ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಪುಂಡಾಟ ಮುಂದುವರಿದಿದ್ದು, ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಗೆ ಬಂದು ಪುಂಡಾಟ ನಡೆಸಿದೆ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಬೆಂಗಳೂರು- ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಪುಂಡಾಟದಿಂದ ಗಂಟೆಗಟ್ಟಲೆ ಟ್ರಾಫಿಕ್ ಅಸ್ತವ್ಯವಸ್ತವಾಯಿತು.
ನ್ಯಾಯಬೆಲೆ ಅಂಗಡಿಯಿಂದ ಅಕ್ಕಿಮೂಟೆಯನ್ನೇ ಎಳೆದು ತಂದು ರಸ್ತೆಗೆ ಹಾಕಿದ ಕಾಡಾನೆ, ಅದನ್ನು ಚೆಲ್ಲಾಡಿ ತಿಂದು ಹಾಕಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ರಸ್ತೆಯಲ್ಲಿ ನಿಂತು, ವಾಹನಗಳನ್ನು ಅಡ್ಡಗಟ್ಟಿತು. ಕಾಡಾನೆ ಕಂಡು ಗ್ರಾಮದ ಜನ ಭೀತಗೊಂಡು ಓಡಿದರು.
ನಿನ್ನೆ ಇದೇ ಪ್ರದೇಶದ್ಲಲಿಯೇ ಮನೆಗೆ ನುಗ್ಗಿ ಕಿಟಕಿ ಗಾಜುಗಳನ್ನು ಈ ಪುಂಡಾನೆ ಪುಡಿ ಮಾಡಿತ್ತು. ಪುಂಡಾಟ ನಡೆಸುತ್ತಿರುವ ಈ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಇಂದು ಈ ಮಕ್ನಾ ಆನೆಯನ್ನು ಹಿಡಿಯುವುದಕ್ಕೆ ಕಾರ್ಯಾಚರಣೆ ನಡೆಯಲಿದೆ.
ಇದನ್ನೂ ಓದಿ: Elephant attack: ಹೊಸೂರಿನಲ್ಲಿ ಹಸು ಮೇಯಿಸಲು ಹೋದಾತ ಕಾಡಾನೆಗೆ ಬಲಿ; ಹಾಸನದಲ್ಲೂ ಇಬ್ಬರ ಮೇಲೆ ದಾಳಿ