ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಬಾಲಕರು (Drowned in water) ನೀರುಪಾಲಾಗಿದ್ದಾರೆ. ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಜೀವನ್ (13), ಸಾತ್ವಿಕ್ (11), ವಿಶ್ವ (12), ಪೃಥ್ವಿ (12) ಮೃತ ದುರ್ದೈವಿಗಳು. ಮೃತ ಮಕ್ಕಳು ಮುತ್ತಿಗೆ ಗ್ರಾಮದವರು ಎಂದು ತಿಳಿದು ಬಂದಿದೆ. ಶಾಲೆಗೆ ರಜೆ ಇರುವುದರಿಂದ ಐವರು ಗೆಳೆಯರಲು ಈಜಲು ಹೊಳೆಗೆ ಹೋಗಿದ್ದರು. ಹೊಳೆಗೆ ಇಳಿದಾಗ ನೀರಿನಿಂದ ಹೊರಬರಲು ಆಗದೆ ನಾಲ್ವರು ನೀರುಪಾಲಾಗಿದ್ದಾರೆ. ಮತ್ತೊರ್ವ ಬದುಕುಳಿದಿದ್ದಾನೆ.
ಇದನ್ನೂ ಓದಿ: Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ
ಈಜಲು ತೆರಳಿದ್ದ ಐವರು ಬಾಲಕರಲ್ಲಿ, ನಾಲ್ವರು ಮುಳುಗಡೆ ಆಗುತ್ತಿದ್ದರು. ಇತ್ತ ಬದುಕುಳಿದ ಓರ್ವ ಬಾಲಕ ಓಡಿ ಹೋಗಿ ಸಮೀಪದಲ್ಲಿದ್ದವರಿಗೆ ಸುದ್ದಿ ತಿಳಿಸಿದ್ದ. ಆದರೆ ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಮುಳುಗಿದ್ದರು.
ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೀರಲ್ಲಿ ಕೊಚ್ಚಿ ಹೋಗಿರುವ ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆಸಿ ಮೇಲೆತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ