ಹಾಸನ: ದ್ವಿತೀಯ ದರ್ಜೆ ಸಹಾಯಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಹಾಸನದ ವಿಜಯನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಅರುಣ್ (28) ಆತ್ಮಹತ್ಯೆಗೆ ಶರಣಾದವರು.
ಆಲೂರು ತಾಲೂಕು ಕಚೇರಿಯಲ್ಲಿ ಎಸ್‌ಡಿಎ ಆಗಿದ್ದ ಅರುಣ್ ಮೂಲತಃ ಬೇಲೂರು ಮೂಲದವರು. ವಿಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅರುಣ್ ತಾಯಿ ಸರ್ಕಾರಿ ನೌಕರರಾಗಿದ್ದರಿಂದ ಅಸುನೀಗಿದ ಬಳಿಕ ಅವರ ಕೆಲಸ ಅರುಣ್‌ಗೆ ಸಿಕ್ಕಿತ್ತು.
ಅರುಣ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!
ತುಮಕೂರಲ್ಲಿ ಗರ್ಭಿಣಿ ಅನುಮಾನಾಸ್ಪದ ಸಾವು
ತುಮಕೂರು/ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದ ರೀತಿಯಲ್ಲಿ (Self Harming) ಮೃತಪಟ್ಟಿದ್ದಾಳೆ. ತುಮಕೂರಿನ ತಿಪಟೂರಿನ ಮೂಡಲ್ ಕೊಪ್ಪಲು ಗ್ರಾಮದಲ್ಲಿ ಘಟನೆ ನSಡೆದಿದೆ. ಸೌಮ್ಯ (22) ಮೃತ ದುರ್ದೈವಿ.
ಚಿಕ್ಕನಾಯಕನಹಳ್ಳಿ ತಾಲೂಕಿನ ಬೊಮ್ಮೇನಹಳ್ಳಿ ಮೂಲದ ಸೌಮ್ಯ ವಯಸ್ಸಿನಲ್ಲಿ ತನಗಿಂತಲೂ 18 ವರ್ಷ ದೊಡ್ಡವನಾದ ಪ್ರಸಾದ್ (40) ಎಂಬುವವರ ಜತೆಗೆ ಮದುವೆಯಾಗಿದ್ದಳು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಕುಟುಂಬಸ್ಥರು ರಾಜಿ ಪಂಚಾಯಿತಿಯನ್ನು ಮಾಡಿದ್ದರು.
ಆದರೆ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಸೌಮ್ಯಳ ಮೃತದೇಹವು ಪತ್ತೆಯಾಗಿದೆ. ಇತ್ತ ಸೌಮ್ಯಳ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕಳೆದ ರಾತ್ರಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಸೌಮ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸೌಮ್ಯಳ ಪತಿ ಪ್ರಸಾದ್ ಹಾಗೂ ಮಾವನ ವಿರುದ್ಧ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ತಿಪಟೂರಿನ ಶವಾಗಾರಕ್ಕೆ ಸೌಮ್ಯ ಮೃತದೇಹವನ್ನು ರವಾನೆ ಮಾಡಲಾಗಿದೆ. ನೋಣವಿನಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: Murder Case : ಮತ್ತೊಬ್ಬನ ಮೋಹಕ್ಕೆ ಸಿಲುಕಿ ಗಂಡನ ಕೊಂದಳು ಮೂರು ಮಕ್ಕಳ ತಾಯಿ
ಕಟ್ಟಡದಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಪಿಜಿಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಬನ್ನೆರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ಬಳಿಯ ಸೆಂಟ್ರಲ್ ಎಕ್ಸೈಸ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನೇಪಾಳ ಮೂಲದ ಬಿಕ್ರಮ್ (22) ಮೃತಪಟ್ಟವನು.
ಬಿಕ್ರಮ್ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿ ಆಗಿದ್ದ ಬಿಕ್ರಮ್, ರಾತ್ರಿ ಕುಡಿದು ಬಂದು ಪತ್ನಿ ಜತೆ ಜಗಳವಾಡಿದ್ದಾನೆ. ನಂತರ ಪತ್ನಿ ನಿದ್ರೆಗೆ ಜಾರಿದಾಗ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ