ಹಾಸನ: ಹಾಸನಾಂಬೆ ದೇವಿಯ ಮೊದಲ ದಿನದ ದರ್ಶನೋತ್ಸವ ಆರಂಭವಾಗಿದೆ. ಮುಂಜಾನೆ 7 ಗಂಟೆಯಿಂದ ದರ್ಶನ ಆರಂಭವಾಗಿದ್ದು, ಸಾವಿರಾರು ಮಂದಿ ಮುಂಜಾನೆಯಿಂದಲೇ ಸೇರಿದ್ದಾರೆ.
ವರ್ಷಕ್ಕೊಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆಯ ಮೊದಲ ದಿನದ ದರ್ಶನ ಆರಂಭವಾಗಿದ್ದು, ಚುಮುಚುಮು ನಸುಕಿನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ರಾತ್ರಿ ಸುರಿದ ಮಳೆಯಿಂದಾಗಿ ದರ್ಶನೋತ್ಸವ ಒಂದು ಗಂಟೆ ತಡವಾಗಿ ಆರಂಭವಾಗುತ್ತಿದೆ. ಸತತ ಮಳೆಯಿಂದ ಹಾಸನಾಂಬೆ ನೈವೇದ್ಯ ಪೂಜೆ ತಡವಾದ್ದರಿಂದ ಮೊದಲ ದಿನದ ದರ್ಶನಕ್ಕೆ ವಿಳಂಬವಾಗಿದೆ. ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ನಿನ್ನೆ ಗರ್ಭಗುಡಿ ಬಾಗಿಲು ತೆರೆದಿದ್ದು, ಇಂದು ಮೊದಲ ದಿನದ ದರ್ಶನ ಆರಂಭವಾಗಿದೆ.