Site icon Vistara News

ಪ್ರಶಾಂತ್‌ ಹತ್ಯೆ: ಐವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ ಸಿಐಡಿ ಟೀಮ್

ಪ್ರಶಾಂತ್‌ ಹತ್ಯೆ

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಪೂರ್ಣಚಂದ್ರ ಸೇರಿದಂತೆ ಐವರು ಆರೋಪಿಗಳನ್ನು ಸಿಐಡಿ ತಂಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ  ಅನೇಕ‌ ತಂಡಗಳನ್ನು ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು  ಬಂಧಿಸಲಾಗಿತ್ತು. ಇದೀಗ ಹತ್ಯೆ ಕೇಸನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಎಸ್ಪಿ‌ ಶ್ರೀನಿವಾಸ ಗೌಡ ಹೇಳಿಕೆ ಹೇಳಿದ್ದರು.

ಇದನ್ನೂ ಓದಿ | ಪ್ರಶಾಂತ್‌ ಹತ್ಯೆ: ಸಚಿವರು ಹೇಳಿದ್ದೇ ಒಂದು, ಪೊಲೀಸರು ಹೇಳಿದ್ದು ಮತ್ತೊಂದು

ಶುಕ್ರವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ʼʼತನಿಖೆ ಬಗ್ಗೆ ಹಲವಾರು‌ ಆರೋಪಗಳು ಕೇಳಿ ಬಂದಿದ್ದವು. ಪೊಲೀಸ್‌ ಅಧಿಕಾರಿಗಳ ಮೇಲೆಯೇ ಆರೋಪ ಮಾಡಲಾಗಿತ್ತು. ಹೀಗಾಗಿ ನಿಸ್ಪಕ್ಷಪಾತ ತನಿಖೆಗೆ  ದೂರು ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಮುಂದುವರಿಸುತ್ತಾರೆ. ಮುಂದೆ ಅವರೇ ಚಾರ್ಜ್‌ಶೀಟ್  ಸಲ್ಲಿಸುತ್ತಾರೆ. ಈಗಾಗಲೇ ಎಲ್ಲ ಪ್ರಮುಖ ಆರೋಪಿಗಳ ಬಂಧನವಾಗಿದೆʼʼ ಎಂದಿದ್ದರು.

ʼʼಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಿಂದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಮುಖ ಆರೋಪಿಗಳ ನಡುವಿನ ವೈಯಕ್ತಿಕ ಕಾರಣಕ್ಕೆ ಈ ಹತ್ಯೆ ನಡೆದಿದೆ. ಪ್ರಶಾಂತ್ ಹಾಗೂ ಆರೋಪಿಗಳೆಲ್ಲರೂ ಒಬ್ಬರಿಗೊಬ್ಬರು ಪರಿಚಯಸ್ಥರು. ಎಲ್ಲರೂ ರಾಜಕೀಯವಾಗಿ‌ ತೊಡಗಿಸಿಕೊಂಡಿದ್ದರು. ಅವರ ಮಧ್ಯೆ ಹಲವಾರು ವಿಷಯಗಳಿಗೆ ಸಂಬಂಧಿಸಿ ಜಗಳವಿತ್ತು. ಹಲವಾರು ಭಿನ್ನಾಭಿಪ್ರಾಯಗಳಿದ್ದವು. ಹಣಾಕಾಸು, ಜಮೀನು, ರಾಜಕೀಯ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆʼʼ ಎಂದು ಅವರು ವಿವರಣೆ ನೀಡಿದ್ದದರು.

ಇದನ್ನೂ ಓದಿ | ಲಾಡ್ಜ್‌ನಲ್ಲಿ ಪಾರ್ಟಿ ಮಾಡ್ತಾ ಪ್ರಶಾಂತ್‌ ಹತ್ಯೆಗೆ ಸ್ಕೆಚ್‌! ಪೊಲೀಸರು ಲಾಡ್ಜ್‌ ಪರಿಶೀಲಿಸಿದಾಗ ಗೊತ್ತಾಗಿದ್ದೇನು?

Exit mobile version