರ್ತಿವಿ ಅಂತ
ಕೆಎಂಶಿ: ರೇವಣ್ಣ ಹತ್ರ ಹೋಗು ಡಿಸಿಸಿ ಬ್ಯಾಂಕ್ ವಿಚಾರಕ್ಕೆ ಅಂತ ಹೇಳಿದ್ದೀನಿ, ಎರಡು ವರ್ಷದ ಹಿಂದೇನೇ ಅವನ್ಯಾವನೋ ಬರ್ತಾನೆ, ಕಾಂಗ್ರೆಸ್‌ನಲ್ಲಿ ನಿಂತರೆ ನಾನು ಗೆಲ್ತಾನೆ ಅಂತಾ ಹೇಳಿ ಎರಡು ವರ್ಷ ಆಗಿದೆ.
ರೇವಣ್ಣ : ಅದು ನನಗೆ ಗೊತ್ತಿಲ್ಲ.
ಕೆಎಂಶಿ: ಈ ಮಾತ್ರೆ ಅನ್ನೋನು ಬಂದಿದಾನಲ್ಲಾ..
ರೇವಣ್ಣ : ಸ್ಬಲ್ಪ ತಾಳ್ಮೆಯಿಂದ ಕೇಳ್ಕಳೋ, ನನ್ನ ನಿನ್ನ ಸಂಬಂಧ ಹದಿನೆಂಟು ವರ್ಷದ್ದು, ಶಿವಲಿಂಗೇಗೌಡಗೆ ತೊಂದರೆ ಆಗಬಾರದು ಅಂತ ನನ್ನ ಭಾವನೆ ಇದೆ. ಅದರ ಮೇಲೆ ನಿನ್ನಿಷ್ಟ, ಅವತ್ತು ನೀನು ಏನು ಹೇಳ್ದೆ, ಯಾವುದೇ ಕಾರಣಕ್ಕೂ ನಾನು ಅವನ ಎದುರು ಸೋಲುವುದಾರೆ ನಿಲ್ಲಲ್ಲ, ಯಾವನಾದ್ರು ನಿಲ್ಸಣ ಅಂದೆ.
ಕೆಎಂಶಿ : ನಾನು ಈಗಲೂ ನಿಲ್ತೀನಿ ಅಂತ ಎಲ್ಲಿ ಹೇಳಿದ್ದೀನಿ ಹೇಳಿ..
ರೇವಣ್ಣ: ನೋಡಯ್ಯ ನಿನ್ನ ಹಣೇಲಿ ಬರೆದಿರದು ಯಾರೂ ತಪ್ಸಕೆ ಆಗಲ್ಲ
ಕೆಎಂಶಿ: ನನ್ನ ಹಣೆಗಿಣೆ ಪರೀಕ್ಷೆ ಇಲ್ಲೇ ಜನರ ಎದುರೇ ಮಾಡ್ತೀನಿ. ಜನರೇ ನನ್ನ ಹಣೆ ಪರೀಕ್ಷೆ ಮಾಡೋರು, ನಾನು ಐವತ್ತು ಸಾವಿರದಲ್ಲಿ ಗೆಲ್ತೀನಿ ಅಂತ ಈಗ ಹೇಳಿದ್ದಲ್ಲ, ಎರಡು ವರ್ಷ ಆಯಿತೆ, ಅವನ್ಯಾವನೋ ಚೀಟ್ ಮಾಡ್ಕಂಡು ಇಟ್ಕಂಡು ಈಗ ಹಾಕವ್ನೆ. ಯಡಿಯೂರಪ್ಪನ ಸಿಡಿ ಮಾಡಿ ಬಂದವನು ಇಲ್ಲೂ ಮಾಡ್ತವ್ನೆ ಸಿಡಿ.
ಕೆಎಂಶಿ: ಡಿಸಿಸಿ ಬ್ಯಾಂಕ್ ನಮ್ಮ ಹತ್ರ ಇಲ್ಲ.. ರೇವಣ್ಣ ಅವರದ್ದು, ಅವರ ಹತ್ರ ಹೋಗು ಅಂದಿದ್ದೀನಿ, ಆ ನನ್ಮಗ ರೇವಣ್ಣ ಹತ್ರಕ್ಕೆ ಹೋಗು ಅಂತ ಹೇಳಿದೀನಿ ಅಂತ ಎಡಿಟ್ ಮಾಡಿ ಹಾಕವ್ನೆ
ರೇವಣ್ಣ : ಲೋನ್‌ಗು ನನಗು ಸಂಬಂಧವಿಲ್ಲ
ಕೆಎಂಶಿ : ನನ್ನ ಜೀವಮಾನ ಇರೋವರೆಗೂ ನಿಮ್ಮನ್ನೆಲ್ಲ ಏಕವಚನದಲ್ಲಿ ಮಾತನಾಡಲ್ಲ, ಅಂತಹ ಥರ್ಡ್ ಕ್ಲಾಸ್ ಅಲ್ಲಾ ನಾನು. ಅವನು ಇಂತಹವು ಎಡಿಟ್ ಮಾಡಿ ಐವತ್ತು ಸಿಡಿ, ವ್ಯಾಟ್ಸಪ್ ಬಿಟ್ಟ ನನ್ನ ಮೇಲೆ ನಾನು ಮಾತಾಡಿದಂಗೆ ಮಿಮಿಕ್ರಿ ಮಾಡ್ತಾನೆ, ನಾನು ಮಾತಾಡಿದಂಗೆ ಮಾತಾಡುಸ್ತಾನೆ ಏನು ಮಾಡೋಣ. ಅಂಥವು ಏಸು ಎಟ್ಕಂಡವ್ನೋ ಇನ್ನುವೇ, ಯಾವಾಗ ಯಾವಾಗ ಬಿಡಕೆ?
ನಾಳೆ ಸಭೆ ರದ್ದು ಮಾಡೋಣೇನಯ್ಯಾ?
ರೇವಣ್ಣ : ನಾನು ಹೇಳೋದು ಸುಮ್ನೆ ಯಾವನೋ, ಯಾವನೋ ಹೇಳ್ತನೆ ಅಂತ ಕೇಳೋದು ಬೇಡ ಕಣೋ..
ಕೆಎಂಶಿ: ನಾನು ಯಾರು ಮಾತು ಕೇಳಿಲ್ಲ
ರೇವಣ್ಣ: ಮತೆ ಏನ ಮಾಡಣ ನಾನು
ಕೆಎಂಶಿ : ಒಂದು ಗುಂಪು ರಾಜಿ ಆಗಬೇಕು
ರೇವಣ್ಣ : ನೀನು ಏನು ಹೇಳ್ತಿಯಾ ಕೇಳ್ತೀನಿ, ನನಗೇನು?
ಕೆಎಂಶಿ: ಆ ಗುಂಪು ರಾಜಿಯಾಗೋವರೆಗೆ, ನಾಳಿಕ್ಕೆ ಅರಸೀಕೆರೆ ತುಂಬಾ ಬಾವುಟ ಕಟ್ಟವ್ರೆ. ಈಗೇನ್ ಮಾಡ್ತಿರಾ ಮಾಡಿ
ರೇವಣ್ಣ : ಅರಸೀಕೆರೆ ತುಂಬಾ ಬಾವುಟ ಕಟ್ಟಿದ್ರೆ, ನಾನು ಮೊನ್ನೇನೇ ಹೇಳಿ ಬಂದಿಲ್ವಾ?
ಕೆಎಂಶಿ : ನೀವು ಹೇಳ ಬಂದವ್ರು, ಅಟ್‌ಲಿಸ್ಟ್ ಹದಿನೈದು ದಿನದೊಳಗೆ ಒಂದು ಸಭೆ ಮಾಡಬೇಕು, ಮಾಡದಿದ್ದರೆ ಮಾಡು ಇಲ್ಲ ಅಂದಿದ್ರೆ ಬೇರೆ ದಾರಿ ಮಾಡ್ಕತೀವಿ ಅಂತ ಹೇಳಿದ್ರೆ ನಾನು ಒಪ್ಕತಿದ್ದೆ..
ರೇವಣ್ಣ : ನಾಳೆ ಸಭೆ ರದ್ದು ಮಾಡನೇನಯ್ಯ?
ಕೆಎಂಶಿ: ಅದೆಂಗೆ ಸಭೆ ರದ್ದು ಮಾಡಲು ಆಗುತ್ತೆ?
ರೇವಣ್ಣ : ಇವತ್ತು ಹೇಳು, ಸಭೆ ರದ್ದು ಮಾಡಿ ಇನ್ನೂ ಹದಿನೈದು ದಿನದಲ್ಲಿ ಶಿವಲಿಂಗೇಗೌಡರೇ ಸಭೆ ಕರಿತರೆ ಅಂತ ಹೇಳಿ ಬಿಡ್ಲೇನಯ್ಯ?
ಕೆಎಂಶಿ : ಇಲ್ಲಾ, ಅವೆಲ್ಲಾ ಆಗಲ್ಲ ಈಗ, ಬಂದು ಮಾಡ್ಕಂಡು ಹೋಗಿ. ನಾಳೆ ನಮ್ಮ ಮನೇಲಿ ಮದುವೆ. ಅದುನ್ನು ಗೊತ್ತಿಲ್ಲದಂಗೆ ಅವನು ಲೋಫರ್ ನನ್ಮಕ್ಕಳು ನಿಮಗೆ ಡೇಟ್ ಮಿಸ್ ಮಾಡಿ ಹೇಳಿದ್ದಾರೆ. ನಮ್ಮ ಸ್ವಂತ ಬಾಮೈದನ ಮದುವೆ.
ರೇವಣ್ಣ: ನಾಳೆ ಸಭೇಲಿ ಏನು ಹೇಳಬೇಕು ಹೇಳಪ್ಪ?
ಕೆಎಂಶಿ : ಏನಾದ್ರು ಹೇಳಿ, ಅವರ ಮನೇಲಿ ಮದುವೆ ಇದೆ, ಬರಕ್ಕಿಲ್ಲ ಅಂತ ಹೇಳಿ
ರೇವಣ್ಣ : ಅವರು ಬರಕ್ಕಾಗಲ್ಲ ಅವರು ಇಲ್ಲೇ ಇರ್ತಾರೆ ಅಂಥ ಹೇಳ್ಲಾ?
ಕೆಎಂಶಿ: ಇರ್ತೀನಿ ಅಂತ ಪದ ಬೇಡ, ನಾನು ಇರ್ತೀನಿ, ಹೋಗ್ತೀನಿ ಅನ್ನೋದನ್ನು ನಿಮ್ಮ ಮನೆಗೆ ಬಂದು ಹೇಳ್ತೀನಿ, ದೊಡ್ಡವರಿಗೆ ಹೇಳ್ದಲೇ ನಾನು ಎಲ್ಲೂ ಹೋಗಲ್ಲ, ಎಲ್ಲಿಗೂ ಬರಲ್ಲು, ನನ್ನ ಜಡ್ಜ್‌ಮೆಂಟ್, ಅಸೆಸ್‌ಮೆಂಟ್ ಇದಿಯಲಾ ಅದು ಯಾವತ್ತು ಸುಳ್ಳು ಆಗಲ್ಲ, *ಈಗ ಏನಿಲ್ಲ ಕುರುಬರವೆಲ್ಲಾ 75% ಅವನಿಗೆ ಹೋಗ್ತವೆ, ನಮ್ಮ ಒಕ್ಕಲಿಗರವು ಅವನ್ಯಾರೋ ಅಶೋಕ ಅನ್ನವನಿಗೆ ಹೋಗ್ತಾವೆ, ಈ ಒಕ್ಕಲಿಗರವು 50%, 60% ಹೋಗ್ತವೆ, ಇಲ್ಲಿ ಕಾಂಗ್ರೆಸ್ ಬಂದ್ರು ಗೆಲ್ಲಕೆ ಏನು ಆಗಲ್ಲ. ನಾವೇನು ಅಷ್ಟು ದಡ್ಡರಲ್ಲ ರಾಜಕಾರಣದಲ್ಲಿ ಯಾವೋ ಗೊತ್ತಿಲ್ಲದವು ನಾಯಿ, ನರಿ, ಊರು ಗೊತ್ತಿಲ್ಲದವು ಬಂದು ಹೇಳ್ತಾರೆ ಅಂತ ಕೇಳಕೆ ಹೋಗ್ಬೇಡಿ.
ನಿನ್ನ ಬಿಟ್ಟಿರಕೆ ಆಗಲ್ಲ ಕಣೋ ದಯಮಾಡಿ
ರೇವಣ್ಣ : ಶಿವಲಿಂಗಣ್ಣ ನನ್ನ ಜೊತೆ ಗೆಲ್ಲಿಸಿಕೊಳ್ಳಬೇಕು ಅಂತ ಅಷ್ಟೇ ಕಣೋ
ಕೆಎಂಶಿ : ಗೆಲ್ಲಿಸಿಕೊಳ್ಳಲು ಎಲ್ಲಾ ಕ್ಷೇತ್ರದಂತಲ್ಲಾ ಇದು..
ರೇವಣ್ಣ : ನಾನು ನಿನ್ನ ಬಿಟ್ಟಿರಕೆ ಆಗಲ್ಲ ಕಣೋ ದಯಮಾಡಿ, ನೀನು ಏನಾದ್ರು ಅನ್ಕೋ ನಿನ್ನ ಬಿಟ್ಟಿರಲು ನನಗೆ ಆಗಲ್ಲ ಕಣೋ ದಯಮಾಡಿ ನನ್ ಮಾತು ಕೇಳೋ ಆ ಜವರೇಗೌಡ ಅವರೆಲ್ಲ ಆಡಿಕೊಳ್ಳಂಗೆ ಆಗುತ್ತೆ ಕಣೋ ಶಿವಲಿಂಗಣ್ಣ..
ಕೆಎಂಶಿ : ಜವರೇಗೌಡರು ಬೆನ್ನೆಲುಬು ಇಲ್ಲದ ರಾಜಕಾರಣಿ.
ರೇವಣ್ಣ : ಯಾರ‍್ಯಾರು ಏನೇನ್ ಮಾಡಿದಾರೆ ಅಂತಾ ಎಲ್ಲಾ ನಿನಗೆ ಗೊತ್ತಿದೆಯಲ್ಲೋ ಶಿವಲಿಂಗಣ್ಣ..
ಕೆಎಂಶಿ : ಎಲ್ಲಾ ನನಗೆ ಗೊತ್ತಿದೆ, ಗೊತ್ತಿರೋದ್ಕೆ ಎಲ್ಲರಿಗೂ ಒಂದೇ ಉತ್ತರ ನಂದು..
ರೇವಣ್ಣ : ನಾನು ಹೇಳದೋ ನಿನ್ನ ಒಳ್ಳೆಯದೋಕ್ಕೋಸ್ಕರ ನೀನೇ ಮಂತ್ರಿಯಾಗಯ್ಯ ಅಲ್ಲೇ ಘೋಷಣೆ ಮಾಡ್ತೀನಿ.
ಕೆಎಂಶಿ: ಇನ್ನೊಂದು ನಾಲ್ಕೈದು ದಿನ ಕಾದಿದ್ರೆ ಏನಾಗೋದು? ಮಂತ್ರಿ ತಗೊಂಡು ತಿಪ್ಪೆಗುಂಡಿಗೆ ಎಸೀರಿ? ಯಾವ ನನ್ಮಗನಿಗೆ ಬೇಕು?
ರೇವಣ್ಣ : ನನಗೆ ಯಾವನಿಗೆ ಮಂತ್ರಿ ಬೇಕಾಗಿದೆ?
ಕೆಎಂಶಿ : ನಾವೇನ್ ಅಂತಹ ಥರ್ಡ್ ಕ್ಲಾಸ್ ನನ್ಮಕ್ಕಳಲ್ಲ ಮಂತ್ರಿಗೆ ಅದಕ್ಕೆ ಇದಕ್ಕೆ ಆಸೆ ಪಡೋಕೆ.
ರೇವಣ್ಣ : ಇನ್ನೂ ಒಂದು ಅರ್ಧ ಗಂಟೆ ಕುಮಾರಣ್ಣನ ಹತ್ರ ಮಾತಾಡಿ ನಿನ್ನ ಹತ್ರ ಮಾತಾಡ್ತೀನಿತಡಿ..
ಕೆಎಂಶಿ : ಆಯ್ತು ಮಾತಾಡೋಣ..
ಇದನ್ನೂ ಓದಿ : Hasana Politics : ಭವಾನಿ ರೇವಣ್ಣ ಆಸೆ ಈಡೇರಲ್ಲ; ಎಚ್‌ಡಿಕೆ ಪರೋಕ್ಷ ಸಂದೇಶ, ಆದ್ರೆ ರೇವಣ್ಣ ಪ್ಲ್ಯಾನೇ ಬೇರೆ!