Site icon Vistara News

ಹಾಸನದಲ್ಲಿ ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು, ಎಫ್‌ಐಆರ್‌ ದಾಖಲು

deformed idol

ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಕಿಡಿಗೇಡಿಗಳು ನಿರ್ಮಾಣದ ಹಂತದಲ್ಲಿದ್ದ ದೇವರ ವಿಗ್ರಹಗಳನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ.

ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿ ನಿರ್ಮಾಣ ಹಂತದಲ್ಲಿರುವ ದೇವರ ವಿಗ್ರಹಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಬೆಟ್ಟದ ಈಜುಕೊಳ ಹಿಂಭಾಗ, ಶ್ರೀನಿವಾಸ ಕಲ್ಯಾಣ ಮ್ಯೂಸಿಯಂ ನಿರ್ಮಾಣಕ್ಕೆಂದು ನಿರ್ಮಾಣ ಮಾಡಿದ್ದ ವಿಗ್ರಹಗಳಿಗೆ ಹಾನಿಯಾಗಿದೆ. ವಿಗ್ರಹಗಳ ಕೈ, ಕಾಲು ಸೇರಿದಂತೆ ಹಲವು ಭಾಗಗಳನ್ನು ವಿರೂಪಗೊಳಿಸಿ ಪರಾರಿಯಾಗಿದ್ದಾರೆ.

ಅರಸೀಕೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Exit mobile version