Site icon Vistara News

Road Accident : ಅರಕಲಗೂಡಿನಲ್ಲಿ ಭೀಕರ ಅಪಘಾತ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

Two Dead two others injured in accident in Arakalagud

ಹಾಸನ: ಹಾಸನದ ಅರಕಲಗೂಡು ತಾಲೂಕಿನಲ್ಲಿ (Arakalagud Accident) ಗುರುವಾರ ಮುಂಜಾನೆ ಪ್ರತ್ಯೇಕ ಅಪಘಾತ ನಡೆದಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟರೆ, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.

ಅರಕಲಗೂಡು ಪಟ್ಟಣದ ಸಾರಿಗೆ ಬಸ್ ಡಿಪೋ ಹಿಂಭಾಗ ನಿಂತಿದ್ದ ಐಚರ್ ವಾಹನಕ್ಕೆ ಓಮಿನಿ ಕಾರು ಡಿಕ್ಕಿ ಹೊಡೆದಿದೆ. ಕಾರು ಚಲಾಯಿಸುತ್ತಿದ್ದ ಹೂವಿನ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜೇಗೌಡ (38) ಮೃತ ದುರ್ದೈವಿ. ಮಂಜೇಗೌಡ ಪತ್ನಿ ಅನಸೂಯ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಮಂಜೇಗೌಡ ಅವರು ಅರಕಲಗೂಡು ಪಟ್ಟಣದ ವಿನಾಯಕ ನಗರ ನಿವಾಸಿ ಆಗಿದ್ದಾರೆ.

ಇನ್ನು ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳು ಅನಸೂಯ ಅವರನ್ನು ಅರಕಲಗೂಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಬೈಕ್‌ ಡಿಕ್ಕಿ, ಸವಾರ ಸಾವು

ಅರಕಲಗೂಡು ತಾಲೂಕಿನ ಮೊಕಲಿ ಗ್ರಾಮದ ಬಳಿ ಬೈಕ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಸವಾರ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೊಕಲಿ ಗ್ರಾಮದ ಚಿದಾನಂದ (50) ಸ್ಥಳದಲ್ಲೇ ಮೃತಪಟ್ಟರೆ, ತೇಜೂರು ಗ್ರಾಮದ ಚಂದನ್‌ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.

ಮನೆ ಬಳಿ ಬಂದಿದ್ದ ನಾಯಿ ಮರಿಯನ್ನು ಊರಿನಿಂದ ಹೊರಗೆ ಬಿಟ್ಟು ವಾಪಾಸ್ ಆಗುವಾಗ ಈ ಅಪಘಾತ ನಡೆದಿದೆ. ನಾಯಮರಿ ಬಿಟ್ಟು ಬೈಕ್ ಹತ್ತಿದ ವೇಳೆ ಹಿಂಬದಿಯಿಂದ ಬಂದ ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಚಿಂದಾನಂದ ಬೈಕ್‌ಗೆ ಹಿಂಬದಿಯಿಂದ ಚಂದನ್ ಬೈಕ್‌ ಡಿಕ್ಕಿ ಆಗಿದೆ. ಗಾಯಾಳು ಚಂದನ್‌ಗೆ ಅರಕಲಗೂಡು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರತ್ಯೇಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

BMTC ಬಳಿಕ ಈಗ KSRTC ಸರದಿ; ಬಸ್‌ ಧಾವಂತಕ್ಕೆ ಬೈಕ್‌ ಸವಾರ ದಾರುಣ ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳ ಅಬ್ಬರಕ್ಕೆ ಆಗಾಗ ಪ್ರಾಣ ಹೋಗುವುದು ನಡೆಯುತ್ತಿದೆ. ಇದೀಗ ಕಿಲ್ಲರ್ ಬಿಎಂಟಿಸಿ ನಂತರ ಕೆಎಸ್ಆ‌ರ್‌ಟಿಸಿ ಸರದಿ ಕಾಣಿಸಿಕೊಂಡಿದೆ. ಬೆಂಗಳೂರಿನ (Bangalore News) ಯಶವಂತ ಪುರ ಮೆಟ್ರೋ ಸ್ಟೇಷನ್ ಬಳಿ ಬೆಳಗ್ಗೆ 10.30ಕ್ಕೆ ನಡೆದ ಅಪಘಾತದಲ್ಲಿ (Road Accident) ಕೆಎಸ್‌ಆರ್‌ಟಿಸಿ ಬಸ್ಸಿಗೆ (KSRTC Bus accident) ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ನಾಗಸಂದ್ರ ನಿವಾಸಿ ರಾಜೇಂದ್ರ (45) ಅವರು ಬೈಕ್‌ನಲ್ಲಿ ಬರುವ ವೇಳೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜೇಂದ್ರ ಅವರು ಎಡಬದಿಯಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದರು. ಆಗ ಬಲಭಾಗದಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ರಾಜೇಂದ್ರ ಅವರು ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬಸ್‌ನ ಚಕ್ರ ರಾಜೇಂದ್ರ ಅವರ ತಲೆ ಮೇಲೆ ಬಸ್ ಹರಿದ ಹಿನ್ನಲೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Road Accident : ಕೆಎಸ್ ಆರ್ ಟಿಸಿ ಬಸ್ ಚಾಲಕನ ತಪ್ಪಿಲ್ಲ ಎಂದ ಸಾರ್ವಜನಿಕರು

ಈ ನಡುವೆ, ಘಟನೆಯಲ್ಲಿ ಬಸ್‌ ಚಾಲಕನ ತಪ್ಪಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದ್ವಿಚಕ್ರ ವಾಹನ ಸವಾರ ಬಸ್ಸಿನ ಎಡಭಾಗಕ್ಕೆ ಬಂದಿದ್ದ. ಬೈಕ್‌ನ ಮಿರರ್‌ ತಾಗಿ ಕೆಳಗೆ ಬಿದ್ದ ವೇಳೆ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಸ್‌ನ ಚಾಲಕ ಎಲ್ಲೂ ಪರಾರಿಯಾಗದೆ ಸ್ಥಳದಲ್ಲೇ ನಿಂತು ಕಣ್ಣೀರು ಹಾಕಿದ್ದರು. ಸ್ಚಲ್ಪ ಜೀವ ಇದ್ದರೂ ಕೂಡ ನಾವು ಅವರನ್ನ ಬಚಾವು ಮಾಡುತ್ತಿದ್ದೆವು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಹೇಳಿದ್ದಾರೆ.

ಇದನ್ನೂ ಓದಿ : Road Accident : ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಪಶ್ಚಾತ್ತಾಪದಿಂದ ಆತ್ಮಹತ್ಯೆ

ಬಸ್‌ ಚಾಲಕ ವಶಕ್ಕೆ: ಡಿಸಿಪಿ ಸಿರಿಗೌರಿ ಹೇಳಿಕೆ

ʻʻಇವತ್ತು ಬೆಳಗ್ಗೆ 10.30ರ ಸುಮಾರಿಗೆ ಮೆಟ್ರೋ ನಿಲ್ದಾಣದ ಕೆಳಗೆ ಘಟನೆ ನಡೆದಿದೆ. 45 ವರ್ಷದ ರಾಜೇಂದ್ರ ಎಂಬವರು ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಜಿಎಸ್ ಟಿ ಆಫೀಸ್‌ಗೆ ಹೋಗುವಾಗ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಆಗಿದೆ. ಬೈಕ್‌ನ ಮಿರರ್ ಬಸ್‌ಗೆ ಟಚ್ ಆಗಿ ಅಪಘಾತ ಉಂಟಾಗಿದೆ.. ಈ ವೇಳೆ ಘಟನಾ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆʼʼ ಎಂದು ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸಿರಿಗೌರಿ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version