ಹಾಸನ: ನಿಮ್ಮ ಬೆಂಬಲವನ್ನು ಪಡೆದು ದಿಲ್ಲಿವರೆಗೆ ಸಾಗಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೊನೆಯ ಆಸೆಯಂತೆ, ಅವರು ಬದುಕಿರುವಾಗಲೆ ನಿಮ್ಮ ಪಕ್ಷ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವುದೊಂದೇ ನನ್ನ ಆಸೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ಪಂಚರತ್ನ ಯಾತ್ರೆ ಅಂಗವಾಗಿ ಹಾಸನದ ನಗರ್ತಿ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಯರ್ತರನ್ನುದ್ದೇಶಿಸಿ ಮಾತನಾಡಿದರು.
ಕಲಹ ಮರೆತು ಒಂದೇ ವೇದಿಕೆಯಲ್ಲಿ ಸಹೋದರರು ಕಾಣಿಸಿಕೊಂಡರು. ಎಚ್.ಡಿ. ಕುಮಾರಸ್ವಾಮಿ ಭಾಷಣ ಆರಂಭಿಸಿದ ಸಮಯದಲ್ಲಿ ಸೂರಜ್ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಎದ್ದು ನಿಂತು ಗೌರವ ಸಲ್ಲಿಸಿದರು. ಎಲ್ಲರ ಹೆಸರೇಳಿ ಸ್ವಾಗತ ಕೋರಿದ ಕುಮಾರಸ್ವಾಮಿ, ಆರೋಗ್ಯದ ಸಮಸ್ಯೆಯಿಂದ ದೇವೇಗೌಡರು ಬಂದಿಲ್ಲ. ನಿಮ್ಮ ಕುಟುಂಬದ ಮಕ್ಕಳ ರೀತಿ ನಮ್ಮ ಬೆಳೆಸಿದ್ದೀರಾ. ನಮ್ಮ ಉಸಿರಿರೋರತನಕ ನಿಮ್ಮ ಕಷ್ಟಕ್ಕೆ ಆಗುತ್ತೇವೆ ಎಂದರು.
ನಾವು ಭೂಮಿ ಮೇಲೆ ಬದುಕಿರೋವರೆಗೆ ನಿಮ್ಮ ಪರ ಇರುತ್ತೇವೆ. ಜಿಲ್ಲೆಯ ಅಭಿವೃದ್ಧಿ ದಿನದ 20 ಗಂಟೆ ಚಿಂತಿಸಿದ್ದಾನೆ, ನಮ್ ರೇವಣ್ಣ. ದೇವೇಗೌಡರ ಶಕ್ತಿ ತುಂಬಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ ದೆಹಲಿಗೆ ಹೋಗಬೇಕಾದರೆ ಆಸ್ತಿ ಮಾಡಲಿಲ್ಲ, ನಮ್ ಆಸ್ತಿ ನೀವೇ. ನಾವೂ ಆಸ್ತಿ ಮಾಡಿಲ್ಲ. ರೈತರ ಸರ್ಕಾರ ವನ್ನು ನೋಡಬೇಕೆಂಬುದು ದೇವೇಗೌಡರ ಹಂಬಲ. ಅವರು ಬದುಕಿರುವಾಗಲೇ ಅವರ, ನಿಮ್ಮ ಪಕ್ಷ ಅಧಿಕಾರಕ್ಕೆ ತರಬೇಕೆಂದು ಹೋರಾಡುತ್ತಿದ್ದೇನೆ. ಈಶ್ವರ ದೇವರ ಪ್ರಸಾದ ಆಗಿದೆ, ದೈವಾನುಗ್ರಹದಿಂದ 2 ಬಾರಿ ಸಿಎಂ ಆದೆ. ತಂದೆ, ತಾಯಿ ಪುಣ್ಯದಿಂದ ಸಿಎಂ ಆದೆ. ಜನರ ನಿರೀಕ್ಷೆ ಅನುಗುಣ ಕೆಲಸ ಮಾಡಿದ್ದೇವೆ.
ಸಾರಾಯಿ ನಿಷೇಧ ಮಾಡಬೇಕೆಂಬುದು ತಾಯಂದಿರ ಆಪೇಕ್ಷೆ ಆಗಿತ್ತು, ಹಾಗಾಗಿ ನಿಲ್ಲಿಸಿದೆ. ಲಾಟರಿಯಿಂದ ಸರ್ಕಾರಕ್ಕೆ ಸಂಪಾದನೆ ಬೇಡ ಅಂತ ಲಾಟರಿ ನಿಲ್ಲಿಸಿದೆ. ಈ ಪಕ್ಷಕ್ಕೆ ಅಧಿಕಾರ ಕೊಡಿ ಅಂತಿದ್ದೀನಿ, ನಾ ಸಿಎಂ ಆಗಬೇಕು ಅಂತ ಅಲ್ಲ.
ನಿಮ್ಮ ಶ್ರಮದ ಫಲ ದೇವೇಗೌಡರು ದೆಹಲಿ ಹೋಗಿದ್ದು. ರೈತರು-ಬಡವರ ಬಗ್ಹೆಯೇ ಹೆಚ್ವು ಅವರು ಯೋಚಿಸಿದ್ದು. ಆಸ್ತಿ ಮಾಡಬೇಕು ಅಂತ ಅಲ್ಲ, ನೀವೇ ನಮ್ಮ ಆಸ್ತಿ. ನಾವು ಅದೇ ದಾರಿಯಲ್ಲಿ ನಡೆಯುತ್ತಿದ್ದೇವೆ. ರೈತರ ಸರ್ಕಾರ ನೋಡಬೇಕು ಅನ್ನೋದು ಅವರ ಆಸೆ. ಅವರು ಬದುಕಿರುವಾಗಲೇ ರೈರ ಸರ್ಕಾರ ಬರಬೇಕು ಅನ್ನೋದು ಅವರ ಆಸೆ. ನಿಮ್ಮ ಋಣ ತೀರಿಸುತ್ತೇವೆ ಎಂದು ಜನ ಹೇಳುತಿದ್ದಾರೆ. ಹೊದಗಲ್ಲೆಲ್ಲ ನಿಮ್ಮನ್ನ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ.
ಪ್ರತಿ ಕುಟುಂಬಕ್ಕೆ ಮನೆ ಇರಬೇಕು. ಮನೆ ಇಲ್ಲದವರಿಗೆ 5 ಲಕ್ಷದ ಮನೆ ಕಟ್ಡುತ್ತೇವೆ. 2.50ಲಕ್ಷ ಕೋಟಿ ಬೇಕು, ತರೋದು ಗೊತ್ತು. 40-50 ಸ್ಥಾನ ಗೆದ್ರೆ ಆಗುವುದಿಲ್ಲ. ಬಿಜೆಪಿ-ಜೆಡಿಎಸ್ ಜತೆ ಸೇರಿ 6 ತಿಂಗಳು ವರ್ಷದ ಅಧಿಕಾರ ಮಾಡಿದರೆ ಆಗಲ್ಲ. ಉತ್ತರ ಕರ್ನಾಟಕ ಜನರ ಬದುಕು ನೋಡಿದ್ರೆ ಶಿಲಾಯುಗದಲ್ಲಿ ಇದ್ದೇವೆ ಎನ್ನಿಸುತ್ತದೆ ಎಂದು ಬೇಸರ ತೊಡಿಕೊಂಡರು.