ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನವವಿವಾಹಿತೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಮುದ್ರವಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕೆ.ಆರ್.ನಗರ ತಾಲ್ಲೂಕಿನ ಪಶುಪತಿ ಗ್ರಾಮದ ರೋಹಿಣಿ (23) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಏಳು ತಿಂಗಳು ಹಿಂದೆ ಸುಮಂತ್ ಎಂಬವವರ ಜೊತೆ ಇವರ ವಿವಾಹವಾಗಿತ್ತು. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೇಸತ್ತು ಕೆರೆಗೆ ಹಾರಿಕೊಂಡಿದ್ದಾರೆ ಎಂದು ಊಹಿಸಲಾಗಿದೆ.
ರೈಲಿನಲ್ಲಿ ಬಂದು ಸಮುದ್ರವಳ್ಳಿ ರೈಲ್ಬೆ ಸ್ಟೇಷನ್‌ನಲ್ಲಿ ಇಳಿದು ಕೆರೆ ಬಳಿ ಬಂದಿದ್ದ ರೋಹಿಣಿ, ಕೆರೆಯಲ್ಲಿ ಮಹಿಳೆಯರು ಬಟ್ಟೆ ಒಗೆಯುತ್ತಿದ್ದ ಕಾರಣ ಅವರನ್ನು ಮಾತನಾಡಿಸುತ್ತ ಕುಳಿತಿದ್ದು, ಸಂಬಂಧಿಕರ ಮನೆಗೆ ಬಂದಿದ್ದೇನೆ ಎಂದಿದ್ದರು. ಎಲ್ಲರೂ ತೆರಳಿದ ನಂತರ 1760 ರೂ., ಮೊಬೈಲ್, ಚಪ್ಪಲಿ ಬಿಟ್ಟು ಕೆರೆಗೆ ಹಾರಿಕೊಂಡಿದ್ದಾರೆ.
ರೋಹಿಣಿ ಕಾಣೆಯಾಗಿರುವ ಬಗ್ಗೆ ಕೆ.ಆರ್.ನಗರ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಟವರ್ ಲೊಕೇಷನ್ ಮೂಲಕ ರೋಹಿಣಿಯವರನ್ನು ಹುಡುಕಿಕೊಂಡ ಬಂದ ಪೊಲೀಸರು ಮೊಬೈಲ್, ದುಡ್ಡು, ಚಪ್ಪಲಿ ನೋಡಿ ಕೆರೆಯಲ್ಲಿ ಶೋಧ ನಡೆಸಿದ ವೇಳೆ ಶವ ಪತ್ತೆಯಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Suicide Case | ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೃಹಿಣಿ ಆತ್ಮಹತ್ಯೆ