Site icon Vistara News

Hassan News: ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

Hemavathi backwaters

ಹಾಸನ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ತಾಲೂಕು‌ ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ವಿದ್ಯಾರ್ಥಿ ನೀರಿನಲ್ಲಿ ಮುಗಿ ಮೃತಪಟ್ಟಿದ್ದಾನೆ.

ಬೇಲೂರು ಮೂಲದ ಗಿರೀಶ್ (20) ಮೃತ ಯುವಕ. ಹಾಸನದ ರಾಜೀವ್ ಕಾಲೇಜ್‌ನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಕಾಲೇಜಿಗೆ ರಜಾ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಗಿರೀಶ್ ಈಜಲು ತೆರಳಿದ್ದ. ಸರಿಯಾಗಿ ಈಜು ಬಾರದದಿದ್ದರೂ ನೀರಿಗೆ ಇಳಿದಿದ್ದ. ಹೀಗಾಗಿ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದಾರೆ.

ಗೆಳೆಯರ ಜತೆ ನೀರಾಟಕ್ಕೆ ಬಂದ ಹುಡುಗ ಎಲ್ಲರ ಕಣ್ಣೆದುರೇ ನೀರುಪಾಲು

ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Shrinivasa sagara Jalashaya) ಬೆಂಗಳೂರು ಮೂಲದ ಯುವಕನೊಬ್ಬ (Young Man from Bangalore) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ (Drowned in Pond). ಸ್ನೇಹಿತರ ಜತೆ ಬಂದಿದ್ದ ಯುವಕ ಮೋಜು ಮಸ್ತಿ ಮಾಡುತ್ತಾ ನೀರಿಗಿಳಿದಾಗ ಮುಳುಗಿ ಮೃತಪಟ್ಟಿದ್ದಾನೆ.

ಬೆಂಗಳೂರಿನ ಬಾಬೂಸಾಪಾಳ್ಯ ನಿವಾಸಿಯಾಗಿರುವ 23 ವರ್ಷದ ಅಭಿ ಮೃತ ಯುವಕ. ಆತ ತನ್ನ ಗೆಳೆಯರ ಜತೆ ಚಿಕ್ಕ ಬಳ್ಳಾಪುರ ತಾಲೂಕಿನ (Chikkaballapura News) ಶ್ರೀನಿವಾಸ ಸಾಗರ ಜಲಾಶಯ ನೋಡಲು ಬಂದಿದ್ದ. ಜಲಾಶಯದ ನೀರಿನಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವ ಶೋಧಕಾರ್ಯ ನಡೆಯುತ್ತಿದೆ.

ತಂದೆತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ ನೀರುಪಾಲಾಗಿರುವುದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಮನೆಯವರು ಕೂಡಾ ಆಗಮಿಸಿದ್ದು ಶವದ ಹುಡುಕಾಟ ಮುಂದುವರಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.

ಇದನ್ನೂ ಓದಿ : Love Case : ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ಲವ್ವಿ ಡವ್ವಿ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಹೆಂಡ್ತಿ!

ಶಾರ್ಟ್‌ ಸರ್ಕ್ಯೂಟ್ ನಿಂದ ರಸ್ತೆ ಪಕ್ಕದ ಮರಕ್ಕೆ ಬೆಂಕಿ

ಗದಗ: ಗದಗ‌ ಜಿಲ್ಲೆ ಶಿರಹಟ್ಟಿ-ಮಾಗಡಿ ರಸ್ತೆಯ ಡಬಾಲಿ ಕಾಲೇಜು‌ ಬಳಿ ಶಾರ್ಟ್‌ ಸರ್ಕ್ಯೂಟ್ ನಿಂದ ರಸ್ತೆ ಪಕ್ಕದ ಮರಕ್ಕೆ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಎಚ್ಚೆತ್ತ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ‌ ಕಡಿತ ಮಾಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಇದನ್ನೂ ಓದಿ | ಮೂಡಿಗೆರೆ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕಕ್ಕೆ ಅಸಮಾಧಾನ; ತಾಪಂ ಮಾಜಿ ಅಧ್ಯಕ್ಷನ ಮೇಲೆ ತೀವ್ರ ಹಲ್ಲೆ

ಶಿರಹಟ್ಟಿಯಿಂದ ಮಾಗಡಿಗೆ ಹೋಗುವ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ಈ ರಸ್ತೆಯಲ್ಲಿ ವಿದ್ಯುತ್ ತಂತಿಗೂ ಮೀರಿ ಎತ್ತರದಲ್ಲಿ ಮರಗಳು ಇವೆ. ಇದರ ರೆಂಬೆ ಕೊಂಬೆಗಳು ವಿದ್ಯುತ್‌ ತಂತಿಯನ್ನು ಸ್ಪರ್ಶಿಸುತ್ತಿವೆ. ಇದರಿಂದಾಗಿ ಯಾವಾಗ ಬೇಕಾದರೂ ಅಪಾಯ ಉಂಟಾಗುವ ಪರಿಸ್ಥಿತಿ ಇದೆ ಎಂದು ಜನರು ಹೇಳುತ್ತಿದ್ದಾರೆ. ವಿದ್ಯುತ್ ತಂತಿಗೆ ಮರಗಳು ಸ್ಪರ್ಶಿಸದ ಹಾಗೆ‌ ಕಟಾವು ಮಾಡುವಂತೆ ಜನರು ವಿದ್ಯುತ್‌ ಇಲಾಖೆಯನ್ನು ಆಗ್ರಹಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version