ಹಾಸನ: ವೃದ್ಧರೊಬ್ಬರು ಆಕಸ್ಮಿಕವಾಗಿ ಬಿಟ್ಟುಹೋಗಿದ್ದ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ಟೀ ಅಂಗಡಿ ಮಾಲೀಕ ಹಿಂದಿರುಗಿಸಿದ್ದಾರೆ. ವಾರಸುದಾರರನ್ನು ಹುಡುಕಲು ವಾಟ್ಸ್‌ಆ್ಯಪ್ ಸಹಾಯಕ್ಕೆ ಬಂದಿದೆ.
ಸಕಲೇಶಪುರ ಪಟ್ಟಣದ BM ರಸ್ತೆಯಲ್ಲಿ ಲಕ್ಷ್ಮಣ್ ಎಂಬುವವರು ಟೀ ಅಂಗಡಿ ನಡೆಸುತ್ತಾರೆ. ಜೂನ್ 23ರಂದು ವೃದ್ಧರೊಬ್ಬರು ಬ್ಯಾಗ್ ಬೀಳಿಸಿಕೊಂಡು ಹೋಗಿದ್ದರು. ಅದನ್ನು ತೆರೆದು ನೋಡಿದಾಗ 5,000 ರೂ. ನಗದು ಹಾಗೂ ಬ್ಯಾಂಕ್ ಪಾಸ್ ಬುಕ್ ಸಿಕ್ಕಿತ್ತು.
ಪಾಸ್‌ಬುಕ್ ತೆರೆದು ನೋಡಿದಾಗ ವೃದ್ಧನ ವಿಳಾಸ ತಿಳಿದಿತ್ತು. ಮಳಲಿ ಗ್ರಾಮದ ವಸಂತಕುಮಾರ್ ಎಂಬವರದ್ದು ಎಂದು ತಿಳಿದುಬಂದಿತ್ತು. ಆದರೆ ಅದರಲ್ಲಿ ದೂರವಾಣಿ ಸಂಖ್ಯೆ ಇಲ್ಲದ್ದರಿಂದ, ಈ ಕುರಿತು ಮಾಹಿತಿಯನ್ನು ವಾಟ್ಸ್‌ಆ್ಯಪ್ ಗುಂಪಿನಲ್ಲಿ ಲಕ್ಷ್ಮಣ್ ಹಂಚಿಕೊಂಡರು. ಅದು ವಿವಿಧ ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಹರಿದಾಡಿತ್ತು. ಇಂತಹ ಒಂದು ವಾಟ್ಸ್‌ಆ್ಯಪ್ ಗುಂಪಿನಲ್ಲಿ ನೋಡಿದ ವ್ಯಕ್ತಿಯೊಬ್ಬರು ವಸಂತಕುಮಾರ್ ಅವರನ್ನು ಗುರುತಿಸಿ, ವಸಂತಕುಮಾರ್ ಅವರ ಮಗನಿಗೆ ವಿಷಯ ತಿಳಿಸಿದ್ದಾರೆ.
ಟೀ ಅಂಗಡಿಗೆ ಆಗಮಿಸಿ ಹಣ ಮತ್ತು ಪಾಸ್ ಪುಸ್ತಕವನ್ನು ವಸಂತಕುಮಾರ್ ಪಡೆದುಕೊಂಡಿದ್ದಾರೆ. ಪ್ರಾಮಾಣಿಕವಾಗಿ ಹಿಂತಿರುಗಿಸಿದ ಲಕ್ಷ್ಮಣ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಇದನ್ನೂ ಓದಿ| ಹೀಗೂ ಉಂಟೇ! ಹಾಸನ ಪೊಲೀಸರಿಂದ ಎರಡು ಹಸುಗಳ ಬಂಧನ