Site icon Vistara News

ಹಾಸನ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್‌ ದಾಳಿ, ತಪಾಸಣೆ

police raid

ಹಾಸನ: ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಎ‌ಎಸ್‌ಪಿ ತಮ್ಮಯ್ಯ, ಡಿವೈ‌ಎಸ್‌ಪಿ ಉದಯ್‌ಭಾಸ್ಕರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಿಚಾರಣಾಧೀನ ಖೈದಿಗಳ ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಎಂಬತ್ತಕ್ಕು ಹೆಚ್ಚು ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ವಿಚಾರಣಾಧೀನ ಖೈದಿಗಳು ಜೈಲಿನೊಳಗೆ ಫೋನ್ ಬಳಕೆ ಮಾಡುತ್ತಿರುವುದು ಹಾಗೂ ಮಾದಕ ವಸ್ತುಗಳನ್ನು ‌ಸೇವಿಸುತ್ತಿರುವ ಕುರಿತು ಮಾಹಿತಿ ಪಡೆದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ |ಒಂದು ದೇಶ ಒಂದು ಪೊಲೀಸ್‌ ಸಮವಸ್ತ್ರಕ್ಕೆ ಕರ್ನಾಟಕ ಒಪ್ಪಿಗೆ: ಕೇಂದ್ರದ ಪ್ರಸ್ತಾವನೆಗೆ ಓಕೆ ಎಂದ ಗೃಹ ಇಲಾಖೆ

Exit mobile version