ಹಾಸನ: ಕೊಪ್ಪಲು ಗ್ರಾಮದಲ್ಲಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಹಾಸನದಲ್ಲಿ ನಡೆದಿದೆ. ಸೈನಿಕ ವಿನೋದ್ ಎಂಬುವರ ಪತ್ನಿ ಸೀಮಾ (38) ಹಾಗೂ ಪುತ್ರ ಮಯೂರ (10) ಮೃತಪಟ್ಟವರು.
ಮಗನನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಮಯೂರ ವ್ಯಾಸಂಗ ಮಾಡುತ್ತಿದ್ದನು.
ಮೃತರು ಮೂಲತಃ ಕೊಡಗು ಜಿಲ್ಲೆಯ ಶನಿವಾರಸಂತೆಯವರಾಗಿದ್ದು, ಮಗನ ವ್ಯಾಸಂಗಕ್ಕಾಗಿ ತಿಂಗಳ ಹಿಂದಷ್ಟೇ ಹಾಸನಕ್ಕೆ ಬಂದಿದ್ದರು. ಸೀಮಾ ಅವರ ಪತಿ ವಿನೋದ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಾರದ ಹಿಂದೆಯಷ್ಟೇ ಪತ್ನಿ – ಮಗನನ್ನು ನೋಡಿಕೊಂಡು ಹೋಗಿದ್ದರು. ಚಾಲಕನ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿ.ಕಾಟಿಹಳ್ಳಿ ಬಳಿ ಅರಸೀಕೆರೆ ಹಾಸನ ರಸ್ತೆಯಲ್ಲಿ ಪದೇಪದೆ ಅಪಘಾತ ಸಂಭವಿಸುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕಿದೆ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ| ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ, ಲಾರಿ-ಖಾಸಗಿ ಬಸ್ ಡಿಕ್ಕಿಯಾಗಿ 8 ಮಂದಿ ಸಾವು