Site icon Vistara News

Honeybee Attack: ಹಾಸನದಲ್ಲಿ ಹೆಜ್ಜೇನು ದಾಳಿಗೆ ನರಳಾಡಿ ಪ್ರಾಣಬಿಟ್ಟ ರೈತ

Farmer dies after being attacked by bees in Hassan

ಹಾಸನ: ಹೆಜ್ಜೇನು ಕಡಿದು (Honeybee Attack) ರೈತರೊಬ್ಬರು (Farmer Death) ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಧರಸಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಆನಂದ್ (45) ಮೃತ ದುರ್ದೈವಿ.

ಜಮೀನಿನಲ್ಲಿ ಆನಂದ್‌ ಕೆಲಸ ಮಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನಿನಿಂದ ತಪ್ಪಿಸಿಕೊಳ್ಳಲು ಆನಂದ್‌ ಹರಸಾಹಸ ಪಟ್ಟಿದ್ದಾರೆ. ತುಂಬಾ ದೂರ ಓಡಿ ಹೋದರೂ ಬಿಡದ ನೂರಾರು ಜೇನು ಹುಳುಗಳ ಕಡಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

ಕೂಡಲೇ ಅಲ್ಲಿದ್ದವರು ಆನಂದ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್‌ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Murder Case : ಹಳೇ ದ್ವೇಷಕ್ಕೆ ಕೋಲಾರದಲ್ಲಿ ಹರಿಯಿತು ನೆತ್ತರು

ವಿಜಯನಗರದಲ್ಲಿ ಚಿರತೆಗಳ ಕಾಟಕ್ಕೆ ರೈತರಿಗೆ ಶುರುವಾಯ್ತು ಜೀವ ಭಯ

ಅರಣ್ಯ ಇಲಾಖೆಯು ರೈತರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಗ್ರಾಮಗಳಲ್ಲಿ ಚಿರತೆಗಳ ಕಾಟಕ್ಕೆ ಹೈರಾಣಾಗಿರುವ ರೈತರು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ಹೊಸಪೇಟೆಯ ರಾಯರಕೆರೆ, ಜಂಬುನಾಥಹಳ್ಳಿ, ಕಲ್ಲಹಳ್ಳಿ ಭಾಗದಲ್ಲಿ ಒಂದು ತಿಂಗಳಲ್ಲಿ ಕನಿಷ್ಠ ನಾಲ್ನೈದು ಬಾರಿ ಚಿರತೆಗಳು ಪ್ರತ್ಯಕ್ಷವಾಗಿವೆ.

ರಾತ್ರೋರಾತ್ರಿ ಬರುವ ಚಿರತೆಗಳು ಕುರಿ, ಆಡು, ನಾಯಿಗಳನ್ನು ಹೊತ್ತೊಯುತ್ತಿವೆ. ಜನರ ಮೇಲೂ ಚಿರತೆಗಳು ದಾಳಿ ಮಾಡಿವೆ. ಕೆಲ ರೈತರು ಆತ್ಮರಕ್ಷಣೆಗಾಗಿ ನಾಡ ಬಂದೂಕುಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಗನ್‌ ಲೈಸೆನ್ಸ್ ರೀನಿವಲ್ ವೇಳೆ ಡಿಸಿಗೆ ಅರಣ್ಯ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರಂತೆ.

ಕಾಡುಪ್ರಾಣಿಗಳ ಹಾವಳಿ ಇಲ್ಲವೆಂದು ಅರಣ್ಯಾಧಿಕಾರಿಗೂ ಡಿಸಿಗೆ ವರದಿಯನ್ನು ಕೊಟ್ಟಿದ್ದರಂತೆ. ನಮ್ಮ ಕಣ್ಣೇದುರಿಗೆಯೇ ಮೇಕೆ, ಕುರಿ ಹಾಗೂ ಕರುವನ್ನು ಚಿರತೆಯು ಹೊತ್ತೊಯ್ದಿವೆ. ನಾವು ಶೆಡ್‌ ನೊಳಗೆ ಲಾಕ್ ಮಾಡಿಕೊಂಡಿದ್ದಕ್ಕೆ ಬಚಾವ್ ಆಗಿದ್ದೇವೆ ಎಂದು ರೈತರೊಬ್ಬರು ಆತಂಕವನ್ನು ತೊಡಿಕೊಂಡಿದ್ದಾರೆ. ಅರಣ್ಯ ಇಲಾಖೆಯವರು ನಾಲ್ಕು ದಿನ ಬೇಕಾಬಿಟ್ಟಿಯಾಗಿ ಬೋನ್ ಇಟ್ಟು ವಾಪಸ್‌ ತೆಗೆದುಕೊಂಡು ಹೋಗುತ್ತಾರೆ. ಮೊದಲೇ ಬರಗಾಲವಿದೆ, ಹೊಲಗದ್ದೆಗಳಲ್ಲಿ ಬೆಳೆಯಿಲ್ಲ. ಕನಿಷ್ಠ ಸಾಕು ಪ್ರಾಣಿಗಳನ್ನಾದ್ರೂ ಉಳಿಸಿಕೊಳ್ಳೋಣಾ ಎಂದರೆ ಚಿರತೆ ಕಾಟದಿಂದ ಬೇಸತ್ತಿದ್ದೇವೆ. ನಮ್ಮ ರಕ್ಷಣೆ ಮಾಡಿಕೊಳ್ಳಲು ನಾಡ ಬಂದೂಕು ರೀನಿವಲ್ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಕುರಿ ಮೇಲೆ ಚಿರತೆ ದಾಳಿ

ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ ಮೇಲೆ ಚಿರತೆ ದಾಳಿ ಮಾಡಿದೆ. ಮಂಡ್ಯದ ಮಳವಳ್ಳಿ ತಾಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುರಿ ಕೊಟ್ಟಿಗೆ ಬಳಿ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಕಾಂಪೌಂಡ್ ಏರಿ ನಿಂತು ಕುರಿಗಳ ಮೆಲೆ ದಾಳಿ ನಡೆಸಲು ಸ್ಕೇಚ್ ಹಾಕುತ್ತಿರುವ ಚಿರತೆ ದೃಶ್ಯ ಸೆರೆಯಾಗಿದೆ.

ಚಿರತೆಯು ಕಳೆದ 15 ದಿನಗಳಿಂದ ಗ್ರಾಮದಲ್ಲೇ ಬೀಡುಬಿಟ್ಟು ಆತಂಕ ಸೃಷ್ಟಿಸುತ್ತಿದೆ. ಸುಮಾರು 100 ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ದೂರು ಕೊಟ್ಟರು ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ. ತಕ್ಷಣವೇ ಚಿರತೆ ಸೆರೆಗೆ ಬೋನ್ ಅಳವಡಿಸಿ ಎಂದು ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version