ಹಾಸನ: ಕಾಡಾನೆಗಳ ಉಪಟಳದಿಂದ ರೋಸಿ ಹೋದ ಗ್ರಾಮಸ್ಥರೇ ತೋಡಿದ ಖೆಡ್ಡಾಗೆ ಆನೆ ಮರಿಯೊಂದು ಬಿದ್ದಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ಕಾಡಾನೆ ಮರಿಯೊಂದು ಖೆಡ್ಡಾಗೆ ಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.
ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಮಲೆನಾಡು ಭಾಗದ ಹೊಸಕೊಪ್ಪಲು ಗ್ರಾಮದ ಜನತೆ, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನೆಲೆಯಲ್ಲಿ ರೋಸಿ ಹೋಗಿ ತಮ್ಮದೇ ಪರಿಹಾರ ಕಂಡುಕೊಂಡಿದ್ದರು. ಕಾಡಾನೆ ಕೆಡವಲು ಡಿ.26ರಂದು ಕಂದಕ ತೋಡಿದ್ದರು. ಬಿದಿರು, ಸೊಪ್ಪು ಹಾಕಿ ಮುಚ್ಚಿದ್ದರು. ಬೇಸತ್ತ ಜನರ ಪ್ರತಿರೋಧಕ್ಕೆ ಅರಣ್ಯ ಇಲಾಖೆ ಬೆಚ್ಚಿಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಆನೆಮರಿಯನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ | Elephant attack | ಕಾಡಾನೆ ತುಳಿತಕ್ಕೆ ಅರಣ್ಯ ಇಲಾಖೆ ಕಾವಲುಗಾರ ಬಲಿ; ಇನ್ನೊಂದೆಡೆ ತೋಟ ನಾಶ