Site icon Vistara News

Rain News | ಹಾಸನದಲ್ಲಿ ಕಾಂಪೌಂಡ್‌ ಕುಸಿದು ಬೀದಿ ಬದಿ ವ್ಯಾಪಾರಿ ದಾರುಣ ಮೃತ್ಯು

compound collapse hassan

ಹಾಸನ: ಇಲ್ಲಿನ ಹರ್ಷಾ ಮಹಲ್‌ ರಸ್ತೆಯಲ್ಲಿ ಗುರುವಾರ ರಾತ್ರಿ ಕಾಂಪೌಂಡ್‌ ಕುಸಿದು ಬೀದಿ ಬದಿ ವ್ಯಾಪಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ರಾತ್ರಿ ಸುರಿದ ಮಳೆ ಆರ್ಭಟಕ್ಕೆ ಆವರಣ ಗೋಡೆ ಕುಸಿದಿದೆ. ಅದು ಗೋಟೆಯ ಆಚೆಗೆ ಮಲಸಗಿದ್ದ ಲೋಕೇಶ್‌ ಎಂಬವರ ಮೇಲೆ ಬಿದ್ದು ಅವರು ಜೀವಂತ ಸಮಾಧಿಯಾಗಿದ್ದಾರೆ.

ವಲ್ಲಭಾಯಿ ರಸ್ತೆಯಲ್ಲಿ ಹೇರ್ ಪಿನ್ ಮತ್ತು ಕ್ಲಿಪ್ ಮಾರಾಟ ಮಾಡುತ್ತಿದ್ದ ಲೋಕೇಶ್ (೫೦) ಅವರು ನಿರ್ಗತಿಕರಾಗಿದ್ದು, ಅವರಿಗೆ ಯಾವುದೇ ವಸತಿ ಇಲ್ಲ. ಹೀಗಾಗಿ ಅವರು ಸಾರ್ವಜನಿಕ ಜಾಗದಲ್ಲಿ ಆಶ್ರಯ ಪಡೆಯುತ್ತಿದ್ದರು. ಗುರುವಾರವೂ ಅವರು ಹರ್ಷಾ ಮಹಲ್‌ ಸಮೀಪದ ಈ ಆವರಣ ಗೋಡೆಯ ಪಕ್ಕದಲ್ಲಿ ಮಲಗಿದ್ದರು.

ಗುರುವಾರ ಸುರಿದ ಮಳೆಗೆ ಗೋಡೆ ಕುಸಿದು ಅವರ ಮೇಲೆಯೇ ಬಿದ್ದಿದೆ. ದೊಡ್ಡ ಪ್ರಮಾಣದಲ್ಲಿ ಮಣ್ಣು ಮತ್ತು ಕಲ್ಲು ಬಿದ್ದಿದ್ದರಿಂದ ಅವರು ಅಲ್ಲೇ ಸಮಾಧಿಯಾಗಿದ್ದಾರೆ. ನಿಜವೆಂದರೆ ಅವರು ಮೃತಪಟ್ಟಿರುವುದು ಮೊದಲು ಗೊತ್ತಾಗಿರಲಿಲ್ಲ. ಬೆಳಗ್ಗೆ ಕಾಂಪೌಂಡ್ ಮಣ್ಣಿನಡಿ ಟಾರ್ಪಲ್‌ ಕಂಡು ಅನುನಾನದಿಂದ‌ ಪರಿಶೀಲನೆ ನಡೆಸಿದಾಗ ಲೋಕೇಶ್‌ ಅವರ ಶವ ಸಿಕ್ಕಿತು. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Rain News | ಅಣ್ಣನೊಂದಿಗೆ ಶಾಲೆಗೆ ಬೈಕ್‌ನಲ್ಲಿ ಹೊರಟ್ಟಿದ್ದವಳು ಹಳ್ಳದಲ್ಲಿ ಕೊಚ್ಚಿಹೋದಳು

Exit mobile version