ರಸ್ತೆಯಲ್ಲಿ ಸಿಕ್ಕ ಹಣವನ್ನು ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ - Vistara News

ಹಾಸನ

ರಸ್ತೆಯಲ್ಲಿ ಸಿಕ್ಕ ಹಣವನ್ನು ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ

ತಮಗೆ ಸಿಕ್ಕ ಹಣ ಯಾರದ್ದು ಎಂದು ತಿಳಿಯಿತಾದರೂ ದೂರವಾಣಿ ಸಂಖ್ಯೆ ಸಿಗಲಿಲ್ಲ. ಕೊನೆಗೆ ಟೀ ಅಂಗಡಿ ಮಾಲೀಕನ ಸಹಾಯಕ್ಕೆ ಬಂದಿದ್ದು ವಾಟ್ಸ್‌ಆ್ಯಪ್ ಗುಂಪು.

VISTARANEWS.COM


on

ಹಣವನ್ನು ಹಿಂದಿರುಗಿಸುತ್ತಿರುವ ಟೀ ಅಂಗಡಿ ಮಾಲೀಕ ಲಕ್ಷ್ಮಣ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಸನ: ವೃದ್ಧರೊಬ್ಬರು ಆಕಸ್ಮಿಕವಾಗಿ ಬಿಟ್ಟುಹೋಗಿದ್ದ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ಟೀ ಅಂಗಡಿ ಮಾಲೀಕ ಹಿಂದಿರುಗಿಸಿದ್ದಾರೆ. ವಾರಸುದಾರರನ್ನು ಹುಡುಕಲು ವಾಟ್ಸ್‌ಆ್ಯಪ್ ಸಹಾಯಕ್ಕೆ ಬಂದಿದೆ.

ಸಕಲೇಶಪುರ ಪಟ್ಟಣದ BM ರಸ್ತೆಯಲ್ಲಿ ಲಕ್ಷ್ಮಣ್ ಎಂಬುವವರು ಟೀ ಅಂಗಡಿ ನಡೆಸುತ್ತಾರೆ. ಜೂನ್‌ 23ರಂದು ವೃದ್ಧರೊಬ್ಬರು ಬ್ಯಾಗ್‌ ಬೀಳಿಸಿಕೊಂಡು ಹೋಗಿದ್ದರು. ಅದನ್ನು ತೆರೆದು ನೋಡಿದಾಗ 5,000 ರೂ. ನಗದು ಹಾಗೂ ಬ್ಯಾಂಕ್ ಪಾಸ್ ಬುಕ್ ಸಿಕ್ಕಿತ್ತು.

ಪಾಸ್‌ಬುಕ್‌ ತೆರೆದು ನೋಡಿದಾಗ ವೃದ್ಧನ ವಿಳಾಸ ತಿಳಿದಿತ್ತು. ಮಳಲಿ ಗ್ರಾಮದ ವಸಂತಕುಮಾರ್‌ ಎಂಬವರದ್ದು ಎಂದು ತಿಳಿದುಬಂದಿತ್ತು. ಆದರೆ ಅದರಲ್ಲಿ ದೂರವಾಣಿ ಸಂಖ್ಯೆ ಇಲ್ಲದ್ದರಿಂದ, ಈ ಕುರಿತು ಮಾಹಿತಿಯನ್ನು ವಾಟ್ಸ್‌ಆ್ಯಪ್ ಗುಂಪಿನಲ್ಲಿ ಲಕ್ಷ್ಮಣ್‌ ಹಂಚಿಕೊಂಡರು. ಅದು ವಿವಿಧ ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಹರಿದಾಡಿತ್ತು. ಇಂತಹ ಒಂದು ವಾಟ್ಸ್‌ಆ್ಯಪ್ ಗುಂಪಿನಲ್ಲಿ ನೋಡಿದ ವ್ಯಕ್ತಿಯೊಬ್ಬರು ವಸಂತಕುಮಾರ್‌ ಅವರನ್ನು ಗುರುತಿಸಿ, ವಸಂತಕುಮಾರ್ ಅವರ ಮಗನಿಗೆ ವಿಷಯ ತಿಳಿಸಿದ್ದಾರೆ.

ಟೀ ಅಂಗಡಿಗೆ ಆಗಮಿಸಿ ಹಣ ಮತ್ತು ಪಾಸ್‌ ಪುಸ್ತಕವನ್ನು ವಸಂತಕುಮಾರ್‌ ಪಡೆದುಕೊಂಡಿದ್ದಾರೆ. ಪ್ರಾಮಾಣಿಕವಾಗಿ ಹಿಂತಿರುಗಿಸಿದ ಲಕ್ಷ್ಮಣ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಇದನ್ನೂ ಓದಿ| ಹೀಗೂ ಉಂಟೇ! ಹಾಸನ ಪೊಲೀಸರಿಂದ ಎರಡು ಹಸುಗಳ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

karnataka Weather : ನಾಳೆಗೆ ಹೈವೇವ್‌ ಅಲರ್ಟ್‌- ಬಿರುಗಾಳಿ ಸಹಿತ ಮಳೆಯೊಂದಿಗೆ ಅಪ್ಪಳಿಸಲಿದೆ ರಕ್ಕಸ ಅಲೆ

karnataka Weather Forecast : ಕರಾವಳಿಯಲ್ಲಿ ಬಿರುಗಾಳಿ ಬೀಸಲಿದ್ದು, ಕಡಲತೀರದಲ್ಲಿ ಅಲೆಗಳು ಅಪ್ಪಳಿಸಲಿದೆ. ಹಲವಡೆ ಹೈವೇವ್‌ ಅಲರ್ಟ್‌ ನೀಡಲಾಗಿದ್ದು, ಗುಡುಗು ಸಹಿತ ಬಿರುಗಾಳಿಯೊಂದಿಗೆ (Rain News) ಮಳೆಯಾಗಲಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಜೂನ್‌ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Heavy rain) ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಸುತ್ತಮುತ್ತ ವ್ಯಾಪಕ (Rain News) ಮಳೆಯಾಗಲಿದ್ದು, ಬಲವಾದ ಗಾಳಿಯು ಬೀಸಲಿದೆ. ಕೆಲವೆಡೆ ಭೂ ಕುಸಿತವಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಸೇರಿದಂತೆ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು, ವಿಜಯನಗರದ ಹಲವೆಡೆ ಬಿರುಗಾಳಿ ಸಹಿತ (40-50 ಕಿ.ಮೀ) ಗುಡುಗಿನೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಈ ಜಿಲ್ಲೆಗಳಿಗೆ ಎಚ್ಚರಿಕೆ

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ, ಕೊಡಗು ಜಿಲ್ಲೆಗಳಲ್ಲಿ ಗಾಳಿ ವೇಗವು 40-50 ಕಿ,ಮೀ ವ್ಯಾಪ್ತಿಯಲ್ಲಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಗದಗ, ಚಾಮರಾಜನಗರ, ಮೈಸೂರು, ಮಂಡ್ಯ, ದಾವಣಗೆರೆಯಲ್ಲೂ ವಿಪರೀತ ಮಳೆಯಾಗಲಿದೆ.

ಹೈವೇವ್‌ ಅಲರ್ಟ್‌!

ಜೂನ್‌ 24ರಂದು ಕರಾವಳಿಯಲ್ಲಿ ಗಂಟೆಗೆ 35 ರಿಂದ 55 ಕಿ.ಮೀ ವೇಗದಲ್ಲಿ ತೀವ್ರ ಗಾಳಿ ಬೀಸಲಿದೆ. ದಕ್ಷಿಣ ಕನ್ನಡದ ಮುಲ್ಕಿಯಿಂದ ಮಂಗಳೂರಿನವರೆಗೆ ಅಲೆಗಳ ಎಚ್ಚರಿಕೆ ನೀಡಲಾಗಿದೆ. 2.8 ರಿಂದ 3.1 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಹೇಳಲಿದೆ. ಇನ್ನೂ ಉಡುಪಿಯ ಬೈಂದೂರಿನಿಂದ ಕಾಪುವರೆಗೆ ಹೈ ವೇವ್ ಅಲರ್ಟ್ ನೀಡಲಾಗಿದೆ. 2.9 – 3.2 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ 3.0 -3.3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಅಪ್ಪಳಿಸಲಿದೆ. ಹೀಗಾಗಿ ಪ್ರವಾಸಿಗರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Bengaluru Power Cut: ತುರ್ತು ನಿರ್ವಹಣಾ ಕೆಲಸ; ಜೂ.25ರಂದು ಬೆಂಗಳೂರಿನಲ್ಲಿ ವಿದ್ಯುತ್‌ ಕಡಿತ

ಕರಾವಳಿಯಲ್ಲಿ ಮಳೆಯಾಟ

ನೈರುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ, ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡದ ಪಣಂಬೂರು, ಬೀದರ್‌ನ ಭಾಲ್ಕಿಯಲ್ಲಿ 5 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಕೊಟ್ಟಿಗೆಹಾರದಲ್ಲಿ 4 ಸೆಂ.ಮೀ, ಉಡುಪಿ, ಸುಳ್ಯ, ಬಾದಾಮಿ, ದೇವರಹಿಪ್ಪರಗಿಯಲ್ಲಿ 3 ಸೆಂ.ಮೀ ಮಳೆ ಸುರಿದಿದೆ.

ಧರ್ಮಸ್ಥಳ, ಮಂಕಿ, ಪುತ್ತೂರು, ಅಂಕೋಲಾ, ರೋಣ, ಭಾಗಮಂಡಲ, ಆಗುಂಬೆಯಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ. ಕಾರವಾರ, ಮೂಲ್ಕಿ, ಕುಂದಾಪುರ, ಬೆಳ್ತಂಗಡಿ, ಹೊನ್ನಾವರ, ಕಾರ್ಕಳ , ಉಪ್ಪಿನಂಗಡಿ , ನರಗುಂದ, ನಿಪ್ಪಾಣಿ, ಶಹಪುರ, ಕುಷ್ಟಗಿ, ಲಿಂಗನಮಕ್ಕಿ ಎಚ್‌ಎಂಎಸ್ , ಪೊನ್ನಂಪೇಟೆಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Suraj Revanna Case: ಸೂರಜ್‌ʼಗೇʼ ಸಂಕಷ್ಟ; ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಆಪ್ತ ಪರಾರಿ!

Suraj Revanna Case: ಸೂರಜ್ ರೇವಣ್ಣ ಪರ, ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ಪರಾರಿಯಾಗಿದ್ದಾನೆ. ಆತ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿರುವ ವಿಡಿಯೊ ವೈರಲ್‌ ಆಗಿದ್ದರಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

VISTARANEWS.COM


on

Koo

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Suraj Revanna Case) ಸೂರಜ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಸೂರಜ್‌ನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ, ಮತ್ತೊಂದೆಡೆ ಸೂರಜ್ ಪರ, ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ಪರಾರಿಯಾಗಿರುವುದು ಕಂಡುಬಂದಿದೆ.

ದೂರು ನೀಡಿದ ಬಳಿಕ ಹೊಳೆನರಸೀಪುರ ಠಾಣೆಯಿಂದ ಸೂರಜ್‌ ಆಪ್ತ ಶಿವಕುಮಾರ್ ಓಡಿಹೋಗಿದ್ದಾನೆ ಎನ್ನಲಾಗಿದೆ. ಸೂರಜ್ ರೇವಣ್ಣ ಜತೆ ಇದ್ದು ಬ್ಲ್ಯಾಕ್ ಮಾಡಿಸಿರುವ ಆರೋಪ ಕೇಳಿಬಂದಿದ್ದರಿಂದ ಶಿವಕುಮಾರ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಶಿವಕುಮಾರ್ ಹಾಗೂ ಸಂತ್ರಸ್ತ ಇಬ್ಬರೂ ಬಿಜೆಪಿ ಮುಖಂಡರ ಜತೆ ಇರೋ ವಿಡಿಯೊ ವೈರಲ್ ಆಗಿದ್ದು, ಇವರಿಬ್ಬರೇ ಸೇರಿ ಸೂರಜ್ ರೇವಣ್ಣನನ್ನು ಟ್ರ್ಯಾಪ್ ಮಾಡಿದ್ದಾರೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಹೀಗಾಗಿ ವಿಚಾರಣೆ ವೇಳೆ ಬಂಧನವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂರಜ್‌ ಆಪ್ತ ನಾಪತ್ತೆಯಾಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ | Suraj Revanna Case: ಸೂರಜ್ ಪ್ರಕರಣದ ತನಿಖೆ ಹೊಣೆಯೂ ಬಿ.ಕೆ. ಸಿಂಗ್ ಹೆಗಲಿಗೆ

ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್‌

ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ ಮಾಡಿ ಅರಕಲಗೂಡಿನ ಜೆಡಿಎಸ್‌ ಕಾರ್ಯಕರ್ತ ದೂರು ನೀಡಿದ್ದರು. ಆದರೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೂನ್‌ 21ರಂದು ಸಂತ್ರಸ್ತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಐದು ಕೋಟಿ ಹಣ ನೀಡದಿದ್ದರೆ ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಸಲ್ಲಿಸಿದ ದೂರಿನ ಮೇರೆಗೆ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಸಂತ್ರಸ್ತನ ವಿರುದ್ಧ ಕೇಸ್ ದಾಖಲಾಗಿತ್ತು.

ದೂರು ನೀಡಿದ ಬಳಿಕ ಮಾತನಾಡಿದ್ದ ಶಿವಕುಮಾರ್‌, ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಸಂತ್ರಸ್ತ ಹೋಗಿದ್ದ. ಕೆಲಸ ಕೇಳಿ ವಾಪಸ್ ಬಂದ ಬಳಿಕ ಬ್ಲ್ಯಾಕ್ ಮೇಲ್ ಮಾಡಿರೊದಾಗಿ ಆರೋಪಿಸದ್ದ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ. ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು. ನೀನು, ನಿಮ್ಮ ಬಾಸ್‌ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಸಂತ್ರಸ್ತ ಬೆದರಿಕೆ ಹಾಕಿದ್ದ ಎಂದು ಹೇಳಿದ್ದ.

ಇದನ್ನೂ ಓದಿ | Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

ಈ ವಿಚಾರವನ್ನು ನಾನು ನಮ್ಮ ಬಾಸ್‌ಗೆ ತಿಳಿಸಿದೆ. ನಾನೇನು ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು ಎಂದು ಬಾಸ್ ಹೇಳಿದರು. ನಂತರ ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್‌ಸಿ ಸೀಲ್ ಹಾಕಿಸಿ ಫೋಟೊ ಹಾಕಿ ಬೆದರಿಕೆ ಹಾಕಿದ್ದಾನೆ. ಮೆಡಿಕೊ ಲೀಗಲ್ ಕೇಸ್ ಸೀಲ್ ಇರುವ ಆಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಐದು ಕೋಟಿ ಬಳಿಕ ಮೂರು ಕೋಟಿ ಅಥವಾ ಕಡೆಗೆ ಎರಡೂವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದ. ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ ಎಂದು ಸಂತ್ರಸ್ತನ ಬಗ್ಗೆ ಸೂರಜ್‌ ಆಪ್ತ ಶಿವಕುಮಾರ್ ಹೇಳಿದ್ದ. ಆದರೆ, ಇದೀಗ ಆತ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರ.

Continue Reading

ಪ್ರಮುಖ ಸುದ್ದಿ

Suraj Revanna Case: ಸೂರಜ್‌ ರೇವಣ್ಣ ಸಲಿಂಗ ಕಾಮ ಕೇಸ್‌ ಸಿಐಡಿಗೆ ವರ್ಗಾವಣೆ

Suraj Revanna Case: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ರಾತ್ರಿ ಸೂರಜ್‌ ರೇವಣ್ಣ ಎಫ್‌ಐಆರ್‌ ದಾಖಲಾಗಿತ್ತು. ಹೀಗಾಗಿ ವಿಚಾರಣೆ ನಡೆಸಿದ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Suraj Revanna Case
Koo

ಹಾಸನ: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷ್ಯ ನೀಡಲು ಪೊಲೀಸ್‌ ಠಾಣೆಗೆ ಹೋಗಿ ತಾವಾಗಿಯೇ ಎಂಎಲ್‌ಸಿ ಸೂರಜ್‌ ರೇವಣ್ಣ (Suraj Revanna Case) ಸಿಕ್ಕಿಬಿದ್ದಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ರಾತ್ರಿ ಕೇಸ್ ದಾಖಲಾದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್‌.ಹಿತೇಂದ್ರ ಎಡಿಜಿಪಿ ಆರ್ ಹಿತೇಂದ್ರ ಅವರು ಆದೇಶ ಹೊರಡಿಸಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 92/2024 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಖುದ್ದು ಸಿಐಡಿ ಕಚೇಇಗೆ ತೆರಳಿ ಕೇಸ್ ಫೈಲ್ ಅನ್ನು ಸಿಐಡಿಗೆ ಹಸ್ತಾಂತರ ಮಾಡುವಂತೆ ಹಾಸನ ಎಸ್‌ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಕೇಸ್ ಫೈಲ್ ಹಾಗೂ ಆರೋಪಿ ಸಮೇತ ಹೊಳೆನರಸೀಪುರ ಪೊಲೀಸರು ಮಧ್ಯಾಹ್ನದ ನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ | Suraj Revanna Case: ಸಾಕ್ಷಿ ನೀಡಲು ಠಾಣೆಗೆ ಬಂದು ಪೊಲೀಸ್‌ ಬಲೆಗೆ ಬಿದ್ದ ಸೂರಜ್‌ ರೇವಣ್ಣ

ಸೂರಜ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506, 34 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಡಿಜಿ ಕಚೇರಿಯಲ್ಲಿ ಜೂನ್‌ 21ರಂದು ಸಂತ್ರಸ್ತ ಹಾಗೂ ಜೆಡಿಎಸ್‌ ಕಾರ್ಯಕರ್ತ ದೂರು ನೀಡಿದ್ದರು. ಹಾಸನ ಎಸ್‌ಪಿಗೆ ದೂರಿನ ಪ್ರತಿ ಮೇಲ್ ಮಾಡಲಾಗಿತ್ತು. ಹೀಗಾಗಿ ಸಂತ್ರಸ್ತನನ್ನು ಕರೆಸಿ ಮಾಹಿತಿ ಪಡೆದ ಪೊಲೀಸರು ಜೂನ್ 22ರಂದು ರಾತ್ರಿ ಕೇಸ್ ದಾಖಲಿಸಿಕೊಂಡಿದ್ದರು. ನಂತರ ವಿಚಾರಣೆಗಾಗಿ ಸೂರಜ್‌ ರೇವಣ್ಣ ಠಾಣೆಗೆ ಆಗಮಿಸಿದ ವೇಳೆ ಅವರನ್ನು ಶನಿವಾರ ರಾತ್ರಿ ಅರೆಸ್ಟ್‌ ಮಾಡಲಾಗಿತ್ತು.

ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಾಕ್ಷಿ ನೀಡಲು ಸೂರಜ್ ಪೊಲೀಸ್‌ ಠಾಣೆಗೆ ತೆರಳಿದ್ದರು. ಆಡಿಯೊ ರೆಕಾರ್ಡ್, ಫೋಟೊ ಹಾಗೂ ಇತರ ದಾಖಲೆ ನೀಡುವ ಸಲುವಾಗಿ ಸೂರಜ್ ಹೋಗಿದ್ದರು. ಬಂಧನ ಸಾಧ್ಯತೆಯ ನಿರೀಕ್ಷೆ ಮಾಡದೆ ಹೋಗಿದ್ದ ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾನೂನು ತನಿಖೆ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಹಿರಿಯ ಮಗ ರೇವಣ್ಣ ಕುಟುಂಬಕ್ಕೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ರೇವಣ್ಣ ಹೊರಬಂದಿದ್ದಾರೆ. ಇದೇ ಸಂತ್ರಸ್ತೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸಿದ್ದರು. ಇದೀಗ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ಕೂಡ ಅರೆಸ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಸಂಕಷ್ಟ ಜೆಡಿಎಸ್‌ ನಾಯಕ ರೇವಣ್ಣ ಅವರನ್ನು ಹೈರಾಣ ಮಾಡಿದೆ.

ಏನಿದು ಪ್ರಕರಣ?

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದರು.

ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗ ಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯದಿಂದ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದ ಮೇಲೂ ಗಾಯವಾಗಿದೆ ಎಂದು ದೂರುದಾರ ಆರೋಪಿಸಿದ್ದರು.

ಇದನ್ನೂ ಓದಿ | Suraj Revanna Case: ಸೂರಜ್‌ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ; ದೂರು ಸಲ್ಲಿಸಿದ ವ್ಯಕ್ತಿ ವಿರುದ್ಧ ಎಫ್‌ಐಆರ್!

ಮತ್ತೊಂದೆಡೆ ದೂರು ನೀಡಿದ್ದ ವ್ಯಕ್ತಿ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

Continue Reading

ಕರ್ನಾಟಕ

Suraj Revanna Case: ಸಾಕ್ಷಿ ನೀಡಲು ಠಾಣೆಗೆ ಬಂದು ಪೊಲೀಸ್‌ ಬಲೆಗೆ ಬಿದ್ದ ಸೂರಜ್‌ ರೇವಣ್ಣ

Suraj Revanna Case: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅವರ ಸಹೋದರ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಸೂರಜ್‌ ರೇವಣ್ಣನ ಬಂಧನವಾಗಿದೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ದ ಆರೋಪದ ಮೇಲೆ ಹಾಸನದಲ್ಲಿ ಸೂರಜ್‌ನನ್ನು ಬಂಧಿಸಲಾಗಿದೆ. ಸಾಕ್ಷಿ ನೀಡಲು ಠಾಣೆಗೆ ಬಂದ ಅವರು ತಾವಾಗಿಯೇ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

VISTARANEWS.COM


on

Suraj Revanna Case
Koo

ಹಾಸನ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅವರ ಸಹೋದರ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಸೂರಜ್‌ ರೇವಣ್ಣ (Suraj Revanna Case)ನ ಬಂಧನವಾಗಿದೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (Unnatural sexual abuse)ದ ಆರೋಪದ ಮೇಲೆ ಹಾಸನದಲ್ಲಿ ಸೂರಜ್‌ನನ್ನು ಬಂಧಿಸಲಾಗಿದೆ. ಸಾಕ್ಷಿ ನೀಡಲು ಠಾಣೆಗೆ ಬಂದ ಅವರು ತಾವಾಗಿಯೇ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸೂರಜ್‌ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪಿಸಿ ಎಫ್‌ಐಆರ್‌ ದಾಖಲಿಸಿದ್ದರು. ಇತ್ತ ಸಂತ್ರಸ್ತ ದೂರು ದಾಖಲಿಸುತ್ತಿದ್ದಂತೆ ಆತನ ವಿರುದ್ಧವೇ ಸೂರಜ್‌ ಆಪ್ತರು ದೂರು ನೀಡಿದ್ದರು. ಸುಳ್ಳು ಆರೋಪ ಮಾಡಿ ಐದು ಕೋಟಿ ರೂ. ಹಣಕ್ಕಾಗಿ ಸಂತ್ರಸ್ತ ಪೀಡಿಸಿದ್ದಾನೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಾಕ್ಷಿ ನೀಡಲು ಸೂರಜ್ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಆಡಿಯೊ ರೆಕಾರ್ಡ್, ಫೋಟೊ ಹಾಗೂ ಇತರ ದಾಖಲೆ ನೀಡುವ ಸಲುವಾಗಿ ಸೂರಜ್ ಬಂದಿದ್ದರು. ಬಂಧನ ಸಾಧ್ಯತೆಯ ನಿರೀಕ್ಷೆ ಮಾಡದೆ ಬಂದ ಸೂರಜ್ ರೇವಣ್ಣ ಇದೀಗ ಅರೆಸ್ಟ್‌ ಆಗಿದ್ದಾರೆ. ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಜಾನೆ 4 ಗಂಟೆವರೆಗೂ ವಿಚಾರಣೆ

ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಬ್ಲ್ಯಾಕ್‌ಮೇಲ್‌ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆಯಿಂದ ಭಾನುವಾರ ಮುಂಜಾನೆ 4 ಗಂಟೆವರೆಗೂ ವಿಚಾರಣೆ ನಡೆಸಿದ ಬಳಿಕ ಸೂರಜ್‌ನನ್ನು ಬಂಧಿಸಲಾಗಿದೆ.

ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ

ಸೂರಜ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

ಕಾನೂನು ತನಿಖೆ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಹಿರಿಯ ಮಗ ರೇವಣ್ಣ ಕುಟುಂಬಕ್ಕೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ರೇವಣ್ಣ ಹೊರಬಂದಿದ್ದಾರೆ. ಇದೇ ಸಂತ್ರಸ್ತೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸಿದ್ದರು. ಇದೀಗ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ಕೂಡ ಅರೆಸ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಸಂಕಷ್ಟ ಜೆಡಿಎಸ್‌ ನಾಯಕ ರೇವಣ್ಣ ಅವರನ್ನು ಹೈರಾಣ ಮಾಡಿದೆ.

Continue Reading
Advertisement
Surrogacy Leaves
ಪ್ರಮುಖ ಸುದ್ದಿ8 mins ago

Surrogacy Leaves: ಬಾಡಿಗೆ ತಾಯ್ತನದ ನಿಯಮ ಬದಲಿಸಿದ ಕೇಂದ್ರ; ಇನ್ನು ಸಿಗಲಿದೆ 6 ತಿಂಗಳು ರಜೆ!

T20 world Cup 2024
ಕ್ರೀಡೆ44 mins ago

T20 World Cup 2024 : ಇಂಗ್ಲೆಂಡ್ ವಿರುದ್ಧ ಯುಎಸ್​​ಎ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

SBI
ದೇಶ55 mins ago

SBI: ನಿಮ್ಮೂರಿಗೂ ಬರಲಿದೆ ಎಸ್‌ಬಿಐ ಹೊಸ ಬ್ರ್ಯಾಂಚ್;‌ 400 ಶಾಖೆ ತೆರೆಯಲು ಬ್ಯಾಂಕ್‌ ನಿರ್ಧಾರ

IND vs SA
ಪ್ರಮುಖ ಸುದ್ದಿ1 hour ago

IND VS SA : ದಕ್ಷಿಣ ಆಫ್ರಿಕಾ ವಿರುದ್ಧ 3-0 ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರ ಕ್ರಿಕೆಟ್ ತಂಡ

T20 world cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಅಮೆರಿಕ ವಿರುದ್ಧವೂ ಸೋತ್ರಲ್ಲೋ… ಪಾಕ್​ ಪಾರ್ಲಿಮೆಂಟ್​ನಲ್ಲೂ ವಿಶ್ವ ಕಪ್ ಸೋಲಿನ ಚರ್ಚೆ!

Rahul Gandhi
ದೇಶ2 hours ago

Rahul Gandhi: ಎಲ್ಲರೂ ಬೈಯುವಾಗ ನೀವು ಪ್ರೀತಿ ಕೊಟ್ರಿ; ವಯನಾಡು ಜನತೆಗೆ ರಾಹುಲ್‌ ಗಾಂಧಿ ಭಾವುಕ ಪತ್ರ

Babar Azam
ಪ್ರಮುಖ ಸುದ್ದಿ3 hours ago

Babar Azam: ಮ್ಯಾಚ್​ ಫಿಕ್ಸಿಂಗ್ ಆರೋಪ ಮಾಡಿದವನ ಮೇಲೆ 1 ಕೋಟಿ ರೂ. ಮಾನನಷ್ಠ ಮೊಕದ್ದಮೆ ಹೂಡಿದ ಬಾಬರ್ ಅಜಮ್​

Abbi Falls
ಕರ್ನಾಟಕ3 hours ago

Abbi Falls: ಅಬ್ಬಿ ಫಾಲ್ಸ್ ಬಳಿ ಸೆಲ್ಫಿ ಕ್ರೇಜ್‌ಗೆ ಯುವಕ ಬಲಿ; ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಹಲ್ಲೆ

Shakib Al Hasan
ಪ್ರಮುಖ ಸುದ್ದಿ3 hours ago

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Vashu Bhagnani
ಸಿನಿಮಾ3 hours ago

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌