Site icon Vistara News

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

Elephant attacks in Sakaleshpur workers escaped

ಹಾಸನ: ಕರಡಿ ಹೆಸರಿನ ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ಕೆಲಕಾಲ ಆತಂಕದ ವಾತಾವರಣವನ್ನೇ ಸೃಷ್ಟಿಸಿತ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಬೆನ್ನಟ್ಟಿ ದಾಳಿ ಮಾಡಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ (Elephant Attack) ಕಾರ್ಮಿಕರಿಬ್ಬರು ಬಚಾವ್ ಆಗಿ ಬದುಕುಳಿದಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವು ಮುಂದುವರಿದಿದೆ. ಆಹಾರವನ್ನು ಅರಸಿ ಬರುವ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಹಾಸನದಲ್ಲಿ ಕಾಡಾನೆ ಹಾವಳಿ (Elephant attack )ಹೆಚ್ಚಾಗಿದೆ. ಹಾಸನದ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಒಂಟಿ ಸಲಗ ದಾಳಿ ಮಾಡಿದೆ.

Elephant attacks in Sakaleshpur workers escaped

ನಿನ್ನೆ ಭಾನುವಾರ ಮಾ.3ರ ಮಧ್ಯಾಹ್ನ 3:30ರ ಸುಮಾರಿಗೆ ಕಾಡಾನೆಯು ತೋಟಕ್ಕೆ ಎಂಟ್ರಿ ಕೊಟ್ಟಿತ್ತು. ಕಾರ್ಮಿಕರನ್ನು ಕಂಡೊಡನೆ ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದೆ. ಪಿಂಟು ಎಸ್ಟೇಟ್‌ನ ಅಡಿಕೆ ತೋಟದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ತೋಟಕ್ಕೆ ಆನೆ ಬಂದಿದ್ದು ಗೊತ್ತೇ ಆಗಿರಲಿಲ್ಲ.

ಅಲ್ಲೆ ಇದ್ದ ಶ್ವಾನವೊಂದು ಕಾಡಾನೆ ಕಂಡು ಬೊಗಳಲು ಶುರು ಮಾಡಿದೆ. ತಲೆ ಎತ್ತಿ ಬಲಗಡೆ ತಿರುಗಿ ನೋಡಿದರೆ ಕಾಡಾನೆಯು ಬರುತ್ತಿರುವುದು ಕಂಡಿದೆ. ದಾಳಿ ಮಾಡಲು ಬರುತ್ತಿದ್ದಂತೆ ತಪ್ಪಿಸಕೊಂಡು ಕಾರ್ಮಿಕ ಓಡಿದ್ದಾನೆ. ಆದರೂ ಬಿಡದೇ ಆತನ ಬೆನ್ನಟ್ಟಿದ ಕಾಡಾನೆ ಅಟ್ಟಾಡಿಸಿದೆ. ಕಾರ್ಮಿಕ ಅಡ್ಡಾದಿಡ್ಡಿಯಾಗಿ ಓಡಿದ್ದರಿಂದ ಕೂದೆಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಬ್ಬ ಕಾರ್ಮಿಕನು ಜತೆಗೆ ಶ್ವಾನ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Bison Attack : ಹಸು ಹುಡುಕಲು ಹೋದ ವ್ಯಕ್ತಿಯನ್ನು ಅಟ್ಟಾಡಿಸಿ ಕಾಡುಕೋಣ ದಾಳಿ

ಇದೇ ವೇಳೆ ಮನೆಯೊಳಗೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದು, ಬೀಗ ಹಾಕಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗೆ ಹೋಗಿ ಮಲಗಿದ್ದಾರೆ. ಕಾಡಾನೆ ಅಟ್ಯಾಕ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಾವರದಲ್ಲಿ ವ್ಯಕ್ತಿಯನ್ನು ಬಲಿ ಪಡೆದಿದ್ದ ಕರಡಿ

ಕಳೆದ ಜ. 4 ರಂದು ಬೇಲೂರು ತಾಲೂಕಿನ ಮತ್ತಾವರದಲ್ಲಿ ಈ ಕರಡಿ ಹೆಸರಿನ ಕಾಡಾನೆಯು ವಂಸತ್ ಎಂಬುವರ ಮೇಲೆ ದಾಳಿ ಮಾಡಿ, ತುಳಿದು ಕೊಂದಿತ್ತು. ಈ ವೇಳೆ ಕಾಡಾನೆಯನ್ನು ಹಿಡಿಯುವಂತೆ ಜನರು ಒತ್ತಾಯಿಸಿದ್ದರು. ಈ ಮಧ್ಯೆ ಕಳೆದ ಹದಿನೈದು ದಿನಗಳ ಹಿಂದೆ ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ಈ ಕಾಡಾನೆ ದಾಳಿ ಮಾಡಿತ್ತು. ಇದೀಗ ಕೆಸಗುಲಿ ಗ್ರಾಮದಲ್ಲಿ ಇಬ್ಬರು ಕೂಲಿ ಕಾರ್ಮಿಕರ ಮೇಲೆ ಎರಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version